ಅಫ್ಘಾನಿಸ್ತಾದಲ್ಲಿನ ಪರಿಸ್ಥಿತಿಯ ವಿಷಯವಾಗಿ ಕೇಂದ್ರ ಸರಕಾರಕ್ಕೆ ಮೆಹಬೂಬಾ ಮುಫ್ತಿಯಿಂದ ಎಚ್ಚರಿಕೆ(ಬೆದರಿಕೆ)
ಅಮೇರಿಕಾಗೆ ಏನು ಸಾಧ್ಯವಾಗಲಿಲ್ಲವೋ ಅದನ್ನು ಮಾಡಿ ತೋರಿಸುವ ಕ್ಷಮತೆಯು ಭಾರತೀಯ ಸೈನ್ಯಕ್ಕಿದೆ; ಆದರೆ ಭಾರತೀಯ ಸೈನ್ಯದ ಮೇಲೆ ವಿಶ್ವಾಸವಿಲ್ಲದಿರುವ ಮೆಹಬೂಬಾ ಮುಫ್ತಿ ಈ ರೀತಿಯ ಹೇಳಿಕೆಗಳನ್ನೇ ನೀಡುತ್ತಿರುತ್ತಾರೆ ! ಆದ್ದರಿಂದ ಕೇಂದ್ರ ಸರಕಾರವು ಅವರನ್ನು ಗೃಹಬಂಧನದಲ್ಲಿ ಅಲ್ಲ ಸೆರೆಮನೆಗಟ್ಟಬೇಕು!- ಸಂಪಾದಕರು
ಶ್ರೀನಗರ (ಜಮ್ಮು-ಕಾಶ್ಮೀರ)– ನಾನು ಮೇಲಿಂದ ಮೇಲೆ ಹೇಳುತ್ತೇನೆ, ನಮ್ಮ ಪರೀಕ್ಷೆ ತೆಗೆದುಕೊಳ್ಳಬೇಡಿ. ಸುಧಾರಿಸಿ, ಸಂಭಾಳಿಸಿ ! ಅಕ್ಕಪಕ್ಕದಲ್ಲಿ ಏನಾಗುತ್ತಿದೆ, ಎಂಬುದನ್ನು ನೋಡಿರಿ. ಇಷ್ಟು ದೊಡ್ಡ ಶಕ್ತಿಯಾಗಿರುವ ಅಮೇರಿಕಾಕ್ಕೆ ಸಹ ಅಫ್ಘಾನಿಸ್ತಾನದಿಂದ ಗಂಟುಮೂಟೆ ಕಟ್ಟಿಕೊಂಡು ಹಿಂತಿರುಗಬೇಕಾಯಿತು. ನಿಮಗೆ ಇನ್ನೂ ಅವಕಾಶವಿದೆ. ಹೇಗೆ ವಾಜಪೇಯಿಯವರು ಜಮ್ಮು-ಕಾಶ್ಮೀರದಲ್ಲಿ ಚರ್ಚೆ ನಡೆಸಿದ್ದರೋ, ಅದರಂತೆ ನೀವು ಕೂಡ ಚರ್ಚೆ ನಡೆಸಿರಿ. ಜಮ್ಮೂ-ಕಾಶ್ಮೀರದ ಚಿತ್ರವನ್ನು ನೀವು ಅಕ್ರಮವಾಗಿ ಹಾಳುಗೆಡವಿದ್ದೀರಿ; ರಾಜ್ಯವನ್ನು ಚೂರು ಚೂರು ಮಾಡಿದಿರಿ. ಆ ತಪ್ಪನ್ನು ಸರಿಮಾಡಿ; ಇಲ್ಲದಿದ್ದರೆ ತುಂಬಾ ತಡವಾಗಬಹುದು, ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ `ಪೀಪಲ್ಸ್ ಡೆಮೋಕ್ರಾಟಿಕ್ ಪಾರ್ಟಿಯ’ ಪ್ರಮುಖ ಮುಫ್ತಿಯವರು ಅಫ್ಘಾನಿಸ್ತಾನದ ಪರಿಸ್ಥಿತಿಯ ದೃಷ್ಟಾಂತವನ್ನು ಹೇಳುತ್ತಾ ಕೇಂದ್ರ ಸರಕಾರಕ್ಕೆ ಬೆದರಿಕೆ ನೀಡಿದರು.
‘Don’t test our patience’: #MehboobaMufti compares #JammuandKashmir with #Afghanistan situation; #BJP hits back.https://t.co/lQhZCwVewg
— TIMES NOW (@TimesNow) August 21, 2021
ಮುಫ್ತಿಯವರು ಮಾತನಾಡುತ್ತಾ, ಅವರಿಗೆ (ಕೇಂದ್ರ ಸರಕಾರಕ್ಕೆ) ಹೇಗೆ ಅನಿಸುತ್ತದೆ ಅಂದರೆ, `ನಾವು ತುಂಬಾ ಚಿಕ್ಕವರಾಗಿದ್ದೇವೆ, ಇವರೇನು ತಾನೆ ಮಾಡಬಹುದು? ಇವಳೇನು ಮಾತನಾಡುತ್ತಾಳೆ? ಇವಳೇನು ಮಾಡಲು ಸಾಧ್ಯ?’ ಆದರೆ ಒಂದು ವೇಳೆ ಒಂದು ಚಿಕ್ಕ ಇರುವೆ ಆನೆಯ ಸೊಂಡಿಲೊಳಗೆ ಹೋದರೆ ಅದಕ್ಕೆ ಜೀವಿಸಲು ಕಠಿಣಗೊಳಿಸಿ ಬಿಡುತ್ತದೆ, ಎಂದು ಸಹ ಬೆದರಿಕೆ ಒಡ್ಡಿದರು. (ಹೀಗೆ ಬೆದರಿಕೆ ಮಾಡುವವರ ಮೇಲೆ ಸರಕಾರವು ತಕ್ಷಣ ಕಾರ್ಯಾಚರಣೆ ನಡೆಸಬೇಕು ! – ಸಂಪಾದಕರು)