ಮಕ್ಕಾದಲ್ಲಿ ಮಾಂಸ ಹಾಗೂ ಮದ್ಯದ ಮೇಲೆ ನಿರ್ಬಂಧವಿದ್ದರೆ ಪರವಾಗಿಲ್ಲ; ಆದರೆ ಮಥುರೆಯಲ್ಲಿ ನಡೆಯುವುದಿಲ್ಲ ! ಎಂದು ಮತಾಂಧರ ಕಿವಿ ಹಿಂಡಿದ ಮಾನವಾಧಿಕಾರ ಕಾರ್ಯಕರ್ತೆ ಅರಿಫ ಅಜಾಕಿಯಾ !

ಉತ್ತರಪ್ರದೇಶದಲ್ಲಿನ ಭಾಜಪ ಸರಕಾರವು ಮಥುರೆಯಲ್ಲಿ ಮಾಂಸ ಹಾಗೂ ಮದ್ಯದ ವಿತರಣೆಯ ಮೇಲೆ ನಿರ್ಬಂಧ ಹೇರಿರುವ ಪ್ರಕರಣ

ಲಂಡನ್‍ನಲ್ಲಿ ವಾಸಿಸುವ ಪಾಕಿಸ್ತಾನಿ ವಂಶದ ಮಾನವಾಧಿಕಾರ ಕಾರ್ಯಕರ್ತೆಗೆ ತಿಳಿದ ವಿಷಯವು, ಭಾರತದ ಮಾನವಾಧಿಕಾರಿಗಳಿಗೆ ಏಕೆ ಗೊತ್ತಾಗುವುದಿಲ್ಲ?’- ಸಂಪಾದಕರು

ಅರಿಫ ಅಜಾಕಿಯಾ

ನವ ದೆಹಲಿ – ಮಕ್ಕಾದಲ್ಲಿ ಸಿಗರೆಟ ಮಾರಾಟಕ್ಕೆ ಅನುಮತಿಯಿಲ್ಲ. 56 ಇಸ್ಲಾಮಿ ದೇಶಗಳಲ್ಲಿ ಹಾಲಲ (ಹಲಾಲ ಪದ್ಧತಿಯಂತೆ ಮಾಂಸಕ್ಕಾಗಿ ಪ್ರಾಣಿಗಳ ಕತ್ತಿನ ನರವನ್ನು ಸೀಳಿ ಅದನ್ನು ಬಿಟ್ಟು ಬಿಡುತ್ತಾರೆ. ಅದರಿಂದ ದೊಡ್ಡ ಪ್ರಮಾಣದಲ್ಲಿ ರಕ್ತ ಹರಿಯುತ್ತದೆ ಹಾಗೂ ಅನಂತರ ಅದು ಒದ್ದಾಡಿ ಅದರ ಮೃತ್ಯುವಾಗುತ್ತದೆ. ಆ ಪ್ರಾಣಿಗಳನ್ನು ಬಲಿ ನೀಡುವಾಗ ಅದರ ಮುಖವನ್ನು ಮಕಾದ ದಿಕ್ಕಿಗೆ ಇಡಲಾಗುತ್ತದೆ.) ಮಾಂಸ ಬಿಟ್ಟು ಬೇರೆ ಯಾವುದೇ ಮಾಂಸಕ್ಕೆ ಅನುಮತಿಯಿಲ್ಲ. ಹಲವಾರು ಇಸ್ಲಾಮಿ ದೇಶಗಳಲ್ಲಿ ಮದ್ಯಕ್ಕೆ ಅನುಮತಿಯಿಲ್ಲ; ಆದರೆ ಮಥುರೆಯ ಪ್ರಶ್ನೆ ಬಂದಾಗ ಮಾತ್ರ ಅದನ್ನು ವಿರೋಧಿಸಲಾಗುತ್ತದೆ, ಎಂದು ಲಂಡನ್‍ನಲ್ಲಿನ ಪಾಕಿಸ್ತಾನಿ ವಂಶದ ಮಾನವಾಧಿಕಾರ ಕಾರ್ಯಕರ್ತೆ ಅರಿಫ ಅಜಾಕಿಯಾರವರು ಟ್ವೀಟ್ ಮಾಡಿದ್ದಾರೆ. ಉತ್ತರಪ್ರದೇಶ ಸರಕಾರವು ಮಥುರೆಯಲ್ಲಿ ಮಾಂಸ ಹಾಗೂ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಿದೆ. ಅದಕ್ಕೆ ಮುಸಲ್ಮಾನ ಸಂಘಟನೆ ಹಾಗೂ ಮುಖಂಡರಿಂದ ವಿರೋಧಿಸಲಾಗುತ್ತದೆ. ಆ ಬಗ್ಗೆ ಅಜಾಕಿಯಾರವರು ಪ್ರತಿಕ್ರಿಯೆ ವ್ಯಕ್ತ ಪಡಿಸುವಾಗ ಈ ರೀತಿ ಟ್ವಿಟ್ ಮಾಡಿದರು.