* ಹಿಂದೂ ಧರ್ಮವನ್ನು ಟೀಕಿಸುವ ಮತ್ತು ಹಿಂದೂಗಳನ್ನು ‘ಭಯೋತ್ಪಾದಕರು’ ಎಂದು ಕರೆಯುವವರು ಇಂತಹ ಎಷ್ಟೇ ಪೂಜೆ ಮಾಡಿದರೂ ಅವರ ಪಾಪಗಳು ತೊಳೆಯಲ್ಪಡುವುದಿಲ್ಲ, ಎಂದು ಅವರು ನೆನಪಿಟ್ಟುಕೊಳ್ಳಬೇಕು ! – ಸಂಪಾದಕರು * ಹಿಂದೂ ಧರ್ಮವನ್ನು ಟೀಕಿಸುವರು ‘ನಾವು ಕೂಡ ಹಿಂದೂಗಳಾಗಿದ್ದೇವೆ, ಕೇವಲ ಧರ್ಮದಲ್ಲಿ ಕೆಟ್ಟದ್ದನ್ನು ಮಾತ್ರ ಟೀಕಿಸುತ್ತೇವೆ’, ಎಂದು ಹೇಳುತ್ತಾ ಪೂಜೆ-ಅರ್ಚನೆ ಮಾಡುವ ನಾಟಕವಾಡುತ್ತಾರೆ. ಹಿಂದೂಗಳು ಇಂತಹ ಕಪಟ ಹಿಂದೂಗಳ ಬಗ್ಗೆ ಎಚ್ಚರದಿಂದಿರಬೇಕು ! – ಸಂಪಾದಕರು |
ಮುಂಬಯಿ : ಹಿಂದೂ ಧರ್ಮ ಮತ್ತು ಹಿಂದೂ ಧರ್ಮೀಯವನ್ನು ನಿರಂತರವಾಗಿ ಟೀಕಿಸುವ ಹಿಂದಿ ಚಿತ್ರರಂಗದ ಕಮ್ಯೂನಿಸ್ಟ್ ಮನಸ್ಥಿತಿಯ ನಟಿ ಸ್ವರಾ ಭಾಸ್ಕರ್ ಇವರು ತಮ್ಮ ಮನೆಯಲ್ಲಿ ಶ್ರೀ ಗಣೇಶ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ರುದ್ರಾಭಿಷೇಕ ಮತ್ತು ಯಜ್ಞದಂತಹ ವಿವಿಧ ಧಾರ್ಮಿಕ ವಿಧಿಗಳನ್ನು ಮಾಡುವ ಮೂಲಕ ಗೃಹಪ್ರವೇಶ ಮಾಡಿದರು. ಅವರು ಈ ಬಗ್ಗೆ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾರೆ. ‘ಈ ಪೂಜೆಯನ್ನು 7 ಗಂಟೆಗಳ ಕಾಲ ನಡೆಸಲಾಯಿತು. ಈ ಸಮಯದಲ್ಲಿ ಅರ್ಚಕರು 7 ವಿವಿಧ ರೀತಿಯ ಪೂಜೆಗಳನ್ನು ಮಾಡಿದ್ದಾರೆ’, ಎಂದು ಸ್ವರಾ ಭಾಸ್ಕರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದಾರೆ. ಇದರ ನಂತರ, ಅನೇಕರು ಸ್ವರಾ ಭಾಸ್ಕರ್ ಅವರ ಹಿಂದೂ ಧರ್ಮ ಮತ್ತು ಹಿಂದೂ ಧರ್ಮೀಯರ ವಿರುದ್ಧ ನಿರಂತರ ನೀಡಿದ ಹೇಳಿಕೆಗಳ ಬಗ್ಗೆ ಅರಿವು ಮಾಡಿಸುತ್ತಾ ಟೀಕಿಸಿದ್ದಾರೆ ಹಾಗೂ ಇನ್ನು ಅನೇಕರು ಅವರು ಸರಿಯಾದ ಮಾರ್ಗದಲ್ಲಿ ಬಂದಿರುವುದಕ್ಕಾಗಿ ಅವರನ್ನು ಅಭಿನಂದಿಸಿದ್ದಾರೆ.
The Gods have approved! #GrihaPravesh #newoldhouse #NewBeginnings pic.twitter.com/PFptZIFUBq
— Swara Bhasker (@ReallySwara) August 26, 2021
ಈ ಛಾಯಾಚಿತ್ರಗಳ ಪ್ರಸಾರವಾದ ನಂತರ, ಒಬ್ಬ ವ್ಯಕ್ತಿಯು, ‘ಮಹಾದೇವನಿಂದ ವರವನ್ನು ಪಡೆಯಲು ಆತನನ್ನು ಪೂಜಿಸುತ್ತಾ ಪ್ರಸನ್ನಗೊಳಿಸುವ ಪ್ರಾಚೀನ ಭಾರತದ ಒಬ್ಬ ರಾಕ್ಷಸ’ ಎಂದು ಪ್ರತಿಕ್ರಿಯಿಸಿದರು. ತಾಲಿಬಾನಿಗಳು ಅಫಘಾನಿಸ್ತಾನದ ಮೇಲೆ ನಡೆಸಿದ ಆಕ್ರಮಣವನ್ನು ಬೆಂಬಲಿಸಿದ ಸ್ವರಾ ಭಾಸ್ಕರ್ ಇವರು, ‘ನಾವು ಹಿಂದೂ ಭಯೋತ್ಪಾದನೆಯನ್ನು ಹೊಗಳಲು ಸಾಧ್ಯವಿಲ್ಲ. ನಾವು ತಾಲಿಬಾನ್ ಭಯೋತ್ಪಾದನೆಯ ಬಗ್ಗೆ ಮೌನವಾಗಿರಬೇಕು ಮತ್ತು ಹಿಂದೂ ಭಯೋತ್ಪಾದನೆಯ ಬಗ್ಗೆ ನಮ್ಮ ಆಕ್ರೋಶವನ್ನು ವ್ಯಕ್ತಪಡಿಸಬೇಕು’, ಎಂದು ಟ್ವೀಟ್ ಮಾಡಿ ಹಿಂದೂಗಳನ್ನು ‘ಭಯೋತ್ಪಾದಕರು’ ಎಂದು ಹಣೆಪಟ್ಟಿ ಕಟ್ಟಲು ಪ್ರಯತ್ನಿಸಿದ್ದರು.