ಅರಾರಿಯಾ (ಬಿಹಾರ) ಇಲ್ಲಿಯ ಒಂದು ಶಾಲೆಯ ಮತಾಂಧ ಮುಖ್ಯೋಪಾಧ್ಯಾಯರಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

ಬೆತ್ತಲೆ ಫೋಟೊಗಳನ್ನು ತೆಗೆದು ಹುಡುಗಿಗೆ ಬೆದರಿಕೆ ನೀಡುತ್ತಾ ೩ ತಿಂಗಳು ಶೋಷಣೆ !

* ಇಂತಹ ಕಾಮಾಂಧರಿಗೆ ಶರಿಯತ್ ಕಾನೂನಿನ ಪ್ರಕಾರ ಕೈ-ಕಾಲು ಮುರಿಯುವ ಅಥವಾ ನಡುರಸ್ತೆಯಲ್ಲಿ ಕಟ್ಟಿಹಾಕಿ ಆತನ ಮೇಲೆ ಕಲ್ಲೆಸೆಯುವ ಶಿಕ್ಷೆ ನೀಡುವಂತೆ ಯಾರಾದರು ಒತ್ತಾಯಿಸಿದರೆ ಅದಕ್ಕೆ ಆಶ್ಚರ್ಯ ಪಡಬೇಕಿಲ್ಲ !

* ಯಾವಾಗಲು ಶರಿಯತ್ ಕಾನೂನಿನ ಬೇಡಿಕೆಯನ್ನು ಮಾಡುವವರು ಇಂತಹ ಘಟನೆಗಳ ಬಗ್ಗೆ ಶರಿಯತ್ ಕಾನೂನಿನ ಮೂಲಕ ಶಿಕ್ಷೆಯಾಗುವಂತೆ ಒತ್ತಾಯಿಸುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಅರಾರಿಯಾ (ಬಿಹಾರ) – ಇಲ್ಲಿನ ಮಹಲಗ್ರಾಮದಲ್ಲಿನ ಒಂದು ಶಾಲೆಯ ಮುಖ್ಯೋಪಾಧ್ಯಾಯ ರೌಶನ್ ಜಮೀರ್‍ನನ್ನು ಓರ್ವ ೧೪ ವರ್ಷದ ಅಪ್ರಾಪ್ತ ವಯಸ್ಸಿನ ವಿಧ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಈ ವಿದ್ಯಾರ್ಥಿನಿಗೆ ಬಟ್ಟೆ ಮತ್ತು ಇತರ ವಸ್ತುಗಳನ್ನು ಕೊಡಿಸುವುದಾಗಿ ಆಮಿಷವೊಡ್ಡಿ ಆಕೆಯ ಮೇಲೆ ಅತ್ಯಾಚಾರ ಮಾಡಿದ ಎಂದು ಜಮೀರ್ ನ ಮೇಲೆ ಆರೋಪ ಮಾಡಲಾಗಿದೆ.

ಜಮೀರ್ ಅತ್ಯಾಚಾರ ಮಾಡಿದನಂತರ ಆಕೆಯ ಬೆತ್ತಲೆಯ ಛಾಯಾಚಿತ್ರವನ್ನು ತೆಗೆದು ‘ಅತ್ಯಾಚಾರದ ಮಾಹಿತಿ ಯಾರಿಗಾದರು ಹೇಳಿದರೆ ಈ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುವೆ’, ಎಂದು ಬೆದರಿಕೆ ನೀಡಿದ್ದನು. ಈ ಛಾಯಾಚಿತ್ರದ ಆಧಾರದ ಮೇಲೆ ಜಮೀರ್ ನು ೩ ತಿಂಗಳು ಆಕೆಯ ಲೈಂಗಿಕ ಶೋಷಣೆ ಮಾಡುತ್ತಿದ್ದ. ಆಕೆ ಗರ್ಭಿಣಿಯಾದ ಮೇಲೆ ಈ ಶೋಷಣೆಯ ಪ್ರಕರಣ ಬೆಳಕಿಗೆ ಬಂದಿತು. ಈ ಬಗ್ಗೆ ಪೊಲೀಸರಲ್ಲಿ ದೂರನ್ನು ದಾಖಲಿಸಿದ ನಂತರ ಜಮೀರ್ ನನ್ನು ಬಂಧಿಸಲಾಯಿತು.