ಮಹೋಬಾ (ಉತ್ತರಪ್ರದೇಶ) ಇಲ್ಲಿಯ ಅಪ್ರಾಪ್ತ ಬಾಲಕಿಯನ್ನು ಬಲಾತ್ಕರಿಸಿದ ಆರೋಪಿಯಿಂದ ಪೊಲೀಸ್ ಕೊಠಡಿಯಲ್ಲಿ ಆತ್ಮಹತ್ಯೆ.

ಮೂರು ಪೊಲೀಸರು ಅಮಾನತು

* ಪೊಲೀಸರಿಂದ ಬಂಧಿಸಲ್ಪಟ್ಟ ವ್ಯಕ್ತಿಗಳ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಪ್ರತಿದಿನ ತಪಾಸಣೆ ಮಡುವ ಪದ್ಧತಿ ಜಾರಿ ಮಾಡಬೇಕೆಂದು ಬೇಡಿಕೆಯನ್ನು ಇಡಬೇಕು

* ಇದಕ್ಕೆ ಜವಾಬ್ದಾರರಾದ ಪೊಲೀಸರ ಮೇಲೆ ಕೊಲೆಯ ಆರೋಪವನ್ನು ದಾಖಲಿಸಬೇಕು

ಸಾಂಕೇತಿಕ ಛಾಯಾಚಿತ್ರ

ಮಹೋಬಾ (ಉತ್ತರಪ್ರದೇಶ) – ಅಪ್ರಾಪ್ತ ಬಾಲಕಿಯನ್ನು ಬಲಾತ್ಕರಿಸಿದ ಆರೋಪಿಯಾದ ಮೋಹಬಾ ಜಿಲ್ಲೆಯ ಖಾಂಡ್ವ ಊರಿನಲ್ಲಿ ವಾಸಿಸುವ ಸಂಜಯ್ ಎಂಬಾತನು ಜುಲೈ 27 ರಂದು ರಾತ್ರಿ ನೇಣು ಹಾಕಿಕೊಂಡು ಮೋದಾಹ ಪೊಲೀಸ್ ಸ್ಟೇಷನ್ ಕೊಠಡಿಯಲ್ಲಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾನೆ. ಸಂಜಯನನ್ನು ತಕ್ಷಣ ಸಮೀಪದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರೆಗೆ ಸೇರಿಸುವ ಮೊದಲೇ ಅವನು ಸಾವನ್ನಪ್ಪಿದ್ದನು ಎಂದು ಡಾಕ್ಟರರು ಸ್ಪಷ್ಟಪಡಿಸಿದರು. ಈ ಪ್ರಕರಣದಲ್ಲಿ ಪ್ರಾಥಮಿಕ ವಿಚಾರಣೆಯಲ್ಲಿ ಒಬ್ಬ ಇನ್ಸ್ ಪೆಕ್ಟರ್ ಮತ್ತು ಇಬ್ಬರು ಹವಾಲ್ದಾರರನ್ನು ಅಮಾನತುಗೊಳಿಸಲಾಗಿದೆ. ಈ ಪ್ರಕರಣವನ್ನು ಹಮೀಪುರದ ಹೆಚ್ಚುವರಿ ಇನ್ಸ್ ಪೆಕ್ಟರ್ ರ ಬಳಿ ವಿಚಾರಣೆಗಾಗಿ ಒಪ್ಪಿಸಲಾಗಿದೆ. ಸಂಜಯನ ಮೃತದೇಹವನ್ನು ಶವವಿಚ್ಛೇದನೆಗಾಗಿ (ಪೋಸ್ಟ್ ಮಾರ್ಟಮ್) ಕಳುಹಿಸಿರುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.