ಲಂಡನ್ (ಬ್ರಿಟನ್)- ಬ್ರಿಟನ್ ನಲ್ಲಿ ವಾಸವಿರುವ ಹಿಂದೂ ಮತ್ತು ಸಿಕ್ಖ್ ಸಮಾಜದಲ್ಲಿ ನಿಧನರಾದ ಜನರ ಅಸ್ಥಿಯನ್ನು ಅಲ್ಲಿಯೇ ನದಿಯಲ್ಲಿ ವಿಸರ್ಜಿಸಲು ಸರಕಾರವು ಅನುಮತಿ ಕೊಟ್ಟಿದೆ. ಈವರೆಗೂ ಅಲ್ಲಿಯ ನದಿಗಳಲ್ಲಿ ಅಸ್ಥಿ ವಿಸರ್ಜಿಸಲು ಹಿಂದೂ ಮತ್ತು ಸಿಕ್ಖ್ ಸಮಾಜದವರಿಗೆ ಅನುಮತಿ ಇರಲಿಲ್ಲ. ಹಿಂದೆ ಅಸ್ಥಿ ವಿಸರ್ಜನೆಗಾಗಿ ಹಿಂದೂ ಮತ್ತು ಸಿಕ್ಖ್‍ರು ಭಾರತಕ್ಕೆ ಬರಬೇಕಾಗಿತ್ತು. ಅನೇಕ ವರ್ಷ ಸಂಘರ್ಷ ಮಾಡಿದಮೇಲೆ ಈ ಅನುಮತಿಯು ಸಿಕ್ಕಿದೆ. ಈಗ ಲಂಡನಿನ ಟಫ ನದಿಯಲ್ಲಿ ಈ ಎರಡು ಸಮಾಜದ ಜನರಿಗೆ ಅವರ ಕುಟುಂಬದವರು ಅಸ್ಥಿ ವಿಸರ್ಜನೆ ಮಾಡ ಬಹುದಾಗಿದೆ.
🔴 ‘This is an important aspect of the last rites for the departed souls’https://t.co/uB81Ryfarm
— BBC Wales News (@BBCWalesNews) July 31, 2021