ಪ್ರಿಸ್ಕ್ರಿಪ್ಷನ್ ಇಲ್ಲದೇನೆ ಗರ್ಭಪಾತದ ಔಷಧಿಯನ್ನು ಮಾರಾಟ ಮಾಡಿದ ಸಂಬಂಧ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಇವರಿಗೆ ನೋಟಿಸ್ ಜಾರಿ.

ಮುಂಬಯಿ– ಡಾಕ್ಟರ್ ಗಳ ಪ್ರಿಸ್ಕ್ರಿಪ್ಷನ್ ಇಲ್ಲದೇನೆ ಗರ್ಭಪಾತದ ಔಷಧಿಯನ್ನು ಆನ್ ಲೈನ್ ಮಾರಾಟ ಪ್ರಕರಣ ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ಇವರಿಗೆ ಆಹಾರ ಮತ್ತು ಔಷಧಿಯ ಇಲಾಖೆಯಿಂದ ನೋಟಿಸನ್ನು ಜಾರಿ ಮಾಡಲಾಗಿದೆ. ಈ ವಿಷಯವಾಗಿ ಪುಣೆಯಲ್ಲಿ ಒಬ್ಬ ಔಷಧ ಮಾರಾಟಗಾರನು ಆಹಾರ ಮತ್ತು ಔಷಧ ಇಲಾಖೆಯಲ್ಲಿ ದೂರನ್ನು ದಾಖಲಿಸಿದ್ದನು. ಈ ಕಾರಣದಿಂದ ಪುಣೆಯ ಪೊಲೀಸ್ ಇಲಾಖೆಯವರು ದೂರನ್ನು ದಾಖಲಿಸಿಕೊಂಡು ವಿಚಾರಣೆಯನ್ನು ಶುರುಮಾಡಿದ್ದಾರೆ. (ಈ ರೀತಿ ಗರ್ಭಪಾತದ ಔಷಧೀಯ ರಾಜಾರೋಷವಾಗಿ ಕಾನೂನುಬಾಹಿರವಾಗಿ ಮಾರಾಟ ಮಾಡುತ್ತಿದ್ದರೂ ಸಹ ಆರೋಗ್ಯ ಇಲಾಖೆ ಮತ್ತು ಸರಕಾರಕ್ಕೆ ಈ ಮಾಹಿತಿಯು ಹೇಗೆ ಸಿಗುವುದಿಲ್ಲ? ಇದರಲ್ಲಿ ಯಾರ ಸಂಬಂಧಿಕರು ಇರುವರು? ಇದನ್ನು ಕಂಡುಹಿಡಿದು ಈ ಪ್ರಕರಣದಲ್ಲಿ ಕಠಿಣವಾದ ಶಿಕ್ಷೆಯನ್ನು ಮಾಡಬೇಕು. – ಸಂಪಾದಕರು)