ಮುಖ್ಯಮಂತ್ರಿಗಳ ನಿವಾಸದ ಮೇಲೆಯೇ ಪೆಟ್ರೋಲ್ ಬಾಂಬಿನಿಂದ ದಾಳಿ ಆಗುತ್ತದೆಯಾದರೆ, ಅಲ್ಲಿನ ಕಾಯಿದೆ ಹಾಗೂ ಸುವ್ಯವಸ್ಥೆ ಹೇಗಿರಬಹುದು, ಎಂಬ ಬಗ್ಗೆ ವಿಚಾರ ಮಾಡದೆ ಇರುವುದೇ ಒಳ್ಳೆಯದು !
ಶಿಲ್ಲಾಂಗ್ (ಮೇಘಾಲಯ) : ಮೇಘಾಲಯದ ಮುಖ್ಯಮಂತ್ರಿ ಹಾಗೂ ನ್ಯಾಶನಲ್ ಪೀಪಲ್ಸ್ ಪಾರ್ಟಿಯ ಮುಖಂಡರಾದ ಕೊನರಾಡ ಸಂಗಮಾರವರ ನಿವಾಸದ ಮೇಲೆ ಪೆಟ್ರೋಲ್ ಬಾಂಬಿನಿಂದ ದಾಳಿ ನಡೆದಿರುವ ಘಟನೆ ಆಗಸ್ಟ್ ೧೫ರ ರಾತ್ರಿ ನಡೆಯಿತು. ಸಂಗಮಾರವರ ಮನೆಯ ಮೇಲೆ ಕೆಲವು ಅಪರಿಚಿ ವ್ಯಕ್ತಿಗಳು ಪೆಟ್ರೊಲ್ ಬಾಂಬ್ ಎಸೆದು ಅಲ್ಲಿಂದ ಪರಾರಿಯಾದರು. ಭದ್ರತಾ ಸಿಬ್ಬಂದಿಗಳ ಜಾಗರೂಕತೆಯಿಂದ ಈ ಘಟನೆಯಲ್ಲಿ ಯಾರೂ ಕೂಡ ಗಾಯಗೊಂಡಿಲ್ಲ ಹಾಗೂ ಯಾವುದೇ ರೀತಿಯ ಹಾನಿಯಾಗಲಿಲ್ಲ. ಪೆಟ್ರೋಲ್‌ನಿಂದ ತುಂಬಿದ್ದ ಮೊದಲ ಬಾಟಲಿಯನ್ನು ನಿವಾಸದ ಮುಂದಿನ ಭಾಗದಲ್ಲಿ ಹಾಗೂ ಎರಡನೇ ಬಾಟಲಿಯನ್ನು ಹಿಂದಿನ ಭಾಗದಲ್ಲಿ ಎಸೆಯಲಾಯಿತು. ಇದರಿಂದ ಬೆಂಕಿ ಹತ್ತಿಕೊಂಡಿತು; ಆದರೆ ಕಾವಲುಗಾರನು ತಕ್ಷಣದ ಅದನ್ನು ಆರಿಸಿದನು.
The government has imposed a curfew in #Shillong and banned mobile internet services https://t.co/MpeBCoSK0C #Meghalaya
— India TV (@indiatvnews) August 16, 2021
ಚಕಮಕಿಯಲ್ಲಿ ಬಂಡಾಯ ಮುಖಂಡನ ಸಾವು
ಮೇಘಾಲಯದ ಮಾಜಿ ಬಂಡಾಯ ಮುಖಂಡ ಚೆರಿಶಸ್ಟರಫೀಲ್ಡ್ ಥಾಂಗಖ್ಯುನನ್ನು ಪೊಲೀಸರು ಚಕಮಕಿಯಲ್ಲಿ ಹತ್ಯೆ ಮಾಡಿದ ನಂತರ ಅಲ್ಲಿ ಹಿಂಸಾಚಾರವು ಪ್ರಾರಂಭವಾಗಿದೆ. ಈ ಘಟನೆಯ ಬಳಿಕ ರಾಜ್ಯದ ಪರಿಸ್ಥಿತಿಯು ಹದಗೆಡುತ್ತಿರುವಾಗಲೇ ಗೃಹ ಸಹಿವ ಲಖನ ರಿಂಬುಯಿಯವರು ರಾಜಿನಾಮೆ ಸಲ್ಲಿಸಿದರು.
ರಿಂಬುಯಿಯವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ, ಪೊಲೀಸರ ದಾಳಿಯ ಬಳಿಕ ಚೆಸ್ಟರಫೀಲ್ಡ್‌ರವರಿಗೆ ಕಾನೂನಿನ ವಿರುದ್ಧ ಹೋಗಿ ಕಾರ್ಯಾಚರಣೆ ನಡೆಸಿ ಹತ್ಯೆ ಮಾಡಲಾಯಿತು. ಈ ಘಟನೆಯ ಬಗ್ಗೆ ನಾನು ದುಃಖ ವ್ಯಕ್ತಪಡಿಸುತ್ತೇನೆ. ಚೆರಿಶಸ್ಟರಫೀಲ್ಡ್ ಸಾವಿನ ಪ್ರಕರಣದಲ್ಲಿ ಸ್ವತಂತ್ರ್ಯ ಹಾಗೂ ಪಕ್ಷಪಾತವಿಲ್ಲದೆ ವಿಚಾರಣೆ ಮಾಡುವುದು ಸುಲಭವಾಗುತ್ತದೆ ಹಾಗೂ ಸತ್ಯ ಪರಿಸ್ಥಿತಿಯ ಬಹಿರಂಗವಾಗುತ್ತದೆ. ಈ ಪ್ರಕರಣದ ಬಗ್ಗೆ ನ್ಯಾಯಲಯವು ವಿಚಾರಣೆ ನಡೆಸಲಿ. (ಒಬ್ಬ ಬಂಡಾಯ ಮುಖಂಡನ ಬೆಂಬಲಿಸಿ ಮಾತನಾಡುವವರು ಸಚಿವ ಸ್ಥಾನದವರೆಗೂ ತಲುಪುತ್ತಾರೆ, ಇದು ಭಾರತದಲ್ಲಿ ಮಾತ್ರ ಸಾಧ್ಯ. ಈ ಸ್ಥಿತಿಯು ಹಿಂದೂ ರಾಷ್ಟ್ರದ ಆವಶ್ಯಕತೆಯನ್ನು ತೋರಿಸುತ್ತದೆ ! – ಸಂಪಾದಕರು)