ಕಾಶ್ಮೀರವನ್ನು ಇಸ್ಲಾಂನ ಶತ್ರುಗಳಿಂದ ಮುಕ್ತಗೊಳಿಸಿ ! – ಆಲ್ ಕಾಯದಾದಿಂದ ತಾಲಿಬಾನಿಗೆ ಕರೆ

  • ಭಯೋತ್ಪಾದಕರು ಮತ್ತು ಅವರ ಸಂಘಟನೆಗಳಿಗೆ ಧರ್ಮವಿದೆ ಮತ್ತು ಅದರಿಂದಾಗಿಯೇ ಅವರು ಇಸ್ಲಾಂಗಾಗಿ ಒಗ್ಗೂಡುತ್ತಾರೆ ಎಂಬುದು ಈ ಕರೆಯಿಂದ ಸ್ಪಷ್ಟವಾಗುತ್ತದೆ. ಇಂತಹ ಭಯೋತ್ಪಾದಕರನ್ನು ತಡೆಯಲು ಹಿಂದೂರಾಷ್ಟ್ರದ ಸ್ಥಾಪನೆಯು ಅನಿವಾರ್ಯವಾಗಿದೆ!
  • ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಆದುದರಿಂದ ಇಂತಹ ಎಷ್ಟೇ ಇಸ್ಲಾಮಿ ಭಯೋತ್ಪಾದಕ ಸಂಘಟನೆಗಳು ಒಗ್ಗಟ್ಟಾದರೂ ಅವರಿಗೆ ಅದು ಎಂದಿಗೂ ಸಿಗುವುದಿಲ್ಲ ಎಂಬುದನ್ನು ಭಾರತವು ಸ್ಪಷ್ಟವಾಗಿ ಹೇಳಬೇಕಿದೆ !

ಅಲ್ಲಾನ ಸಹಾಯದಿಂದಾಗಿಯೇ ವಿಜಯ !

ಯಾವುದೇ ವಿಷಯದಲ್ಲಿ ವಿಜಯಿಯಾದಾಗ ಹೀಗೆ ಎಷ್ಟು ಹಿಂದೂಗಳು ಹೇಳುತ್ತಾರೆ ? ಕೆಲವು ಹಿಂದೂಗಳು ಈ ರೀತಿಯಲ್ಲಿ ದೇವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರೂ ಜಾತ್ಯಾತೀತ ಭಾರತದಲ್ಲಿ ಅದು ಕೂಡ ಧರ್ಮಾಂಧತೆಯಾಗುತ್ತದೆ, ಎಂಬುದನ್ನು ಗಮನದಲ್ಲಿಡಿ !

ಕಾಬುಲ (ಅಫಘಾನಿಸ್ತಾನ) – ಅಫಘಾನಿಸ್ತಾನದಿಂದ ಅಮೇರಿಕಾದ ಸೈನ್ಯವು ಪೂರ್ಣ ರೀತಿಯಲ್ಲಿ ಹಿಂತಿರುಗಿದ ನಂತರ ಜಿಹಾದಿ ಭಯೋತ್ಪಾದಕ ಸಂಘಟನೆಯಾದ ಆಲ್ ಕಾಯದಾವು ತಾಲಿಬಾನಿಗೆ ಶುಭಾಶಯ ನೀಡಿದೆ. ಹಾಗೆಯೇ ಕಾಶ್ಮೀರದೊಂದಿಗೆ ಇತರ ಇಸ್ಲಾಮೀ ಭೂಮಿಯನ್ನು ಇಸ್ಲಾಂನ ಶತ್ರುಗಳಿಂದ ಮುಕ್ತಗೊಳಿಸಲು ಕರೆ ನೀಡಿದೆ.

ತಾಲಿಬಾನ್ ಗೆ ನೀಡಿರುವ ಸಂದೇಶದ ಶೀರ್ಷಿಕೆಯಲ್ಲಿ ‘ಅಪಘಾನಿಸ್ತಾನದಲ್ಲಿನ ಇಸ್ಲಾಮಿ ಸಮಾಜಕ್ಕೆ ಅಲ್ಲಾಹನು ನೀಡಿರುವ ಸ್ವಾತಂತ್ರ್ಯಕ್ಕಾಗಿ ಶುಭಾಶಯಗಳು’ ಎಂದು ಹೇಳಲಾಗಿದೆ. ಮುಂದೆ ‘ಹೇ ಅಲ್ಲಾ, ಸೊಮಾಲಿಯ, ಯೆಮನ್, ಕಾಶ್ಮೀರ ಮತ್ತು ಜಗತ್ತಿನಲ್ಲಿರುವ ಇತರ ಇಸ್ಲಾಮೀ ಭೂಮಿಗಳನ್ನು ಇಸ್ಲಾಂನ ಶತ್ರುಗಳಿಂದ ಮುಕ್ತಗೊಳಿಸಿ. ಜಗತ್ತಿನಾದ್ಯಂತ ಇರುವ ಮುಸಲ್ಮಾನ ಕೈದಿಗಳನ್ನು ಮುಕ್ತಗೊಳಿಸಿ. ಸರ್ವಶಕ್ತಿಮಾನನಾದ ಅಲ್ಲಾಹನೇ ಅಮೆರಿಕವನ್ನು ಅಪಮಾನಗೊಳಿಸಿ ಸೋಲಿಸಿದ್ದಾನೆ. ಈ ಎಲ್ಲ ಘಟನೆಗಳಿಂದ ಕೇವಲ ಜಿಹಾದ (ಧರ್ಮಯುದ್ಧ) ಮಾಡಿಯೇ ವಿಜಯವು ಪ್ರಾಪ್ತವಾಗುತ್ತದೆ ಎಂಬುದು ಸಾಬೀತಾಗುತ್ತದೆ. ಅಲ್ಲಾಹನ ಸಹಾಯದಿಂದ ದೊರೆತ ಈ ವಿಜಯವು ಮುಸಲ್ಮಾನರಿಗೆ ಪಾಶ್ಚಾತ್ಯರ ಗುಲಾಮಗಿರಿಯಿಂದ ಮುಕ್ತರಾಗುವ ಮಾರ್ಗವನ್ನು ತೋರಿಸುವುದು, ಎಂದು ಹೇಳಿದೆ.