ಭವಾನಿಗಡ್ (ಪಂಜಾಬ್) ನಲ್ಲಿ ಅಪರಿಚಿತ ವ್ಯಕ್ತಿಗಳಿಂದ ದೇವಾಲಯ ಮತ್ತು ವಿಗ್ರಹಗಳ ಧ್ವಂಸ !

ಪಂಜಾಬ್‍ನಲ್ಲಿ ಹಿಂದೂ ದೇವಾಲಯಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗುತ್ತಿದೆ ಮತ್ತು ಅಲ್ಲಿ ಧಾರ್ಮಿಕ ಅಶಾಂತಿಯನ್ನು ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ. ‘ಇದರ ಹಿಂದೆ ಖಲಿಸ್ತಾನಿಗಳು ಇದ್ದಾರೆಯೇ ?’ ಎಂದು ಪೊಲೀಸರು ಕಂಡುಹಿಡಿಯಬೇಕು !

ದೇವಾಲಯವನ್ನು ಧ್ವಂಸ ಮಾಡದ ಅಪರಿಚಿತರು

ಭಾವನಿಗಡ್ (ಪಂಜಾಬ್) – ಇಲ್ಲಿಯ ಸಗರೂರ-ಪಟಿಯಾಲಾ ರಸ್ತೆಯ ಘನವಡಾ ಗ್ರಾಮದಲ್ಲಿರುವ ನೀಲಕಂಠ ಮಹಾದೇವ ದೇವಸ್ಥಾನ ಮತ್ತು ಅಲ್ಲಿರುವ ಶಿವ ಮತ್ತು ಹನುಮಂತನ ವಿಗ್ರಹಗಳನ್ನು ಧ್ವಂಸಗೊಳಿಸಲಾಯಿತು. ಅದೇ ರೀತಿ ದೇವತೆಗಳ ಚಿತ್ರಗಳನ್ನು ಸುಡಲಾಯಿತು. ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಲ್ಲಿ ಇಂತಹ ಘಟನೆ ನಡೆದಿರುವುದು ಇದು ಎರಡನೇ ಬಾರಿಯಾಗಿದೆ. ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಘಟನೆಯ ವಿರುದ್ಧ ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅದರ ನಂತರ, ಗ್ರಾಮದ ಸರಪಂಚ ‘ದೇವಾಲಯವನ್ನು ಪುನರ್ನಿರ್ಮಿಸಲಾಗುವುದು’, ಭರವಸೆ ನೀಡಿದರು. ಜುಲೈ ೧೦ ರಂದು ಪಂಜಾಬ್‍ನ ಮಲೆರಕೊಟ್ ಜಿಲ್ಲೆಯ ಸರೌದ್ ಗ್ರಾಮದಲ್ಲಿ ಶಿವನ ದೇವಾಲಯವನ್ನೂ ಧ್ವಂಸ ಮಾಡಲಾಗಿತ್ತು.