ಸಿಖ್ ಹಾಗೂ ಹಿಂದೂಗಳಿಗೆ ಸಂರಕ್ಷಣೆ ನೀಡುವೆವು !
ತಾಲಿಬಾನಿಗಳ ಮಾನಸಿಕತೆ, ಅದರ ಇತಿಹಾಸ ಹಾಗೂ ಪಾಕ್‍ನ ಪ್ರಚೋದನೆ ಹೀಗೆಲ್ಲಾ ಇರುವಾಗ ಅವರ ಮಾತಿನ ಮೇಲೆ ಹೇಗೆ ವಿಶ್ವಾಸವಿಟ್ಟುಕೊಳ್ಳುವುದು? ಸ್ವತಃ ತಮ್ಮ ತಂದೆಯನ್ನು ಹಾಗೂ ಸಹೋದರನನ್ನು ಕೊಲ್ಲುವ ಮೊಗಲ್ ಮಾನಸಿಕತೆಯಿರುವ ಜಿಹಾದಿಗಳ ಮೇಲೆ ವಿಶ್ವಾಸವಿಡುವ ಮೂರ್ಖತನವನ್ನು ಭಾರತವು ಎಂದಿಗೂ ಮಾಡುವುದಿಲ್ಲ ! – ಸಂಪಾದಕರು
ಕಾಬೂಲ (ಅಫಘಾನಿಸ್ತಾನ) – ಕಾಶ್ಮೀರದ ಸಮಸ್ಯೆಯಲ್ಲಿ ತಾಲಿಬಾನ್ ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ. ಕಾಶ್ಮೀರ ಸಮಸ್ಯೆಯಲ್ಲಿ ನಮಗೆ ಹಸ್ತಕ್ಷೇಪ ಮಾಡಲು ಯಾವತ್ತೂ ಇಚ್ಛೆಯಿರಲಿಲ್ಲ. ಅದು ನಮ್ಮ ಧೋರಣೆಯಲ್ಲ. ಆದ್ದರಿಂದ ಅದರ ವಿರುದ್ಧವಾಗಿ ಹೋಗಿ ತಾಲಿಬಾನಿಗಳು ಯಾವುದಾದರೂ ಕೃತ್ಯ ಮಾಡುವುದು ಸಾಧ್ಯವಿಲ್ಲ. ನಮಗೆ ಭಾರತದೊಂದಿಗೆ ಉತ್ತಮವಾದ ಸಂಬಂಧವನ್ನು ನಿರ್ಮಿಸಬೇಕಾಗಿದೆ. ಅಫಘಾನಿಸ್ತಾನದಲ್ಲಿ ಸಿಖ್ ಹಾಗೂ ಹಿಂದೂಗಳಿಗೆ ತಾಲಿಬಾನಿಗಳು ಯಾವುದೇ ರೀತಿಯಲ್ಲಿ ಘಾಸಿಗೊಳಿಸುವುದಿಲ್ಲ. ಅವರಿಗೆ ಸಂಪೂರ್ಣ ಸಂರಕ್ಷಣೆ ನೀಡಲಾಗುವುದು, ಎಂದು ತಾಲಿಬಾನಿ ಮುಖಂಡರಾದ ಅನಾಸ ಹಕ್ಕಾನಿಯವರು ನುಡಿದಿದ್ದಾರೆ. ಅನಾಸರವರ ಸಂಬಂಧಿಕರಾದ ಸಿರಾಜುದ್ದೀನರವರು ‘ಹಕ್ಕಾನೀ ನೆಟವರ್ಕ್’ ಎಂಬ ಉಗ್ರಗಾಮಿ ಸಂಘಟನೆಯ ಪ್ರಮುಖರಾಗಿದ್ದಾರೆ.
Anas Haqqani, the Taliban leader and scion of Afghanistan’s feared Haqqani Network, has called for an amicable relationship with India and pledged not to interfere in the Kashmir issuehttps://t.co/SWUy0V3Nr0
— WION (@WIONews) September 1, 2021
ಅನಾಸ ಹಕ್ಕಾನಿಯವರು ಮುಂದೆ, ಯಾವುದೇ ರೀತಿಯ ಚರ್ಚೆ ನಡೆಸಲು ಸಿದ್ಧರಾಗಿದ್ದೇವೆ. ಅಫಘಾನಿಸ್ತಾನವನ್ನು ನಾವು ಪರಕೀಯರಿಂದ ಮುಕ್ತಗೊಳಿಸಲು ನಾವು 20 ವರ್ಷಗಳಿಂದ ಸಂಘರ್ಷ ಮಾಡುತ್ತಿದ್ದೇವೆ; ಆದರೆ ಜಗತ್ತಿನಾದ್ಯಂತ ವಿಶೇಷವಾಗಿ ಭಾರತದಲ್ಲಿನ ಪ್ರಚಾರಮಾಧ್ಯಮಗಳು ತಾಲಿಬಾನಿನ ವಿಷಯದಲ್ಲಿ ಅತ್ಯಂತ ನಕಾರಾತ್ಮಕ ಪದ್ಧತಿಯಲ್ಲಿ ಲೇಖನ ಬರೆಯುತ್ತಿವೆ ಎಂದು ಹೇಳಿದರು.
‘ಪಾಕ್‍ನ ಶಸ್ತ್ರಗಳ ಬಳಕೆಯಿಲ್ಲ (ಅಂತೆ)!’
ಅಫಘಾನಿಸ್ತಾನದಲ್ಲಿ ತಾಲಿಬಾನಿಗಳು ನೀಡುತ್ತಿರುವ ಹೋರಾಟದಲ್ಲಿ ಪಾಕಿಸ್ತಾನದಲ್ಲಿ ತಯಾರಿಸಲಾದ ಒಂದು ಶಸ್ತ್ರವನ್ನು ಉಪಯೋಗಿಸಿಲ್ಲ, ಎಂದು ಹಕ್ಕಾನಿಯವರು ದಾವೆ ಮಾಡಿದರು. (ಇದನ್ನು ನಂಬುವವರು ಯಾರು ? – ಸಂಪಾದಕರು)