* ಮಹಿಳೆಯರು ಮತ್ತು ಯುವತಿಯರೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಸಾಮಾನ್ಯ ಜ್ಞಾನವೂ ಇಲ್ಲದಿರುವ ತಾಲಿಬಾನಿಗಳು ಅಫಘಾನಿಸ್ತಾನದ ಮೇಲೆ ಆಡಳಿತ ನಡೆಸಲಿದ್ದಾರೆ ! – ಸಂಪಾದಕರು * ಭಾರತದಲ್ಲಿನ ಕೆಲವು ಮುಸಲ್ಮಾನ ನೇತಾರರು ಮತ್ತು ಸಂಘಟನೆಗಳು ಬಹಿರಂಗವಾಗಿ ಇಂತಹ ತಾಲಿಬಾನಿನ ಸಮರ್ಥನೆ ಮಾಡುತ್ತಿರುವುದು ಜಾತ್ಯಾತೀತವಾದಿಗಳು ಮತ್ತು ಪುರೋ (ಅಧೋ) ಗಾಮಿಗಳ ಗಮನಕ್ಕೆ ಬರುವುದಿಲ್ಲವೇ ? – ಸಂಪಾದಕರು |
ಕಾಬುಲ್ (ಅಫಘಾನಿಸ್ತಾನ) – ಮಹಿಳೆಯರು ಮತ್ತು ಯುವತಿಯರು ಮನೆಯಲ್ಲಿ ಸುರಕ್ಷಿತವಾಗಿರಬಹುದು. ಅವರು ಹೊರಗೆ ಬರಬಾರದು. ಏಕೆಂದರೆ ತಾಲಿಬಾನಿಗಳಿಗೆ ಮಹಿಳೆಯರನ್ನು ಗೌರವಿಸುವ ಬಗ್ಗೆ ತರಬೇತಿಯನ್ನು ನೀಡಲಾಗಿಲ್ಲ.
The Taliban accepts women are not safe in their regime, tells Afghan women to stay at home as their soldiers are ‘not trained’ to respect themhttps://t.co/GDKlsFtyof
— OpIndia.com (@OpIndia_com) August 25, 2021
ಮಹಿಳೆಯರಿಗೆ ಮನೆಯಲ್ಲಿ ಉಳಿಯಲು ನೀಡಿದ ಆದೇಶವು ತಾತ್ಕಾಲಿಕವಾಗಿದೆ. ಇದನ್ನು ‘ಆದೇಶವೆಂದು’ ತಿಳಿಯಬಾರದು. ಮಹಿಳೆಯರೊಂದಿಗೆ ಅಯೋಗ್ಯ ವರ್ತನೆ ಮಾಡದಂತೆ ತಾಲಿಬಾನಿಗಳಿಗೆ ತರಬೇತಿಯನ್ನು ನೀಡಲಾಗುವುದು ಎಂದು ತಾಲಿಬಾನಿನ ವಕ್ತಾರನಾದ ಜಬೀಉಲ್ಲಾ ಮುಜಾಹಿದ ಇವನು ಪತ್ರಿಕಾ ಪರಿಷತ್ತಿನಲ್ಲಿ ಹೇಳಿದನು. (ತಾಲಿಬಾನನಿಂದ ಈ ಮೊದಲು ಮಹಿಳೆಯರ ಮೇಲಾಗಿರುವ ಅತ್ಯಾಚಾರಗಳನ್ನು ನೋಡಿದರೆ ಒಬ್ಬ ತಾಲಿಬಾನಿಗೂ ಮಹಿಳೆಯರಿಗೆ ಆದರ ನೀಡುವ ಗೌರವಿಸುವ ಸಂಸ್ಕಾರವಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಇಂತಹ ಸಂಸ್ಕಾರವೇ ಇಲ್ಲದವರು ಇತರ ತಾಲಿಬಾನಿಗಳಿಗೆ ಏನು ಕಲಿಸುವರು ? – ಸಂಪಾದಕರು) ಮಹಿಳೆಯರ ಬಗ್ಗೆ ಹಿಂದಿಗಿಂತಲೂ ಹೆಚ್ಚು ಉದಾರವಾದಿ ವೃತ್ತಿಯನ್ನು ಅಂಗೀಕರಿಸಲಾಗುವುದು. ಮಹಿಳೆಯರಿಗೆ ಕೆಲಸ ಮಾಡುವ ಮತ್ತು ಶಿಕ್ಷಣ ಪಡೆಯುವ ಅವಕಾಶ ನೀಡಲಾಗುವುದು.’ ಎಂದು ತಾಲಿಬಾನ್ ಹೇಳಿತ್ತು. ಆದರೆ ಕೆಲವೇ ದಿನಗಳಲ್ಲಿ ಅವರ ಭೂಮಿಕೆ ಬದಲಾಗಿರುವುದು ಕಂಡುಬಂದಿದೆ.
೧೯೯೬ ರಿಂದ ೨೦೦೧ ರ ತನಕ ಅಫಘಾನಿಸ್ತಾನದಲ್ಲಿ ತಾಲಿಬಾನಿನ ಅಧಿಕಾರವಿತ್ತು. ಈ ಸಮಯದಲ್ಲಿ ತಾಲಿಬಾನಿಗಳು ಮಹಿಳೆಯರ ಜೀವನವನ್ನು ನರಕವನ್ನಾಗಿಸಿದ್ದರು. ರಸ್ತೆಯ ಮಧ್ಯದಲ್ಲಿಯೇ ಅವರಿಗೆ ಹೊಡೆಯಲಾಗುತ್ತಿತ್ತು ಹಾಗೆಯೇ ಕೆಲವು ಶಿಕ್ಷೆಗಳಲ್ಲಿ ಅವರನ್ನು ಕಲ್ಲುಗಳಿಂದ ಹೊಡೆದು ಕೊಲ್ಲಲಾಗುತ್ತಿತ್ತು.