ರಾಜಸ್ತಾನದಲ್ಲಿನ ದೇವಸ್ಥಾನಗಳ ಸರಕಾರಿಕರಣದ ವಿರುದ್ಧ ಆಂದೋಲನ ಮಾಡುವೆವು ! – ಶ್ರೀ ರಾಜಪೂತ ಕರಣಿ ಸೇನೆಯ ಘೋಷಣೆ

ದೇವಸ್ಥಾನ ಸರಕಾರೀಕರಣದ ವಿರುದ್ಧ ಆಂದೋಲನ ಮಾಡುವ ನಿರ್ಣಯ ತೆಗೆದುಕೊಂಡಿರುವ ಶ್ರೀ ರಾಜಪೂತ ಕರಣಿ ಸೇನೆಗೆ ಅಭಿನಂದನೆಗಳು ! ದೇವಸ್ಥಾನಗಳ ಸರಕಾರಿಕರಣ ಮಾಡಿ ಅವುಗಳ ಅರ್ಪಣೆಗಳ ಮೇಲೆ ಕೈಹಾಕಲು ನೋಡುವ ಕಾಂಗ್ರೆಸ್ ಸರಕಾರದ ವಿರುದ್ಧ ಹಿಂದೂಗಳು ಸಂಘಟಿತರಾಗುವುದು ಆವಶ್ಯಕವಾಗಿದೆ !

ಜಯಪುರ (ರಾಜಸ್ಥಾನ) – ರಾಜಸ್ಥಾನ ಸರಕಾರವು ಮೆಹಂದಿಪುರದಲ್ಲಿನ ಪ್ರಸಿದ್ಧ ಬಾಲಾಜಿ ದೇವಸ್ಥಾನದ ಸರಕಾರಿಕರಣ ಮಾಡಲು ಪ್ರಯತ್ನಿಸುತ್ತಿದೆ. ಸರಕಾರವು ತನ್ನ ತಲೆಯಿಂದ ಸರಕಾರಿಕರಣದ ವಿಚಾರವನ್ನು ತೆಗೆದುಹಾಕಬೇಕು. ಶ್ರೀ ರಾಜಪೂತ ಕರಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಮಹಿಪಾಲಸಿಂಹ ಮಕರಾನ ಇವರು ‘ಮೆಂಹದಿಪೂರದಲ್ಲಿನ ಬಾಲಾಜಿ ದೇವಸ್ಥಾನ ಮತ್ತು ರಾಜ್ಯದಲ್ಲಿನ ಇತರ ದೇವಸ್ಥಾನಗಳ ಸರಕಾರೀಕರಣವಾಗಲು ಬಿಡುವುದಿಲ್ಲ. ನಾವು ಸರಕಾರದ ವಿರುದ್ಧ ಆಂದೋಲನ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು. ಮಕಾರಾನ ಇವರು ಈ ಮೊದಲು ಮೆಹಂದಿಪುರ್ ಬಾಲಾಜಿ ಮಂದಿರಕ್ಕೆ ಹೋಗಿ ಬ್ರಹ್ಮಲೀನ ಮಹಂತ ಕಿಶೋರಪುರಿ ಮಹಾರಾಜರ ಛಾಯಾಚಿತ್ರಗಳ ಮೇಲೆ ಪುಷ್ಪವನ್ನು ಅರ್ಪಿಸಿ ದರ್ಶನ ಪಡೆದರು. ಈ ಮಂದಿರದ ಪ್ರಮುಖ ಮಹಂತರಾದ ಕಿಶೋರಪುರಿ ಮಹಾರಾಜರು ಕೆಲವು ದಿನಗಳ ಹಿಂದೆ ದೇಹತ್ಯಾಗ ಮಾಡಿದ್ದರು.

ಮಹಿಪಾಲಸಿಂಹ ಮಕರಾನ ಇವರು ‘ಆಗಸ್ಟ್ 31 ರಂದು ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸುವ ಆಂದೋಲನಗಳ ರೂಪುರೇಷೆಯನ್ನು ಮೆಹಂದಿಪುರ ಬಾಲಾಜಿ ದೇವಸ್ಥಾನದಲ್ಲಿ ನಿರ್ಧರಿಸಲಾಗುವುದು, ಅನಂತರ ರಾಜ್ಯದಲ್ಲಿನ ಇತರ ದೇವಸ್ಥಾನಗಳ ಸರಕಾರೀಕರಣವನ್ನು ರಹಿತಗೊಳಿಸಲು ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ.