ಓವೈಸಿಯನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಬೇಕು ! – ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಪ್ರತ್ಯುತ್ತರ

‘ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ; ಆದರೆ ಸರಕಾರವು ಅಫ್ಘಾನಿಸ್ತಾನದ ಮಹಿಳೆಯರ ಬಗ್ಗೆ ಚಿಂತಿಸುತ್ತಿದೆ !’ (ಅಂತೆ) – ಅಸದುದ್ದೀನ್ ಓವೈಸಿ

ಓವೈಸಿಯವರಿಗೆ ಭಾರತೀಯ ಮಹಿಳೆಯರ ಸಂಕಷ್ಟದ ಬಗ್ಗೆ ತುಂಬಾ ಕಾಳಜಿ ಇದ್ದರೆ, ಅವರು ಇಲ್ಲಿಯವರೆಗೆ `ಲವ್ ಜಿಹಾದ್’ ವಿರುದ್ಧ ಏಕೆ ಧ್ವನಿ ಎತ್ತಲಿಲ್ಲ ? ಅವರ ಬಾಂಧವರಿಂದಾಗುವ ಪಿತೂರಿಯನ್ನು ತಡೆಯಲು ಏಕೆ ಪ್ರಯತ್ನಿಸಲಿಲ್ಲ ? ಇದಕ್ಕೆ ಓವೈಸಿ ಉತ್ತರಿಸುತ್ತಾರೆಯೇ ?- ಸಂಪಾದಕರು 

(ಎಡದಿಂದ) ‘ಎಂಐಎಂ’ ನಾಯಕ ಮತ್ತು ಸಂಸದ ಅಸದುದ್ದೀನ್ ಓವೈಸಿ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ನವದೆಹಲಿ – ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಿಡಿತ ಸಾಧಿಸಿದ ನಂತರ ಅಲ್ಲಿನ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಇಡೀ ವಿಶ್ವವೇ ಚಿಂತೆಯಲ್ಲಿದೆ; ಆದರೆ ‘ಎಂಐಎಂ’ ನಾಯಕ ಮತ್ತು ಸಂಸದ ಅಸದುದ್ದೀನ್ ಓವೈಸಿಯು `ಭಾರತ ಸರಕಾರವು ತಾಲಿಬಾನ್ ಸರಕಾರದ ಅಫ್ಘಾನ್ ಜನರಿಗೆ ಸಹಾಯ ಮಾಡುವ ಬದಲು ಭಾರತದಲ್ಲಿ ಮಹಿಳೆಯರಿಗೆ ಸಹಾಯ ಮಾಡಬೇಕು’, ಎಂದು ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು, `ಮುಸ್ಲಿಂ ಮಹಿಳೆಯರು ಮತ್ತು ಸಮುದಾಯದ ಸುರಕ್ಷತೆಗಾಗಿ ಅಸದುದ್ದೀನ್ ಓವೈಸಿ ಇವರನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಿ ಕೊಡಬೇಕು’ ಎಂದು ಪ್ರತ್ಯುತ್ತರ ನೀಡಿದ್ದಾರೆ.

ಓವೈಸಿ ಮಾತನ್ನು ಮುಂದುವರೆಸುತ್ತಾ, “ಒಂದು ವರದಿಯ ಪ್ರಕಾರ, ಭಾರತದಲ್ಲಿ ಒಂಬತ್ತು ಹುಡುಗಿಯರಲ್ಲಿ ಒಬ್ಬಳದ್ದು ಆಕೆ 5 ವರ್ಷದವಳಿದ್ದಾಗ ಮೃತ್ಯುವಾಗುತ್ತದೆ. ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ; ಆದರೆ ಅವರು(ಕೇಂದ್ರ ಸರಕಾರ) ಅಫ್ಘಾನಿಸ್ತಾನದ ಮಹಿಳೆಯರ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನವು ತಾಲಿಬಾನ್‍ನ ಸಂಪೂರ್ಣ ನಿಯಂತ್ರಣದಲ್ಲಿದೆ. ಎಲ್ಲಾ ಅಂತಾರಾಷ್ಟ್ರೀಯ ಭದ್ರತಾ ತಜ್ಞರಿಗೆ ತಾಲಿಬಾನ್‍ನೊಂದಿಗೆ ಚರ್ಚೆ ನಡೆಸಬೇಕು ಎಂದು ಅನಿಸುತ್ತದೆ; ಆದರೆ ನಮ್ಮಿಂದ ಅವರೊಂದಿಗೆ ಸಂವಾದವನ್ನು ಸಾಧಿಸುತ್ತಿರುವುದು ಕಂಡುಬರುತ್ತಿಲ್ಲ.” ಎಂದು ಹೇಳಿದರು.