ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಇವರು ‘ಸಂವಿಧಾನ ಕೆ ರಕ್ಷಕ’ ಪ್ರಶಸ್ತಿ ಪಡೆದ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಅವರಿಗೆ ಅಭಿನಂದನೆಗಳು !

ಹಿಂದೂ ಹಿತಾಸಕ್ತಿಗಳಿಗಾಗಿ ನಿಸ್ವಾರ್ಥವಾಗಿ ಹೋರಾಡುವ ಯೋಧನಿಗೆ ಸಂದ ಗೌರವ !

ಎಡದಿಂದ ಪ್ರಶಸ್ತಿಯನ್ನು ನೀಡುತ್ತಿರುವ ಕೇಂದ್ರ ಸಚಿವ ಗಿರಿರಾಜ ಸಿಂಹ, ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ಮತ್ತು ಪ್ರಶಸ್ತಿ ಸ್ವೀಕರಿಸುತ್ತಿರುವ ವೀರೇಂದ್ರ ಇಚಲಕರಂಜಿಕರ್

ರಾಷ್ಟ್ರರಕ್ಷಣೆ ಮತ್ತು ಧರ್ಮರಕ್ಷಣೆ ಇವುಗಳಿಗಾಗಿ ಅತ್ಯುತ್ತಮ ಕಾರ್ಯ ಮಾಡುವ ಹಿಂದೂ ವಿಧಿಜ್ಞ ಪರಿಷದ್‌ನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಅವರಿಗೆ ‘ಸಂವಿಧಾನ ಕೆ ರಕ್ಷಕ’ ಪ್ರಶಸ್ತಿ ದೊರಕಿದ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತಿದೆ. ಈ ಪ್ರಶಸ್ತಿಯು ಹಿಂದೂ ಹಿತಾಸಕ್ತಿಗಳಿಗಾಗಿ ನಿಸ್ವಾರ್ಥವಾಗಿ ಹೋರಾಡುವ ಯೋಧನಿಗೆ ಸಂದ ಗೌರವವಾಗಿದೆ ಎಂದು ನಾವು ಭಾವಿಸುತ್ತೇವೆ. ಇಂದು ರಾಷ್ಟ್ರ-ಧರ್ಮದ ಸ್ಥಿತಿ ತುಂಬಾ ಭೀಕರವಾಗಿದೆ. ಆದ್ದರಿಂದ, ರಾಷ್ಟ್ರ-ಧರ್ಮಕ್ಕಾಗಿ ನಿರಪೇಕ್ಷವಾಗಿ ಕಾರ್ಯ ಮಾಡುವುದು ಅತ್ಯಂತ ಆವಶ್ಯವಾಗಿದೆ. ತಳಮಳದಿಂದ ಕಾರ್ಯ ಮಾಡುವವರಿಗೆ ಇಂತಹ ಗೌರವ ದೊರಕಿದ್ದರಿಂದ ಇತರ ನ್ಯಾಯವಾದಿಗಳಿಗೂ ಅದೇ ರೀತಿ ಮಾಡಲು ಪ್ರೇರಣೆ ದೊರೆಯುವುದೆಂಬ ವಿಶ್ವಾಸ ನಮಗಿದೆ. ದೇವರು, ದೇಶ ಮತ್ತು ಧರ್ಮ ಇವುಗಳಿಗಾಗಿ ಹೋರಾಡುವವರನ್ನು ಈ ರೀತಿ ಗೌರವಿಸಬೇಕು. ಅದಕ್ಕಾಗಿ ಮುಂದಾಳತ್ವ ವಹಿಸಿದ ಹಿಂದೂ ಇಕೊಸಿಸ್ಟಟ್, ಭಾಜಪ ಮುಖಂಡ ಕಪಿಲ್ ಮಿಶ್ರ ಮತ್ತು ಈ ಸಮಾರಂಭಕ್ಕೆ ಉಪಸ್ಥಿತರಿದ್ದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರಿಗೂ ನಾವು ಧನ್ಯವಾದ ಅರ್ಪಿಸುತ್ತೇವೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ತಿಳಿಸಲಾಗಿದೆ.

ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ರವರ ಗಮನಾರ್ಹ ಕೊಡುಗೆಗಳು :

೧. ನ್ಯಾಯವಾದಿ ಇಚಲಕರಂಜಿಕರ್ ಅವರು ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಿಂದ ಪಂಢರಪುರದ ಶ್ರೀ ವಿಠ್ಠಲ್-ರುಕ್ಮಿಣಿ ದೇವಸ್ಥಾನಕ್ಕೆ ಸೇರಿದ ೯೦೦ ಎಕರೆ ಭೂಮಿಯು ಹಿಂದಿರುಗಿ ಸಿಕ್ಕಿದೆ.

೨. ಇದರೊಂದಿಗೆ ಸರಕಾರಿಕರಣವಾದ ಮುಂಬಯಿಯ ಶ್ರೀ ಸಿದ್ಧಿವಿನಾಯಕ ಮಂದಿರ, ಶಿರಡಿಯ ಶ್ರೀ ಸಾಯಿಬಾಬಾ ಸಂಸ್ಥೆ, ಪಶ್ಚಿಮ ಮಹಾರಾಷ್ಟ್ರ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಡಿಯಲ್ಲಿ ಬರುವ ೩೦೬೭ ದೇವಾಲಯಗಳ ಹಗರಣಗಳು ಬಹಿರಂಗಗೊಂಡಿವೆ.

. ಸುಳ್ಳು ಆರೋಪದಡಿ ಸಿಲುಕಿರುವ ಅನೇಕ ಹಿಂದೂಪರ ಕಾರ್ಯಕರ್ತರ ಪ್ರಕರಣಗಳ ಖಟ್ಲೆಗಳನ್ನು ಅವರು ಉಚಿತವಾಗಿ ಹೋರಾಡುತ್ತಿದ್ದಾರೆ.

೪. ಅಕ್ರಮ ಕಸಾಯಿಖಾನೆಗಳು, ರಾಷ್ಟ್ರಧ್ವಜದ ಅವಮಾನ, ಅಶಾಸ್ತ್ರೀಯ ಹಾಗೂ ಪರಿಸರಕ್ಕೆ ಹಾನಿಕರ ಕಾಗದದ ತಿರುಳಿನ ಗಣೇಶಮೂರ್ತಿ ಇತ್ಯಾದಿಗಳ ವಿರುದ್ಧವೂ ಅವರು ಯಶಸ್ವಿಯಾಗಿ ಹೋರಾಡಿದ್ದಾರೆ.