ನವದೆಹಲಿ – ಅಫ್ಘಾನಿಸ್ಥಾನದಿಂದ ಭಾರತೀಯ ವಾಯುದಳದ ವಿಮಾನದ ಮೂಲಕ ಭಾರತೀಯ ಮತ್ತು ಅಫ್ಘಾನಿ ಜನರನ್ನು ಭಾರತಕ್ಕೆ ಕರೆತರಲಾಗುತ್ತಿದೆ. ಇವರಲ್ಲಿ ಅಫ್ಘಾನಿಸ್ತಾನದ ಸಿಖ್ಖ ಸಂಸದರಾದ ನರೇಂದರ್ ಸಿಂಗ್ ಖಾಲಸಾ ಇವರಿಗೆ ಭಾರತಕ್ಕೆ ಬಂದ ಮೇಲೆ ಕಣ್ಣೀರು ಉಕ್ಕಿ ಬಂದಿತು. ‘ಕಳೆದ ಇಪ್ಪತ್ತು ವರ್ಷಗಳಲ್ಲಿ ಏನೆಲ್ಲಾ ನಿರ್ಮಿಸಿದ್ದೆವು ಅವೆಲ್ಲವೂ ಮುಗಿಯಿತು’ ಎಂದು ಸಂಸದ ನರೇಂದರ ಸಿಂಗ್ ಖಾಲಸಾ ಹೇಳಿದರು.
Afghan MP Narendar Khalsa evacuated by India from Kabul breaks down: ‘Have lost 20 years’ https://t.co/nqqfzTyk1L
— Republic (@republic) August 22, 2021
1. ಅಫ್ಘಾನಿಸ್ಥಾನದಲ್ಲಿ ಹಿಂದೂ ಮತ್ತು ಸಿಖ್ಖ ಬಾಂಧವರು ಚಿಂತೆಯಲ್ಲಿದ್ದಾರೆ. ಎಷ್ಟು ಭಾರತೀಯರಿದ್ದಾರೆಯೋ ಇವರೆಲ್ಲರನ್ನು ಆದಷ್ಟು ಬೇಗ ತಾಯ್ನಾಡಿಗೆ ಕರೆತರಬೇಕು ಎಂದು ಸಂಸದ ಖಾಲಾಸಾ ಇವರು ಭಾರತ ಸರಕಾರಕ್ಕೆ ವಿನಂತಿಸಿದ್ದಾರೆ.
2. ಖಾಲಾಸಾರವರು ಕಾಬುಲ್ ವಿಮಾನ ನಿಲ್ದಾಣದ ಪ್ರತಿಯೊಂದು ಪ್ರವೇಶದ್ವಾರದಲ್ಲಿ 5-6 ಸಾವಿರ ನಾಗರಿಕರು ನಿಂತಿದ್ದಾರೆ. ಇವರಲ್ಲಿ ತಾಲಿಬಾನಿಗಳು ಸಹ ನುಸುಳಿದ್ದಾರೆ. ಇದರಿಂದಾಗಿ ಭಯೋತ್ಪಾದಕರು ಯಾರು ಮತ್ತು ನಾಗರಿಕರು ಯಾರು ಎಂಬುದೇ ತಿಳಿಯುತ್ತಿಲ್ಲ ಎಂದು ಹೇಳಿದರು.
3. ನನಗೆ ಈಗ ನಾನು ಸುರಕ್ಷಿತ ಎಂದು ಅನಿಸುತ್ತಿದೆ. ನನ್ನ ಪತ್ನಿಯು ಭಾರತೀಯಳಾಗಿದ್ದಾಳೆ. ನಮ್ಮನ್ನು ಸುರಕ್ಷಿತವಾಗಿ ಹೊರಗೆ ತಂದಿದ್ದಕ್ಕಾಗಿ ನಾವು ಭಾರತ ಸರಕಾರಕ್ಕೆ ಆಭಾರಿಗಳಾಗಿದ್ದೇವೆ ಎಂದು ಓರ್ವ ಅಫ್ಘಾನ್ ನಾಗರಿಕನು ಹೇಳಿದ್ದಾನೆ.
4. ಅಫ್ಘಾನಿಸ್ಥಾನದಲ್ಲಿನ ಪರಿಸ್ಥಿತಿಯು ಅತ್ಯಂತ ಕೆಟ್ಟದಾಗಿದೆ. ವಿಮಾನ ನಿಲ್ದಾಣದಲ್ಲಿ ನಮಗೆ 24 ಗಂಟೆಗಳ ಕಾಲ ದಾರಿ ಕಾಯಬೇಕಾಯಿತು ಎಂದು ವಜೂದ ಶಹಜಾದ ಎಂಬ ಅಫ್ಘಾನ ನಾಗರಿಕನು ಹೇಳಿದ್ದಾನೆ.
5. ನಮ್ಮ ಸಹಚರರು ಅಫ್ಘಾನಿಸ್ಥಾನದಲ್ಲಿನ ಗುರುದ್ವಾರದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅಲ್ಲಿ ಸಿಲುಕಿರುವ 280 ಜನರನ್ನು ತಾಯ್ನಾಡಿಗೆ ಕರೆತರಬೇಕು ಎಂದು ನಾವು ಭಾರತ ಸರಕಾರಕ್ಕೆ ವಿನಂತಿಸುತ್ತಿದ್ದೇವೆ ಎಂದು ಮನಜೀತ್ ಸಿಂಗ್ ಎಂಬ ಸಿಖ್ಖ ವ್ಯಕ್ತಿಯು ಹೇಳಿದ್ದಾನೆ.