ಗಾಯದಿಂದ ನಿರಾಶೆಗೊಳಗಾಗಿದ್ದ ಅಂಗವಿಕಲ ಭಾರತೀಯ ಆಟಗಾರನು ಶ್ರೀಮದ್ಭಗವದ್ಗೀತೆ ಓದಿ ಸಿಕ್ಕಿದ ಸ್ಪೂರ್ತಿಯಿಂದ ಗೆದ್ದರು ಕಂಚಿನ ಪದಕ !

ಟೋಕಿಯೋ (ಜಪಾನ) ಇಲ್ಲಿಯ ಪ್ಯಾರಾ ಒಲಂಪಿಕನಲ್ಲಾದ ಘಟನೆ !

ಶ್ರೀಮದ್ಭಗವದ್ಗೀತೆಯ ಮಹತ್ವವನ್ನು ಒಪ್ಪಿಕೊಳ್ಳದಿರುವ ಬುದ್ಧಿಪ್ರಾಮಾಣ್ಯವಾದಿಗಳು ಈಗ ಬಾಯಿ ತೆರೆಯುವರೇನು ? ನಿರಾಶೆಗೆ ಆಧುನಿಕ ಔಷಧೋಪಚಾರ ಮಾಡಿದರೂ ವಾಸಿಯಾಗದಿರುವವರು ಈಗಲಾದರೂ ಅಧ್ಯಾತ್ಮದ ಮಹತ್ವ ತಿಳಿದುಕೊಳ್ಳುವರೇನು ?

ಟೋಕಿಯೋ (ಜಪಾನ) – ಇಲ್ಲಿ ನಡೆಯುತ್ತಿರುವ ‘ಪ್ಯಾರಾ ಒಲಂಪಿಕ್’ನಲ್ಲಿ (ಅಂಗವಿಕಲರಿಗಾಗಿ ನಡೆಸುವ ಒಲಂಪಿಕ್‌ನಲ್ಲಿ) ಭಾರತೀಯ ಆಟಗಾರರು ಒಳ್ಳೆಯ ಪ್ರದರ್ಶನ ಮಾಡುತ್ತಿದ್ದಾರೆ. ಅವರಲ್ಲಿ ಭಾರತೀಯ ಆಟಗಾರ ಶರತ್ ಕುಮಾರ್ ಇವರು ಎತ್ತರದ ಜಿಗಿತದಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಈ ವಿಷಯವಾಗಿ ಶರತ್ ಕುಮಾರ್ ಅವರು ಮಾತನಾಡಿ, ‘ಅಭ್ಯಾಸ ಮಾಡುವ ಸಮಯದಲ್ಲಿ ನನ್ನ ಮೊಣಕಾಲಿಗೆ ಗಾಯವಾಗಿತ್ತು, ಆದಕಾರಣ ಅಂತಿಮ ಸುತ್ತಿನಲ್ಲಿ ನನಗೆ ಆಡಲು ಆಗುವುದೇ ?’ ‘ನನಗೆ ಪದಕ ಸಿಗುವುದೇ ?’ ಇಂತಹ ವಿಚಾರಗಳು ಮನಸ್ಸನ್ನು ಕಾಡುತ್ತಿದ್ದವು. ಕಡೆಯ ಸುತ್ತಿನಿಂದ ಹಿಂದೆ ಸರಿಯಬೇಕು ಎಂದು ವಿಚಾರ ಮಾಡುತ್ತಿದ್ದೆ. ಸುತ್ತಿನ ಹಿಂದಿನ ದಿನ ನಾನು ಇಡೀ ರಾತ್ರಿ ಅಳುತ್ತಿದ್ದೆ, ರಾತ್ರಿ ನಾನು ನನ್ನ ಕುಟುಂಬದವರ ಜೊತೆಗೆ ಮಾತನಾಡಿದೆ, ನನ್ನ ತಂದೆಯವರು ನನಗೆ ಶ್ರೀಮದ್ಭಗವದ್ಗೀತೆಯನ್ನು ಓದಲು ಹೇಳಿದರು ಮತ್ತು ‘ನಾನು ಏನು ಮಾಡಬಹುದು ?’, ಇದರ ಕಡೆ ಲಕ್ಷ ಕೊಡಲು ಹೇಳಿದರು. ಯಾವುದು ನನ್ನ ಕೈಯಲ್ಲಿ ಇಲ್ಲವೋ, ಅದರ ಬಗ್ಗೆ ಲಕ್ಷ ಕೊಡದೆ ಇರಲು ಸಲಹೆ ಕೊಟ್ಟರು. ಅದರ ನಂತರ ನಾನು ಶ್ರೀಮದ್ಭಗವದ್ಗೀತೆ ಓದಿದೆ. ಮರುದಿನ ಕಡೆಯ ಸುತ್ತಿನ ಸಮಯದಲ್ಲಿ ನೋವನ್ನು ಮರೆತು ನಾನು ಎತ್ತರದ ಜಿಗಿತ ಜಿಗಿಯಲು ಸಜ್ಜಾದೆ. ಪ್ರತಿಸಲವೂ ಜಿಗಿಯುವುದು, ಅದು ನನಗೆ ಯುದ್ಧವೇ ಆಗಿತ್ತು. ನನಗೆ ಸಿಕ್ಕಿರುವ ಕಂಚಿನ ಪದಕ ಇದು ಒಂದು ಚಿನ್ನದ ಪದಕವೇ ಆಗಿದೆ ಎಂದು ಹೇಳಿದರು. ಶರತ ಕುಮಾರ ಇವರು ಎರಡು ವರ್ಷದವರಿದ್ದಾಗ ಅವರಿಗೆ ಪೊಲಿಯೋದ ನಕಲಿ ಡೋಸ್ ಅನ್ನು ಕೊಡಲಾಗಿತ್ತು. ಆದಕಾರಣ ಅವರ ಎಡಗಾಲಿಗೆ ಪಾರ್ಶ್ವವಾಯುವಾಗಿತ್ತು.