‘ವಿಕಿಪೀಡಿಯಾ’ ಜಾಲತಾಣದ ಮಾಹಿತಿಯು ಅವಿಶ್ವಾಸಾರ್ಹವಾಗಿದೆ ಮತ್ತು ಕಮ್ಯುನಿಸ್ಟ್ ಸಿದ್ಧಾಂತಗಳಿಗೆ ಪೂರಕವಾಗಿದೆ !

ಆನ್‍ಲೈನ್ ವಿಶ್ವಕೋಶ ಎಂದು ಪ್ರಸಿದ್ಧವಾಗಿರುವ ‘ವಿಕಿಪೀಡಿಯಾ’ದ ಸಹ ಸಂಸ್ಥಾಪಕ ಲ್ಯಾರಿ ಸಂಗರ್ ಇವರಿಂದ ಗಂಭೀರ ಆರೋಪ !

ಕಮ್ಯುನಿಸ್ಟರು ಎಲ್ಲೆಲ್ಲಿ ಕಾಲಿಟ್ಟರೋ ಅಲ್ಲೆಲ್ಲಾ ಅಪರಿಮಿತ ಹಾನಿಯನ್ನು ಮಾಡಿದ್ದಾರೆ, ಇದು ಇತಿಹಾಸವಾಗಿದೆ. ಕಮ್ಯುನಿಸಂ ಜಗತ್ತಿಗೆ ಅಪಾಯಕಾರಿಯಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಅದನ್ನು ನಿರ್ಮೂಲನೆ ಮಾಡಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಿಸುವುದು ಈಗ ಅಗತ್ಯವಾಗಿದೆ !

‘ವಿಕಿಪೀಡಿಯಾ’ದ ಕಾರ್ಯಪದ್ದತಿ !

‘ವಿಕಿಪೀಡಿಯಾ’ ಜಾಲತಾಣದಲ್ಲಿ ವಿಶ್ವದ ಪ್ರತಿಯೊಂದು ವಿಷಯಗಳ ಮಾಹಿತಿಯನ್ನು ಸವಿಸ್ತಾರವಾಗಿ ನೀಡಲಾಗಿದೆ. ಈ ಜಾಲತಾಣವು ವಿಶ್ವದಾದ್ಯಂತದ ಸ್ವಯಂಸೇವಕರಿಂದಲೇ ನಡೆಸಲಾಗುತ್ತದೆ. ಜಗತ್ತಿನ ಯಾವುದೇ ವ್ಯಕ್ತಿ ಜಾಲತಾಣಕ್ಕೆ ಹೋಗಿ ತನ್ನ ಖಾತೆಯನ್ನು ತೆರೆಯುವ ಮೂಲಕ ಯಾವುದೇ ಮಾಹಿತಿಯನ್ನು ಬದಲಾಯಿಸಬಹುದು; ಆದರೆ ಅದಕ್ಕೆ ಸರಿಯಾದ ಉಲ್ಲೇಖಗಳು ಬೇಕಾಗುತ್ತವೆ. ಅಲ್ಲದೆ, ಈ ಮಾಹಿತಿಯನ್ನು ಅನುಭವಿ ಸ್ವಯಂಸೇವಕರು ಅಂತಿಮಗೊಳಿಸಬೇಕಾಗುತ್ತದೆ. ಹೆಚ್ಚಿನ ಅನುಭವಿ ಸ್ವಯಂಸೇವಕರ ವಿಚಾರಸರಣಿಯು ಸಾಮ್ಯವಾದದ್ದಾಗಿದೆ.

ಲಾರಿ ಸಾಂಗರ್

ಲಂಡನ್ – ಆನ್‍ಲೈನ್ ‘ಎನ್‍ಸೈಕ್ಲೋಪೀಡಿಯಾ'(ಯಾವುದೇ ವಿಷಯಗಳ ಮಾಹಿತಿ ಸಿಗಬಲ್ಲ ಸಂದರ್ಭ. ಇದನ್ನು ಜ್ಞಾನಕೋಶ ಎಂದು ಹೇಳುತ್ತಾರೆ.) ಆದ್ದರಿಂದ ಜನಪ್ರಿಯವಾಗಿರುವ ‘ವಿಕಿಪೀಡಿಯಾ’ ಈ ಜಾಲತಾಣವು ಈಗ ವಿಶ್ವಾಸಾರ್ಹವಾಗಿಲ್ಲ. ಅದರಲ್ಲಿ ಕಮ್ಯನಿಸ್ಟ ಸಿದ್ಧಾಂತಗಳ ಜನರು ನುಸುಳಿದ್ದಾರೆ. ಆದ್ದರಿಂದ ಈ ಜಾಲತಾಣದಿಂದ ಪ್ರಸಾರ ಮಾಡಲಾಗುತ್ತಿರುವ ಮಾಹಿತಿಯ ಮೇಲೆ ವಿಶ್ವಾಸ ಇಡಬಾರದು’, ಎಂದು ಈ ವಿಶ್ವಪ್ರಸಿದ್ಧ ಜಾಲತಾಣದ ಸಹ ಸಂಸ್ಥಾಪಕ ಲಾರಿ ಸಾಂಗರ್ ಹೇಳಿದರು. ಯುನೈಟೆಡ್ ಕಿಂಗ್‍ಡಂನ ‘ಅನ್ ಹರ್ಡ್ ಡಾಟ್ ಕಾಮ್’ನಲ್ಲಿ ಈ ಕುರಿತಾದ ಸಂದರ್ಶನವನ್ನು ಪ್ರಕಟಿಸಲಾಗಿದೆ.

. ಸಾಂಗರ್ ಇವರ ಅಭಿಪ್ರಾಯಕ್ಕನುಸಾರ, ಕಳೆದ ವರ್ಷದ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ರಾಜಕೀಯ ಲಾಭ ಸಿಗಲು ಈ ಜಾಲತಾಣವು ಪ್ರಮುಖ ಪಾತ್ರವನ್ನು ವಹಿಸಿತ್ತು. ಜೋ ಬಾಯಡೆನ್ ಮತ್ತು ಅವರ ಮಗ ಹಂಟರ್ ಬಾಯಡೆನ್ ವಿರುದ್ಧದ ಗಂಭೀರ ಆರೋಪಗಳ ಬಗ್ಗೆ ಜಾಲತಾಣವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನು ಉಲ್ಲೇಖಿಸಿದ್ದರೆ, ಡೆಮಾಕ್ರಟಿಕ್ ಪಕ್ಷವು ತೊಂದರೆ ಅನುಭವಿಸ ಬೇಕಾಗುತ್ತಿತ್ತು. ಇದರಿಂದ ಆಗಿನ ಅಮೆರಿಕದ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್‍ಗೆ ನೇರವಾಗಿ ಲಾಭವಾಗುತ್ತಿತ್ತು ಎಂದಾಗಿದೆ.

. ಸಾಂಗರ್ ಇವರು ತಮ್ಮ ಸಂದರ್ಶನದಲ್ಲಿ, ‘ವಿಕಿಪೀಡಿಯಾ’ದಲ್ಲಿ ಕಮ್ಯುನಿಸ್ಟ್ ಸಿದ್ಧಾಂತವನ್ನು ಹೊಂದಿರುವ ಸ್ವಯಂಸೇವಕರು ತುಂಬಿದ್ದು ಮತ್ತು ಈ ಸಿದ್ಧಾಂತಕ್ಕೆ ಮಾರಕವಾದ ಬರವಣಿಗೆಗಳು ಮಾನ್ಯವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

೩. ‘ವಿಕಿಪೀಡಿಯಾ’ದ ಮೇಲೆ ಕೋಟಿಗಟ್ಟಲೆ ಜನರು ಕಣ್ಣು ಮುಚ್ಚಿ ವಿಶ್ವಾಸವಿಡುತ್ತಾರೆ. ಯಾವುದೇ ರೀತಿಯ ಮಾಹಿತಿ ಬೇಕಿದ್ದರೂ ಜನರು ಈ ಜಾಲತಾಣವನ್ನು ವ್ಯಾಪಕವಾಗಿ ಬಳಸುತ್ತಿರುವುದು ಕಂಡು ಬರುತ್ತದೆ. ಒಂದು ಅಂದಾಜಿನ ಪ್ರಕಾರ, ಈ ಜಾಲತಾಣವನ್ನು ತಿಂಗಳಿಗೆ ೬ ಅಬ್ಜಗಿಂತ ಹೆಚ್ಚು ಬಾರಿ ಭೇಟಿ ನೀಡಲಾಗುತ್ತದೆ, ಇದು ಇಂಟರ್ನೆಟ್‍ನಲ್ಲಿ ಅತ್ಯಧಿಕ ವಾಚಕ ಸಂಖ್ಯೆಯಿರುವ ೫ ನೇ ಜಾಲತಾಣ ಆಗಿದೆ.

. ‘ವಿಕಿಪೀಡಿಯಾ’ವನ್ನು ೨೦೦೧ ರಲ್ಲಿ ಲ್ಯಾರಿ ಸ್ಯಾಂಗರ್ ಮತ್ತು ಜಿಮಿ ವೆಲ್ಸ್ ಸ್ಥಾಪಿಸಿದ್ದರು. ಕೆಲವು ವರ್ಷಗಳ ನಂತರ, ಸಾಂಗರ್ ಸಂಸ್ಥೆಯನ್ನು ತೊರೆದರು. ಕಮ್ಯುನಿಸ್ಟ್ ಸಿದ್ಧಾಂತದಿಂದ ವಿಕಿಪೀಡಿಯ ಪ್ರಭಾವಿತವಾಗಿದೆ ಎಂದು ಸಾಂಗರ್ ಇವರು ಈ ಹಿಂದೆ ಆರೋಪಿಸಿದ್ದರು.