ಇಲ್ಲಿಯವರೆಗೆ, 9 ಕಾಶ್ಮೀರಿ ಹಿಂದೂಗಳಿಗೆ ಕಾಶ್ಮೀರದಲ್ಲಿ ತಮ್ಮ ಆಸ್ತಿಯನ್ನು ಮರಳಿ ಪಡೆದಿದ್ದಾರೆ ! – ಕೇಂದ್ರ ಸರಕಾರ

520 ಕಾಶ್ಮೀರಿ ಹಿಂದೂಗಳು ಕಾಶ್ಮೀರ ಕಣಿವೆಗೆ ಮರಳಿದರು !

ಕೇವಲ 9 ಕಾಶ್ಮೀರಿ ಹಿಂದೂಗಳಿಗೆ ಆಸ್ತಿ ದೊರಕಿತು, ಈ ಪರಿಸ್ಥಿತಿ ಖೇದಜನಕವಾಗಿದೆ. ಇದರರ್ಥ ಕಾಶ್ಮೀರದಲ್ಲಿ ಹಿಂದೂಗಳಿಗೆ ಸುರಕ್ಷಿತ ವಾತಾವರಣ ಇನ್ನೂ ಸೃಷ್ಟಿಯಾಗಿಲ್ಲ. ಅಲ್ಲಿನ ಮತಾಂಧರು ಮತ್ತು ಜಿಹಾದಿ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದರೆ ಮಾತ್ರ ಹಿಂದೂಗಳಿಗೆ ಸುರಕ್ಷಿತವೆನಿಸುವುದು !

ಪ್ರತಿನಿಧಿಕ ಛಾಯಾಚಿತ್ರ

ನವ ದೆಹಲಿ : ಕಾಶ್ಮೀರದಲ್ಲಿ ಸ್ಥಳಾಂತರಗೊಂಡ ಹಿಂದೂಗಳ ಆಸ್ತಿಯನ್ನು ಮರಳಿ ಪಡೆಯಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಅವರಲ್ಲಿ ಕೆಲವರಿಗೆ ಆಸ್ತಿಯನ್ನು ಹಿಂತಿರುಗಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 9 ಕಾಶ್ಮೀರಿ ಹಿಂದೂಗಳಿಗೆ ಅವರ ಆಸ್ತಿಯನ್ನು ಮರಳಿ ನೀಡಲಾಗಿದೆ ಎಂದು ಕೇಂದ್ರ ಸರಕಾರವು ರಾಜ್ಯಸಭೆಯಲ್ಲಿ ತಿಳಿಸಿದೆ.

1. ಕೇಂದ್ರ ಗೃಹರಾಜ್ಯ ಸಚಿವ ನಿತ್ಯಾನಂದ ರಾಯ ಅವರು ಈ ಬಗ್ಗೆ ಮಾಹಿತಿ ನೀಡುತ್ತಾ, ಆಯಾ ಜಿಲ್ಲಾ ದಂಡಾಧಿಕಾರಿಗಳು ಕಾಶ್ಮೀರದ ಎಲ್ಲ ಜಿಲ್ಲೆಗಳಲ್ಲಿ ಸ್ಥಳಾಂತರಗೊಂಡ ಕಾಶ್ಮೀರಿಗಳ ಆಸ್ತಿಗಳ ಕಾನೂನಿನ ಸಂರಕ್ಷಕರಾಗಿದ್ದಾರೆ. ಯಾರಾದರೂ ಈ ಆಸ್ತಿಯನ್ನು ಅತಿಕ್ರಮಿಸಿಕೊಂಡಿದ್ದರೆ, ಅವರ ವಿರುದ್ಧ ಜಿಲ್ಲಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುತ್ತಾರೆ. ಕಾಶ್ಮೀರಿ ಹಿಂದೂಗಳು ತಮ್ಮ ಭೂಮಿಯನ್ನು ಹಿಂಪಡೆಯಲು ಜಿಲ್ಲಾಧಿಕಾರಿಯನ್ನು ಸಂಪರ್ಕಿಸಬಹುದು.

2. ಜಮ್ಮು – ಕಾಶ್ಮೀರ ಆಡಳಿತವು ನೀಡಿದ ಮಾಹಿತಿಗನುಸಾರ, ಕಲಮ್ 370 ರದ್ದಾದ ನಂತರ ಒಟ್ಟು 520 ಸ್ಥಳಾಂತರಗೊಂಡಿದ್ದ ಜನರು ಕಾಶ್ಮೀರಕ್ಕೆ ಮರಳಿದ್ದಾರೆ. ಅಲ್ಲಿ ಅವರಿಗೆ `ಪ್ರಧಾನಮಂತ್ರಿ ವಿಕಾಸ ಪ್ಯಾಕೇಜ್ –2015′ ಅಡಿಯಲ್ಲಿ ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗುತ್ತದೆ.