ಸೌದಿ ಅರೇಬಿಯಾದಲ್ಲಿ ಧರ್ಮನಿಂದನೆಯ ಸುಳ್ಳು ಪ್ರಕರಣದಲ್ಲಿ ಬಂಧಿಸಲಾಗಿದ್ದ ಹಿಂದೂವಿನ ಬಿಡುಗಡೆ !

ಸೌದಿಯ ಮತಾಂಧರಿಂದ ನಕಲಿ ಫೇಸ್‌ಬುಕ್ ಖಾತೆಯ ಮೂಲಕ ಹಿಂದೂವನ್ನು ಸಿಲುಕಿಸಿದ ಪ್ರಸಂಗ !

ಹಿಂದೂಗಳನ್ನು ಸುಳ್ಳು ಆರೋಪಗಳಲ್ಲಿ ಸಿಲುಕಿಸುವ ಮತಾಂಧರ ಮಾನಸಿಕತೆಯನ್ನು ಅರಿತುಕೊಳ್ಳಿ ! ಬಾಂಗ್ಲಾದೇಶದಲ್ಲಿ ಇದೇ ರೀತಿಯಲ್ಲಿ ಹಿಂದೂಗಳ ಮೇಲೆ ಆರೋಪವನ್ನು ಮಾಡಿ ಅವರ ಮನೆಗಳ ಮೇಲೆ ದಾಳಿ ಮಾಡಲಾಗಿತ್ತು ! ಇದು ಮತಾಂಧರ ಹೊಸದಾದ ಜಿಹಾದ ಆಗಿದ್ದು ಇದರಿಂದ ಎಚ್ಚರದಿಂದಿರಿ !

ನವ ದೆಹಲಿ – ಸೌದಿ ಅರೇಬಿಯಾದಲ್ಲಿ ಡಿಸೆಂಬರ ೨೦೧೯ ರಿಂದ ಬಂಧನದಲ್ಲಿದ್ದ ಭಾರತಿಯ ನಾಗರಿಕ ಹರೀಶ ಬಂಗೇರನನ್ನು ಬಿಡುಗಡೆ ಮಾಡಲಾಗಿದೆ. ಅವರನ್ನು ಧರ್ಮನಿಂದನೆಯ ಸುಳ್ಳು ಆರೋಪದಡಿಯಲ್ಲಿ ಬಂಧಿಸಲಾಗಿತ್ತು.

ಸೌದಿ ಅರೇಬಿಯಾದ ರಾಜಕುಮಾರ ಮಹಮ್ಮದ ಬಿನ್ ಸಲಮಾನ ಹಾಗೂ ಮುಸಲ್ಮಾನರ ಪವಿತ್ರ ಧಾರ್ಮಿಕ ಸ್ಥಳ ಮಕ್ಕಾದ ಬಗ್ಗೆ ಸಾಮಾಜಿಕ ಮಾಧ್ಯಮದಿಂದ ಅಯೋಗ್ಯ ಟಿಪ್ಪಣಿಯನ್ನು ಮಾಡಿದರೆಂಬ ಆರೋಪವನ್ನು ಹೊರಿಸಲಾಗಿತ್ತು; ಆದರೆ ಪ್ರತ್ಯಕ್ಷದಲ್ಲಿ ಬಂಗೇರನ ಹೆಸರಿನಲ್ಲಿ ಸುಳ್ಳು ಖಾತೆಯನ್ನು ತೆರೆದು ಸೌದಿಯ ಅಬ್ದುಲ ಹುಯೆಜ ಹಾಗೂ ಅಬ್ದುಲ್ ಥುಯೆಜ ಈ ಇಬ್ಬರು ಸಹೋದರರು ಈ ಟಿಪ್ಪಣಿಯನ್ನು ಮಾಡಿದ್ದರು. ಅವರು ಬಂಗೇರಾ ಹೆಸರಿನ ನಕಲಿ ಫೇಸ್‌ಬುಕ್ ಖಾತೆಯನ್ನು ತೆರೆದು ಈ ಟಿಪ್ಪಣಿಯನ್ನು ಮಾಡಿದ್ದರು. ಅದರಲ್ಲಿ ಮಕ್ಕಾದ ಛಾಯಾಚಿತ್ರವನ್ನು ಪೋಸ್ಟ ಮಾಡಿ ‘ಮುಂದಿನ ಶ್ರೀರಾಮಮಂದಿರವು ಮಕ್ಕಾದಲ್ಲಿ ಇರಲಿದೆ. ಹೋರಾಟಕ್ಕಾಗಿ ಸಿದ್ಧರಾಗಿರಿ’, ಎಂದು ಹೇಳಲಾಗಿತ್ತು. ಅನಂತರ ಬಂಗೇರನನ್ನು ಬಂಧಿಸಲಾಗಿತ್ತು. ಆತನನ್ನು ನೌಕರಿಯಿಂದಲೂ ತೆಗೆದುಹಾಕಲಾಗಿತ್ತು. ಈ ಬಗ್ಗೆ ಸತ್ಯಾಸತ್ಯತೆಯನ್ನು ಅರಿತನಂತರ ಪೊಲೀಸರು ಅಬ್ದುಲ ಹುಯೆಜ ಹಾಗೂ ಅಬ್ದುಲ್ ಥುಯೆಜ ಇವರನ್ನು ಬಂಧಿಸಿದ ನಂತರ ಬಂಗೇರನನ್ನು ಬಿಡುಗಡೆ ಮಾಡಲು ನಿರ್ಧರಿಸಲಾಯಿತು.