ಇಂದೂರ್ (ತೆಲಂಗಾಣಾ) – ಅನೇಕ ಜನರು ಮಂದಿರದ ಪರಿಸರದಲ್ಲಿ ಇರುವ ವೃಕ್ಷಗಳ ಕೆಳಗೆ ದೇವತೆಯ ಚಿತ್ರಗಳನ್ನು ಇಡುತ್ತಾರೆ, ಇದರಿಂದ ದೇವತೆಯ ವಿಡಂಬನೆ ಆಗುತ್ತದೆ. ಈ ವಿಡಂಬನೆ ಆಗಬಾರದೆಂದು, ಅದಕ್ಕಾಗಿ ಬೋಧನ್‍ನಲ್ಲಿಯ ಧರ್ಮಪ್ರೇಮಿಗಳು ಇತ್ತೀಚೆಗೆ ಊರಿನಲ್ಲಿರುವ ವಿವಿಧ ಮಂದಿರಗಳ ಪರಿಸರದಲ್ಲಿದ್ದ ದೇವತೆಗಳ ಚಿತ್ರಗಳನ್ನು ಒಟ್ಟುಗೂಡಿಸಿ ಹರಿಯುವ ನದಿಯಲ್ಲಿ ಭಾವಪೂರ್ಣವಾಗಿ ವಿಸರ್ಜಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ತೆಲಂಗಾಣಾದಲ್ಲಿ ಬೋಧನ್‍ದಲ್ಲಿನ ಧರ್ಮ ಪ್ರೇಮಿಗಳ ಸಾಪ್ತಾಹಿಕ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಪ್ರತಿ ವಾರ ಒಂದು ಉಪಕ್ರಮದ ಆಯೋಜನೆ ಮಾಡಲಾಗಿದೆ. ಅದರಂತೆ ಈ ವಾರದಲ್ಲಿ ಈ ಮೇಲಿನ ಉಪಕ್ರಮದ ನಿಯೋಜನೆಯನ್ನು ಮಾಡುವುದಾಗಿ ಧರ್ಮಪ್ರೇಮಿಗಳು ನಿರ್ಧರಿಸಿದ್ದರು. ಮೇಲಿನ ಉಪಕ್ರಮವು ಪೂರ್ಣವಾದ ನಂತರ ಎಲ್ಲಾ ಧರ್ಮಪ್ರೇಮಿಗಳು ಭಗವಂತ ಶ್ರೀಕೃಷ್ಣ ಮತ್ತು ಪರಾತ್ಪರ ಗುರು ಡಾಕ್ಟರ ಆಠವಲೆ ಅವರ ಚರಣಗಳಲ್ಲಿ ಕೃತಜ್ಞತೆ ವ್ಯಕ್ತ ಪಡಿಸಿದರು. ಈ ಉಪಕ್ರಮದಲ್ಲಿ ಸರ್ವಶ್ರೀ ಶಂಕರ, ರವೀಂದರ, ಬ್ರಹ್ಮಮ, ಹನುಮಂಡಲು, ಲೋಕೇಶ, ಸಂಯೋಷ ಇವರು ಭಾಗವಹಿಸಿದ್ದರು.