ಕಾಬುಲ್ ವಿಮಾನನಿಲ್ದಾಣದಲ್ಲಿ ನೀರಿನ ಬಾಟಲಿಯ ಬೆಲೆ 3 ಸಾವಿರ ರೂಪಾಯಿಗಳು, ಹಾಗೂ ಊಟಕ್ಕೆ ಏಳುವರೆ ಸಾವಿರ ರೂಪಾಯಿಗಳು !

ಕಾಬೂಲಿನ ವಿಮಾನ ನಿಲ್ದಾಣದಲ್ಲಿ ಅಫಘಾನಿಸ್ತಾನವನ್ನು ಬಿಟ್ಟು ಹೋಗುವ ನಾಗರಿಕರ ದುಃಸ್ಥಿತಿ !

ಕಾಬುಲ್ (ಅಫಘಾನಿಸ್ತಾನ) – ಅಫಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಸಾವಿರಾರು ಅಫಘಾನೀ ನಾಗರಿಕರು ದೇಶ ಬಿಟ್ಟು ಹೋಗುವ ತಯಾರಿಯಲ್ಲಿದ್ದಾರೆ. ಸಾವಿರಗಟ್ಟಲೆ ಸಂಖ್ಯೆಯಲ್ಲಿ ಜನರು ಕಾಬುಲ ವಿಮಾನನಿಲ್ದಾಣದಲ್ಲಿ ವಿದೇಶಕ್ಕೆ ಹೋಗಲು ದಾರಿ ಕಾಯುತ್ತಿದ್ದಾರೆ. ಕಾಬುಲ ವಿಮಾನ ನಿಲ್ದಾಣದಲ್ಲಿ ಸೇರಿದ ಜನರು ಅತ್ಯಂತ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದಾರೆ. ಭಯದೊಂದಿಗೆ ವಿಮಾನದಿಂದ ಹೋಗುವ ಕ್ರಮಾಂಕ ಬರುವವರೆಗೂ ನೀರು, ಹಸಿವೆ ಹಾಗೂ ವಿಶ್ರಾಂತಿಗಾಗಿ ಹೋರಾಡಬೇಕಾಗುತ್ತಿದೆ. ಅಲ್ಲಿ ಖಾದ್ಯಪದಾರ್ಥಗಳ ದರಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿವೆ. ಒಂದು ಲೀಟರ್ ನೀರಿನ ಬಾಟಲಿಗೋಸ್ಕರ 40 ಅಮೇರಿಕಾದ ಡಾಲರ್ಸ ಅಂದರೆ ಸುಮಾರು 3 ಸಾವಿರ ಭಾರತೀಯ ರೂಪಾಯಿಗಳನ್ನು ನೀಡಬೇಕಾಗಿದೆ. ಅದರ ಜೊತೆಗೆ ಅಫಘಾನಿ ಚಲಾವಣೆಯ ಹಣವನ್ನಲ್ಲ ಬದಲಾಗಿ ಅಮೇರಿಕಾದ ಡಾಲರ್ಸ್‍ನಲ್ಲಿ ಪಾವತಿಸಬೇಕಾಗಿದೆ.

ಕಾಬುಲ್‍ನ ವಿಮಾನನಿಲ್ದಾಣದ ಹೊರಗೆ ಮೊಣಕಾಲಿನವರೆಗೂ ಕೊಳಚೆ ನೀರು ಇರುವ ನಾಲೆಗಳಲ್ಲಿ(ಚರಂಡಿಗಳಲ್ಲಿ) ಹಾಗೂ ಕಸದಲ್ಲಿ ಜನರು ತಮ್ಮ ಕ್ರಮಾಂಕಕ್ಕಾಗಿ ಕಾಯುತ್ತಾ ನಿಂತಿದ್ದಾರೆ. ಜನದಟ್ಟಣೆ ತುಂಬಾ ಹೆಚ್ಚಾಗುತ್ತಿದೆ. ಆದ್ದರಿಂದ ಮಹಿಳೆಯರ ಹಾಗೂ ಮಕ್ಕಳ ಸ್ಥಿತಿ ಅತ್ಯಂತ ಬಿಕ್ಕಟ್ಟಿನದ್ದಾಗಿದೆ.

ಪ್ರತಿ 3 ಅಫಘಾನಿ ನಾಗರಿಕರಲ್ಲಿ ಒಬ್ಬ ಹಸಿವಿನಿಂದಿರುತ್ತಾನೆ ! – ವರದಿ

ವಲ್ರ್ದ ಫುಡ್ ಪ್ರೋಗ್ರಾಮ್‍ನ ಒಂದು ವರದಿಯಂತೆ ಅಫಘಾನಿಸ್ತಾನದಲ್ಲಿ ಬೆಳೆಯಿಲ್ಲ, ಮಳೆಯಿಲ್ಲ, ಕುಡಿಯುವ ನೀರಿಲ್ಲ, ಹಾಗೂ ಜನರು ಬಡತನದಲ್ಲಿಯೇ ಜೀವಿಸುತ್ತಿದ್ದಾರೆ. ಪ್ರತಿ 3 ಅಫಗಾನಿಸ್ತಾನ ನಾಗರಿಕರ ಪೈಕಿ 1 ಅಂದರೆ ಸುಮಾರು 1 ಕೋಟಿ 49 ಲಕ್ಷ ಜನರು ಹಸಿವೆಯಲ್ಲಿದ್ದಾರೆ. ಅವರ ಜೊತೆ 20 ಲಕ್ಷ ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ ಹಾಗೂ ಅವರಿಗೆ ತಕ್ಷಣ ಸಹಾಯದ ಅವಶ್ಯಕತೆಯಿದೆ.