ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕಾಂಗ್ರೆಸ್ ಮುಖಂಡ ಸಜ್ಜನ ಕುಮಾರರಿಗೆ ಆರೋಗ್ಯ ವರದಿಯನ್ನು ಸಾದರ ಪಡಿಸುವಂತೆ ಸರ್ವೋಚ್ಚ ನ್ಯಾಯಾಲಯದ ಆದೇಶ

೧೯೮೪ ರಲ್ಲಾದ ಸಿಕ್ಖ್ ಗಲಭೆ ಪ್ರಕರಣ

ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ದೋಷಿಗೆ ಜಾಮೀನು ಯಾತಕ್ಕಾಗಿ? ಅದರ ಬದಲು ಸಾವಿರಾರು ನಾಗರಿಕರ ಕೊಲೆ ಮಾಡಿದವನಿಗೆ ಗಲ್ಲು ಶಿಕ್ಷೆ ವಿಧಿಸಬೇಕಾಗಿತ್ತು !

ನವ ದೆಹಲಿ – ೧೯೮೪ರಲ್ಲಿ ದಿವಂಗತ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಹತ್ಯೆಯಾದ ಬಳಿಕ ದೆಹಲಿಯಲ್ಲಾದ ಸಿಕ್ಖರ ಹತ್ಯಾಕಾಂಡದ ಪ್ರಕರಣದಲ್ಲಿ ಕಾಂಗ್ರೆಸ್‌ನ ಮುಖಂಡ ಸಜ್ಜನ ಕುಮಾರ ಇವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಅವರು ತಮ್ಮ ಅನಾರೋಗ್ಯದ ಕಾರಣ ಹೇಳಿ ತಾತ್ಕಾಲಿಕ ಜಾಮೀನಿಗೋಸ್ಕರ ಸರ್ವೋಚ್ಚ ನ್ಯಾಯಾಲಯದಲ್ಲಿ ಯಾಚಿಕೆಯನ್ನು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಅವರ ಆರೋಗ್ಯದ ವರದಿಯನ್ನು ಸಾದರ ಪಡಿಸುವಂತೆ ಆದೇಶ ನೀಡಿದೆ. ಈ ಹಿಂದೆ ಮೇ ೧೩ರಂದು ಕುಮಾರರು ಇದೇ ಆಧಾರದ ಮೇಲೆ ಸಲ್ಲಿಸಿದ ತಾತ್ಕಾಲಿಕ ಜಾಮೀನನ್ನು ನ್ಯಾಯಾಲಯವು ನಿರಾಕರಿಸಿತ್ತು.