ಇಡೀ ದೇಶದಲ್ಲಿ ವಿವಿಧ ರೈಲ್ವೆ ಪ್ಲಾಟ್ ಫಾರ್ಮ್ ಗಳು ಮತ್ತು ಸುತ್ತಲಿನ ಪರಿಸರಗಳಲ್ಲಿ ೧೭೯ ಅನಧಿಕೃತ ಧಾರ್ಮಿಕ ಸ್ಥಳಗಳು ಅಸ್ತಿತ್ವದಲ್ಲಿ – ಕೇಂದ್ರೀಯ ರೈಲ್ವೆ ಮಂತ್ರಿ

ಇಷ್ಟೊಂದು ಅನಧಿಕೃತ ಧಾರ್ಮಿಕ ಸ್ಥಳಗಳು ಕಟ್ಟುವ ವರೆಗೂ ರೈಲ್ವೆ ಪ್ರಶಾಸನ ಮಲಗಿತ್ತೆ ? ಇದಕ್ಕೆ ಜವಾಬ್ದಾರರಾಗಿರುವ ಅಧಿಕಾರಿಗಳಿಗೆ ಸರ್ಕಾರ ಜೀವಾವಧಿ ಶಿಕ್ಷೆ ವಿಧಿಸಬೇಕು !

ಕೇಂದ್ರೀಯ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್

ನವದೆಹಲಿ : ಇಡೀ ದೇಶದಲ್ಲಿ ಬೇರೆ ಬೇರೆ ರೈಲ್ವೆ ಪ್ಲಾಟ್ ಫಾರ್ಮ್ ಮತ್ತು ಸುತ್ತಲಿನ ಪರಿಸರದಲ್ಲಿ ೧೭೯ ಅನಧಿಕೃತ ದರ್ಗಾ, ಮಸೀದಿ, ಮತ್ತು ಮಂದಿರ ಮುಂತಾದ ಧಾರ್ಮಿಕ ಸ್ಥಳಗಳು ಅಸ್ತಿತ್ವದಲ್ಲಿವೆ. ಈ ಮಾಹಿತಿಯನ್ನು ಕೇಂದ್ರೀಯ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ಇವರು ಜುಲೈ ೩೦ರಂದು ರಾಜ್ಯಸಭೆಯಲ್ಲಿ ನೀಡಿದರು. ವೈಷ್ಣವ ಮುಂದುವರಿಸುತ್ತ, ರೈಲ್ವೆ ಆಡಳಿತ, ರೈಲ್ವೆ ಸಂರಕ್ಷಣಾ ದಳ (ಖ.P.ಈ) ಮತ್ತು ಸ್ಥಾನಿಯ ಆಡಳಿತ ಇವರ ಮುಖಾಂತರ ಎಲ್ಲಾ ಅನಧಿಕೃತ ಧಾರ್ಮಿಕ ಸ್ಥಳಗಳನ್ನು ತೆರವುಗೊಳಿಸುವ ಪ್ರಯತ್ನ ನಡೆಯುತ್ತಿದೆ. ಎಲ್ಲ ಧಾರ್ಮಿಕ ಸ್ಥಳಗಳನ್ನು ನೋಂದಣಿ ಮಾಡಲಾಗಿದೆ. ಅವು ಇನ್ನಷ್ಟು ಹೆಚ್ಚಾಗಬಾರದು ಎಂದು ಕಾಳಜಿ ವಹಿಸಲಾಗಿದೆ. ವೈಷ್ಣವ ಹೇಳಿದರು, ಈ ಅನಧಿಕೃತ ಧಾರ್ಮಿಕ ಸ್ಥಳಗಳು ತೆರವುಗೊಳಿಸುವಾಗ ಜನರ ಆಂದೋಲನ, ರಾಜ್ಯ ಸರ್ಕಾರಗಳ ಅಸಹಕಾರ, ಕಾನೂನು ಮತ್ತು ಸುವ್ಯವಸ್ಥೆಯ ಪ್ರಶ್ನೆ ನಿರ್ಮಾಣವಾಗುವುದು, ಇಂಥ ಅನೇಕ ಅಡಚಣೆಗಳು ಬಂದಿವೆ. ಸದರಿ ಅನಧಿಕೃತ ಧಾರ್ಮಿಕ ಸ್ಥಳಗಳು ರೈಲ್ವೆಯ ಗಡಿಯ ಹೊರಗೆ ಸ್ಥಳಾಂತರಿಸಲು ಸಂಬಂಧಿತ ವ್ಯಕ್ತಿಗಳ ಮನವೊಲಿಸಲು ಪ್ರಯತ್ನ ರೈಲ್ವೆ ಆಡಳಿತ ಮಾಡಿದೆ.