ಗುಣವಂತ ವ್ಯಕ್ತಿಯು ಯಾವುದೇ ಸವಾಲನ್ನು ಸ್ವೀಕರಿಸಬಲ್ಲನು ಮತ್ತು ಅವನು ಜೀವನವನ್ನು ಹೆಚ್ಚು ಜಾಗರೂಕತೆಯಿಂದ  ನಡೆಸಬಲ್ಲನು !

ಈ ವ್ಯಕ್ತಿತ್ವವನ್ನು ಪಡೆದುಕೊಂಡಿರುವ ಯುವಕನು ರಾಜಕಾರಣದಲ್ಲಿ ಸೇರಿಕೊಂಡರೂ ಸ್ವಾರ್ಥಿಯಾಗುವುದಿಲ್ಲ. ಅವನು ಸಮಾಜಕಲ್ಯಾಣದಲ್ಲಿ ಸೇರಿಕೊಂಡರೂ ಢೋಂಗಿಯಾಗುವುದಿಲ್ಲ. ಅವನ ಕಾರ್ಯಕ್ರಮಗಳ ಗಾಳಿಗೋಪುರಗಳಾಗುವುದಿಲ್ಲ. ನಿಜವಾದ ಕಳಕಳಿಯಿಂದ ಮಾಡಿದ ಮಾನವನ ಸೇವೆಯಿಂದ ಇಂತಹ ಉದಾತ್ತ ಸ್ವರೂಪ ಅವನಿಗೆ ಪ್ರಾಪ್ತವಾಗಲು ಸಮಯ ತಗಲಲಾರದು. ಯಾವ ವ್ಯಕ್ತಿಯು ಈ ವ್ಯಕ್ತಿತ್ವವನ್ನು ಪಡೆದುಕೊಂಡಿದ್ದಾನೆಯೋ, ಆ ಸರ್ವಸಾಮಾನ್ಯ ಯುವಕನೂ ತನ್ನ ಕ್ಷಮತೆಗನುಸಾರ ಜೀವನದ ವಾಸ್ತವಿಕತೆಯನ್ನು ಎದುರಿಸ ಬಲ್ಲನು. ಅವನು ತನ್ನ ಮಹತ್ವ, ಕ್ಷಮತೆ ಮತ್ತು ಮಿತಿಗಳನ್ನು ತಿಳಿದು ಜೀವನವನ್ನು ಹೆಚ್ಚು ಸಮರ್ಪಕವಾಗಿ ನೋಡಬಲ್ಲನು. – ಶ್ರೀ. ರವೀಂದ್ರ ಪರೆತಕರ (ಕೃಪೆ : ತ್ರೈಮಾಸಿಕ ಪ್ರಜ್ಞಾಲೋಕ)