ತಾಲಿಬಾನ್‍ನಿಂದ ಇಂತಹದ್ದನ್ನು ನಿರೀಕ್ಷಿಸುವುದು ಮೂರ್ಖತನವಾಗಿದೆ, ಅಲ್ಲಿ ಪ್ರಸ್ತುತ ನಡೆಯುತ್ತಿರುವ ಕ್ರೂರತನವನ್ನು ನೋಡಿದ ನಂತರವಾದರೂ ಶ್ರೀಲಂಕಾಗೆ ಇದು ಗಮನಕ್ಕೆ ಬರಬೇಕಿತ್ತು ! ಪ್ರಪಂಚದ 1-2 ದೇಶಗಳನ್ನು ಹೊರತುಪಡಿಸಿ ಯಾರೂ ಇಂತಹ ಭರವಸೆಯನ್ನು ವ್ಯಕ್ತಪಡಿಸದಿರುವಾಗ ಶ್ರೀಲಂಕಾಗೆ ಮಾತ್ರ ತಾಲಿಬಾನ್‍ನ ಮೇಲೆ ಅಷ್ಟೊಂದು ವಿಶ್ವಾಸ ಬಂದಿರುವುದಕ್ಕೆ ಚೀನಾದ ಬೆಂಬಲ ಕಾರಣವೇ ? ಎಂಬ ಪ್ರಶ್ನೆಯು ಉದ್ಭವಿಸುತ್ತದೆ ! – ಸಂಪಾದಕರು
ಕೊಲಂಬೊ (ಶ್ರೀಲಂಕಾ) – ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದ ನಂತರ ತಾಲಿಬಾನ್ ಸಾಮಾನ್ಯ ಜನರಿಗೆ ಕ್ಷಮಾದಾನ, ಮಹಿಳಾ ಹಕ್ಕುಗಳ ರಕ್ಷಣೆ ಮತ್ತು ಯಾವುದೇ ವಿದೇಶಿ ಪ್ರಜೆಗೆ ಹಾನಿ ಮಾಡದಿರುವುದು, ಎಂಬ ಆಶ್ವಾಸನೆಗಳನ್ನು ನೀಡಿದೆ ಎಂದು ನಮಗೆ ಸಂತೋಷವಾಗಿದೆ. ಅದು ಈ ಆಶ್ವಾಸನೆಗೆ ಕಟಿಬದ್ಧವಾಗಿರುವುದು, ಎಂಬ ನಂಬಿಕೆ ಇದೆ, ಎಂಬ ಶಬ್ದಗಳಲ್ಲಿ ಶ್ರೀಲಂಕಾವು ತಾಲಿಬಾನ್‍ನ ಅಧಿಕಾರವನ್ನು ಸ್ವಾಗತಿಸಿದೆ.
Sri Lanka expressed hope that the #Taliban will honour their pledges of offering amnesty, protecting women’s rights and not harming any foreigners after seizing power in #Afghanistan.https://t.co/IN2kGzESpo
— Hindustan Times (@htTweets) August 21, 2021
1. ಶ್ರೀಲಂಕಾವು, ಅಫ್ಘಾನಿಸ್ತಾನದಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಅಮೆರಿಕಾ, ಬ್ರಿಟನ್, ಭಾರತ, ಪಾಕಿಸ್ತಾನ ಮತ್ತು ವಿಶ್ವಸಂಸ್ಥೆಯ ಸಹಾಯವನ್ನು ಕೋರಿದೆ.
2. ಶ್ರೀಲಂಕಾದ ಮಾಜಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಈ ಹಿಂದೆಯೇ ಶ್ರೀಲಂಕಾಗೆ ಎಚ್ಚರಿಕೆಯನ್ನು ನೀಡುತ್ತಾ, ಅದು ತಾಲಿಬಾನ್ ಸರಕಾರಕ್ಕೆ ಮಾನ್ಯತೆ ನೀಡಬಾರದು ಎಂದು ಹೇಳಿದ್ದರು. ತಾಲಿಬಾನ್ ಸರಕಾರದ ಕಾಲದಲ್ಲಿ, ಅಫ್ಘಾನಿಸ್ತಾನವು ಜಿಹಾದಿ ಭಯೋತ್ಪಾದಕರ ಗುಂಪುಗಳಿಗೆ ಕೇಂದ್ರವಾಗಲಿದೆ ಎಂಬ ಭೀತಿ ಎಲ್ಲರಲ್ಲಿದೆ. ಅದಕ್ಕಾಗಿಯೇ ಶ್ರೀಲಂಕಾವು ಅವರೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಬೇಕು ಎಂದು ಹೇಳಿದ್ದಾರೆ.