ಯಜ್ಞ-ಯಾಗಗಳಿಂದ ಮಾನವರು ಮತ್ತು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮವಾಗುತ್ತದೆ ! – ಸಂಶೋಧನೆಯ ನಿಷ್ಕರ್ಷ

ಹಿಂದೂಗಳನ್ನು ‘ಹಿಂದುಳಿದವರು’ ಮತ್ತು ‘ಅವೈಜ್ಞಾನಿಕರು’ ಎಂದು ಕೀಳಾಗಿ ನೋಡುವ ದೇಶದ ಮತ್ತು ವಿದೇಶಿ ಬುದ್ಧಿಜೀವಿಗಳಿಗೆ ಕಪಾಳಮೋಕ್ಷ !

ಯಜ್ಞದಿಂದ ಮಾಲಿನ್ಯವು ಕಡಿಮೆ ಆಗುತ್ತದೆ ಅಲ್ಲದೇ ಮಾನವನ ಒತ್ತಡ ಕಡಿಮೆಯಾಗುತ್ತದೆ ಎಂದು ಸಾಬೀತು !

ವೈಜ್ಞಾನಿಕ ಉಪಕರಣಗಳ ಸಹಾಯದಿಂದ ನಡೆಸಲಾದ ಸಂಶೋಧನೆ !

* ಪ್ರಾಚೀನ ವೈದಿಕ ಹಿಂದೂ ಸಂಸ್ಕೃತಿಯು ಪಾಶ್ಚಾತ್ಯ ಸಂಸ್ಕೃತಿಗಿಂತ ಹೆಚ್ಚು ಪ್ರಗತಿ ಸಾಧಿಸಿತ್ತು, ಅದೇ ರೀತಿ ಅದನ್ನು ತಯಾರಿಸಿದ ಋಷಿಮುನಿಗಳು ಆ ಕಾಲದ ಶ್ರೇಷ್ಠ ವಿಜ್ಞಾನಿಗಳಾಗಿದ್ದರು, ಎಂಬುದು ಮತ್ತೊಮ್ಮೆ ಸಿದ್ಧವಾಯಿತು ! – ಸಂಪಾದಕರು

* ಹಿಂದೂಗಳೇ, ಸ್ವ-ಧರ್ಮದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಈಗಲಾದರೂ ಧರ್ಮಾಚರಣೆ ಮಾಡಿ ! ಇದರಿಂದ, ನಮ್ಮ ಜೀವನದಲ್ಲಿ ಚಿಂತೆ, ಕಾಳಜಿ ಮತ್ತು ದುಃಖಗಳು ದೂರವಾಗಿ ಜೀವನವು ಸುಖಮಯವಾಗಿಸಲು ಸಾಧ್ಯವಿದೆ ಎಂಬುದನ್ನು ಅರಿಯಿರಿ ! – ಸಂಪಾದಕರು

* ಭಾರತೀಯ ನಗರಗಳು ವಿಶ್ವದ ಅತ್ಯಂತ ಕಲುಷಿತ ನಗರಗಳಲ್ಲಿ ಒಂದಾಗಿದೆ. ಇಂತಹ ಸಮಯದಲ್ಲಿ, ಈ ನಗರಗಳಲ್ಲಿ ಅಭ್ಯಾಸಪೂರ್ಣ ಮತ್ತು ಸಮಗ್ರವಾಗಿ ಯಜ್ಞ-ಯಾಗಗಳನ್ನು ಆಯೋಜನೆ ಮಾಡಿದರೆ ಮಾಲಿನ್ಯದ ಮಟ್ಟವು ಖಂಡಿತವಾಗಿಯೂ ಕಡಿಮೆಯಾಗುತ್ತದೆ. ಇದರಿಂದ ಮಾಲಿನ್ಯವನ್ನು ಕಡಿಮೆಗೊಳಿಸುವ ಪರಿಣಾಮಕಾರಿ `ಭಾರತೀಯ ಮಾಡೆಲ್’ ಅನ್ನು ವಿಶ್ವದಾದ್ಯಂತ ಅವಲಂಬಿಸಬಹುದು. ಮೋದಿ ಸರಕಾರವು ಇದಕ್ಕೆ ಮುಂದಾಗಬೇಕು ಎಂದು ರಾಷ್ಟ್ರಪ್ರೇಮಿ ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು

ಯಜ್ಞ (ಸಾಂಕೇತಿಕ ಛಾಯಾಚಿತ್ರ)

ಉಜ್ಜೈನ್ (ಮಧ್ಯಪ್ರದೇಶ) – ಯಜ್ಞಯಾಗಗಳಿಂದ ಮಾನವನ ಒತ್ತಡವನ್ನು ಕಡಿಮೆ ಮಾಡುವುದರೊಂದಿಗೆ ವಾತಾವರಣದಲ್ಲಿನ ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡಬಹುದಾಗಿದೆ ಎಂದು ಇತ್ತೀಚಿನ ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಈ ಬಗ್ಗೆ, ಗಾಯತ್ರಿ ಶಕ್ತಿಪೀಠ ಮತ್ತು ಗುಜರಾತಿ ಮಾಳಿ ಸಮಾಜದ ಧರ್ಮಶಾಲಾ ಈ ಎರಡು ಸ್ಥಳಗಳಲ್ಲಿ 2 ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಯಜ್ಞದ ಫಲಿತಾಂಶಗಳನ್ನು ಆಧುನಿಕ ಯಂತ್ರೋಪಕರಣಗಳ ಸಹಾಯದಿಂದ ಪರೀಕ್ಷಿಸಲಾಯಿತು. ಈ ಪರೀಕ್ಷೆಯಿಂದ, ಯಜ್ಞವು ಮನುಷ್ಯನ ಮತ್ತು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟವಾಯಿತು.

ಈ ಸಮಯದಲ್ಲಿ ಜಬಲಪುರದಿಂದ ಬಂದಿದ್ದ ಪ್ರಕಾಶ ಮುರಜಾನಿ, ಉಜ್ಜೈನ್‍ನ ಯಜ್ಞಾಚಾರ್ಯ ಮಾಧುರಿ ಸೋಲಂಕಿ, ಯಜ್ಞಿಕ ಶಾಸ್ತ್ರದ ಸಂಶೋಧಕರಾದ ನೀತಿ ಟಂಡನ ಇವರು ದಿನನಿತ್ಯ ಯಜ್ಞಯಾಗಗಳನ್ನು ನಡೆಸುವ ಶಕ್ತಿಪೀಠ ಅದೇ ರೀತಿ ದಟ್ಟವಾದ ಜನವಸತಿ, ಸಾರಿಗೆ, ಶಬ್ದ ಮತ್ತು ಇತರ ಪ್ರಕಾರಗಳ ಮಾಲಿನ್ಯ ವಿರುವಂತಹ ಧರ್ಮಶಾಲಾ ಈ ಎರಡೂ ಸ್ಥಳಗಳಲ್ಲಿ ಅವರಲ್ಲಿನ ಆಧುನಿಕ ಉಪಕರಣಗಳ ಸಹಾಯದಿಂದ ಪರೀಕ್ಷಣೆ ಮಾಡಲಾಯಿತು.

1. ಶಕ್ತಿಪೀಠದ ಯಜ್ಞಶಾಲೆ ಮತ್ತು ಗೋಶಾಲೆಯಲ್ಲಿನ ವಾತಾವರಣವು ಅತ್ಯಂತ ಸಕಾರಾತ್ಮಕ !

‘ಔರಾ ಸ್ಕ್ಯಾನರ್’ ಸಹಾಯದಿಂದ ಪರೀಕ್ಷಿಸುತ್ತಿರುವ ಕಾರ್ಯಕರ್ತ

ಮೊದಲು ವಾತಾವರಣದ ಪರೀಕ್ಷೆಯನ್ನು ‘ಔರಾ ಸ್ಕ್ಯಾನರ್’ ಸಹಾಯದಿಂದ ಶಕ್ತಿಪೀಠದಲ್ಲಿ ನಡೆಸಲಾಯಿತು. ಈ ಉಪಕರಣದಿಂದ ಯಾವುದೇ ವಸ್ತುವಿನ ಪ್ರಭಾವಳಿ ಅಂದರೆ ‘ಔರಾ’ವನ್ನು ಅಳೆಯಬಹುದು. ಆಗ ಯಾಗಶಾಲೆ ಮತ್ತು ಗೋಶಾಲೆಯಲ್ಲಿ ಹೆಚ್ಚಿನ ಪ್ರಭಾವ (ಔರಾ) ಕಂಡುಬಂದಿದೆ. ಇತರ ಸ್ಥಳಗಳ ಪರೀಕ್ಷೆಗಳಲ್ಲಿ ಈ ಪರಿಣಾಮವು ಅತ್ಯಲ್ಪವಿತ್ತು. ಶಕ್ತಿಪೀಠದ ಸ್ಥಳದಲ್ಲಿ ಪ್ರತಿನಿತ್ಯ ಯಜ್ಞಯಾಗಗಳನ್ನು ಮಾಡಲಾಗುತ್ತದೆ. ಅದರಿಂದಾಗಿ ಅಲ್ಲಿಯ ಪ್ರಭಾವಳಿ ಹೆಚ್ಚು ಇರುವುದು ಗಮನಕ್ಕೆ ಬಂದಿತು. ಗೋಶಾಲಾ ಸ್ಥಳದಲ್ಲಿ ನಡೆಸಿದ ಪರೀಕ್ಷೆಯು ‘ಔರಾ ಉಪಕರಣ’ದ ಸಂಕೇತವು 360 ಡಿಗ್ರಿ ತೋರಿಸಿದೆ. ಇದರಿಂದ ಗೋಶಾಲೆಯ ಪರಿಸರದಲ್ಲಿ ಅತ್ಯಂತ ಸಕಾರಾತ್ಮಕ ವಾತಾವರಣ ಇರುತ್ತದೆ, ಎಂಬುದು ಗಮನಕ್ಕೆ ಬಂದಿತು. (ಇದರಿಂದ ಹಿಂದೂಗಳು ಪೂಜಿಸುವ ಗೋವಿನ ಆಧ್ಯಾತ್ಮಿಕ ಮಹತ್ವವು ಗಮನಕ್ಕೆ ಬರುತ್ತದೆ ! ‘ಗೋವಿನಲ್ಲಿ 33 ಕೋಟಿ ದೇವತೆಗಳು ಇರುತ್ತಾರೆ’, ಎಂಬ ಹಿಂದೂಗಳ ಶ್ರದ್ಧೆಗೆ ವಿಜ್ಞಾನವೂ ಒಪ್ಪಿಗೆ ಸೂಚಿಸಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. – ಸಂಪಾದಕರು)

2. ಯಜ್ಞದಿಂದ ಮನುಷ್ಯನ ಒತ್ತಡ ಕಡಿಮೆಯಾಗುತ್ತದೆ !

ಸಂಶೋಧನೆಯ ಭಾಗವೆಂದು ಧರ್ಮಶಾಲಾ ಮತ್ತು ಶಕ್ತಿ ಪೀಠಗಳೆರಡರಲ್ಲೂ ಯಜ್ಞಗಳನ್ನು ಮಾಡಲಾಯಿತು. `ಹ್ಯಾಪಿನೆಸ್ ಇಂಡೆಕ್ಸ್ ಮೀಟರ್’ ಎಂಬ ಹೆಸರಿನ ಉಪಕರಣದ ಸಹಾಯದಿಂದ, ಯಜ್ಞದ ಮೊದಲು ಮತ್ತು ಯಜ್ಞದ ನಂತರ ಉಪಸ್ಥಿತರಿದ್ದ ಜನರ ಒತ್ತಡದ ಮಟ್ಟವನ್ನು ಅಳೆಯಲಾಯಿತು. ಈ ಉಪಕರಣದ ಸಹಾಯದಿಂದ ಮನಸ್ಸಿನ ಶಾಂತಿ ಮತ್ತು ಸ್ಥಿರತೆಯನ್ನು ಅಳೆಯಲಾಗುತ್ತದೆ. ಯಜ್ಞದ ಮೊದಲು ಹೆಚ್ಚಿನ ಒತ್ತಡವನ್ನು ಹೊಂದಿದ್ದ ಜನರ ಒತ್ತಡವು ಯಜ್ಞದ ನಂತರ ಕಡಿಮೆಯಾಗಿರುವುದು ಗಮನಕ್ಕೆ ಬಂತು. ಧರ್ಮಶಾಲಾದ ಸ್ಥಳದಲ್ಲಿ ನಡೆಸಿದ ಪ್ರಯೋಗದಲ್ಲಿ 10 ರಲ್ಲಿ 9 ಜನರಿಗೆ ಒತ್ತಡ ಕಡಿಮೆಯಾಗಿರುವುದು ಕಂಡುಬಂದಿದೆ. ಇದರಿಂದ ಯಜ್ಞವನ್ನು ಮಾಡುವುದರಿಂದ ಜನರ ಮಾನಸಿಕ ಸ್ತರದ ಮೇಲೆ ಸಕಾರಾನಾತ್ಮಕ ಪರಿಣಾಮ ಬೀರುತ್ತದೆ ಎಂದು ಸಾಬೀತಾಯಿತು.

3. ಯಜ್ಞದಿಂದ ಮಾಲಿನ್ಯದ ಮಟ್ಟ ಕಡಿಮೆಯಾಗುತ್ತದೆ !

ಯಜ್ಞಕ್ಕಿಂತ ಮೊದಲು ಧರ್ಮಶಾಲಾ ಪರಿಸರದಲ್ಲಿ ಮಾಲಿನ್ಯ ಹೆಚ್ಚು ಪ್ರಮಾಣದಲ್ಲಿತ್ತು. `ಏರ್ ವೇದ’ ಉಪಕರಣದ ಸಹಾಯದಿಂದ, `ಪಿಎಮ್ 2.5‘, ‘ಪಿಎಮ್ 10‘ ಮತ್ತು `ಕಾರ್ಬನ್ ಡೈಆಕ್ಸೈಡ್’ ಈ ಮಾರಕ ವಾಯುವಿನ ಮಟ್ಟವನ್ನು ಯಜ್ಞದ ಮೊದಲು ಮತ್ತು ನಂತರ ಅಳೆಯಲಾಯಿತು. ಎರಡೂ ಸ್ಥಳಗಳಲ್ಲಿ ಯಜ್ಞದ ನಂತರ, ಈ ಮೂರು ಅಂಶಗಳ ಮಟ್ಟವು ಕಡಿಮೆಯಾಗಿರುವುದು ಗಮನಕ್ಕೆ ಬಂದಿತು. ಇದರಿಂದ ಯಜ್ಞದಿಂದಾಗಿ ಮಾಲಿನ್ಯ ಕಡಿಮೆಯಾಗುವುದು ಸಾಬೀತಾಯಿತು. `ಏರ್ ವೇದಾ’ ಈ ಉಪಕರಣದಿಂದ ಗಾಳಿಯಲ್ಲಿನ ವಿವಿಧ ವಾಯುಗಳ ಘಟಕಗಳನ್ನು ಅಳೆಯಬಹುದು.

4. ಯಜ್ಞದಿಂದ ವಾತಾವರಣದ ಸಾಂದ್ರತೆಯು ಕಡಿಮೆಯಾಗುವುದು

ಧರ್ಮಶಾಲೆಯ ಯಾವ ಕೋಣೆಯಲ್ಲಿ ಪ್ರಯೋಗವನ್ನು ನಡೆಸಲಾಯಿತೋ, ಅಲ್ಲಿ ಯಜ್ಞದ ಮೊದಲು ಮಾಲಿನ್ಯದ ಸಾಂದ್ರತೆಯು ಹೆಚ್ಚಾಗಿತ್ತು. ಇದು ಯಜ್ಞದ ಸಮಯದಲ್ಲಿ ಹೆಚ್ಚಾಯಿತು, ಮತ್ತು ಯಜ್ಞದ ಒಂದು ಗಂಟೆಯ ನಂತರ, ಅದು ಶೀಘ್ರವಾಗಿ ಕಡಿಮೆ ಆಯಿತು.