ಪಾಕಿಸ್ತಾನದಲ್ಲಿ ೮ ವರ್ಷದ ಹಿಂದೂ ಹುಡುಗನಿಗೆ ಧರ್ಮನಿಂದನೆಯ ಆರೋಪದ ವಿರುದ್ಧ ಭಾರತದಲ್ಲಿ ಧರ್ಮಪ್ರೇಮಿಗಳಿಂದ #SaveHinduBoyInPak ಟ್ರೆಂಡ್ !

ರಾಷ್ಟ್ರೀಯ ಟ್ರೆಂಡ್‌ನಲ್ಲಿ ಮೂರನೇ ಸ್ಥಾನ !

ಮುಂಬಯಿ – ಪಾಕಿಸ್ತಾನದಲ್ಲಿ ೮ ವರ್ಷದ ಹಿಂದೂ ಹುಡುಗನ ಮೇಲೆ ಧರ್ಮನಿಂದನೆಯ ಅಪರಾಧವನ್ನು ದಾಖಲಿಸಿ ಆತನ ಮೇಲೆ ಮೊಕದ್ದಮೆ ನಡೆಸಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನಿಗೆ ಗಲ್ಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆತನ ಕುಟುಂಬದವರು, ‘ಈ ಹುಡುಗನಿಗೆ ಧರ್ಮನಿಂದನೆ ಎಂದರೆ ಏನು ಎಂಬುದೇ ಗೊತ್ತಿಲ್ಲ ಹೀಗಿರುವಾಗ ಆತನ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದ್ದಾರೆ. ಸದ್ಯ ಹುಡುಗ ಪೊಲೀಸರ ವಶದಲ್ಲಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ ೧೧ ರಂದು ಭಾರತದ ಧರ್ಮಪ್ರೇಮಿಗಳು ಟ್ವಿಟರ್‌ನಲ್ಲಿ #SaveHinduBoyInPak ಈ ಹೆಸರಿನಲ್ಲಿ ‘ಹ್ಯಾಶ್‌ಟ್ಯಾಗ್’ ‘ಟ್ರೆಂಡ್’ ಮಾಡಿ ‘ಈ ಹುಡುಗನಿಗೆ ಭಾರತ ಸರಕಾರ ಹಾಗೂ ಮಾನವ ಹಕ್ಕುಗಳ ಸಂಘಟನೆಯವರು ಸಹಾಯ ಮಾಡಬೇಕು’, ಎಂದು ಒತ್ತಾಯಿಸಿದ್ದಾರೆ. ಈ ಟ್ರೆಂಡ್ ರಾಷ್ಟ್ರೀಯ ಮಟ್ಟದ ಟ್ರೆಂಡ್‌ನಲ್ಲಿ ಮೂರನೇ ಸ್ಥಾನದಲ್ಲಿತ್ತು ಹಾಗೂ ಇದರಲ್ಲಿ ೧೦ ಸಾವಿರಕ್ಕೂ ಹೆಚ್ಚು ಧರ್ಮಪ್ರೇಮಿಗಳು ಟ್ವೀಟ್ಸ್ ಮಾಡಿ ಪಾಕಿಸ್ತಾನದಲ್ಲಿ ಧರ್ಮನಿಂದನೆಯ ಕಾನೂನಿನ ದುರುಪಯೋಗ ಆಗುತ್ತಿರುವ ಬಗ್ಗೆ ಹೇಳಿದರು. ಪಾಕಿಸ್ತಾನದಲ್ಲಿನ ಹಿಂದೂಗಳ ರಕ್ಷಣೆಗಾಗಿ ಈ ಕಾನೂನನ್ನು ಅಲ್ಲಿನ ಸರಕಾರ ರದ್ದು ಪಡಿಸಬೇಕು, ಎಂದು ಈ ಸಮಯದಲ್ಲಿ ಒತ್ತಾಯಿಸಲಾಯಿತು.