ಪಾಕ್‍ನಲ್ಲಿನ ಧ್ವಂಸ ಮಾಡಿದ್ದ ದೇವಸ್ಥಾನವನ್ನು ಪಾಕಿಸ್ತಾನ ಸರಕಾರದಿಂದ ದುರಸ್ತಿ ಮಾಡಿ ದೇವಸ್ಥಾನವನ್ನು ಪುನಃ ಹಿಂದೂಗಳಿಗೆ ಒಪ್ಪಿಸಿತು

ಲಾಹೋರ್ (ಪಾಕಿಸ್ತಾನ) – ಪಾಕ್ ನಲ್ಲಿನ ಪಂಜಾಬ ಪ್ರಾಂತದಲ್ಲಿನ ಭೊಂಗ ನಗರದಲ್ಲಿ ಆಗಸ್ಟ್ 4 ರಂದು ಮುಸಲ್ಮಾನರ ಸಮೂಹವು ಧ್ವಂಸ ಮಾಡಿದ್ದ ಶ್ರೀ ಗಣಪತಿ ದೇವಸ್ಥಾನವನ್ನು ಪಾಕ್ ಸರಕಾರವು ದುರಸ್ತಿ ಮಾಡಿದ ನಂತರ ಆ ದೇವಸ್ಥಾನವನ್ನು ಪುನಃ ಹಿಂದೂಗಳಿಗೆ ಒಪ್ಪಿಸಲಾಯಿತು. (ಪಾಕ್ ಸರಕಾರವು ಇನ್ನು ಪಾಕ್‍ನಲ್ಲಿನ ಎಲ್ಲ ಹಿಂದೂ ದೇವಸ್ಥಾನಗಳಿಗೆ ರಕ್ಷಣೆಯನ್ನು ನೀಡಿ ಈ ರೀತಿ ಘಟನೆ ಮರುಕಳಿಸಿದ ಹಾಗೆ ನೋಡಿಕೊಳ್ಳಬೇಕು. – ಸಂಪಾದಕರು)