‘ಪೃಥ್ವಿರಾಜ್’ ಚಲನಚಿತ್ರಕ್ಕೆ ಚಂಡೀಗಡದಲ್ಲಿ ನಟ ಅಕ್ಷಯ್ ಕುಮಾರ್ ಅವರ ಪ್ರತಿಮೆಯನ್ನು ಸುಟ್ಟು ಪ್ರತಿಭಟನೆ !

ನವ ದೆಹಲಿ – ನಟ ಅಕ್ಷಯ್ ಕುಮಾರ್ ಅವರ ಮುಂಬರುವ ಚಿತ್ರ ‘ಪೃಥ್ವಿರಾಜ್’ಕ್ಕೆ ವಿರೋಧವಾಗುತ್ತಿದೆ. ಚಂಡಿಗಡದಲ್ಲಿ ಅಖಿಲ ಭಾರತ ಕ್ಷತ್ರಿಯ ಮಹಾಸಭಾ ಸದಸ್ಯರು ಅಕ್ಷಯ ಕುಮಾರ್ ಇವರ ಪ್ರತಿಮೆಯನ್ನು ಸುಟ್ಟುಹಾಕಿದರು. ಮತ್ತೊಂದೆಡೆ, ಕರಣಿ ಸೇನೆಯು ಚಿತ್ರದ ಹೆಸರನ್ನು ‘ಪೃಥ್ವಿರಾಜ್’ ನಿಂದ ‘ಸಾಮ್ರಾಟ ಪೃಥ್ವಿರಾಜ್ ಚೌಹಾನ್’ ಎಂದು ಬದಲಾಯಿಸಬೇಕೆಂದು ಒತ್ತಾಯಿಸಿದೆ.

ಕರಣಿ ಸೇನೆಯ ಯುವ ಶಾಖೆಯ ಅಧ್ಯಕ್ಷ ಮತ್ತು ಚಲನಚಿತ್ರದ ನಿರ್ಮಾಪಕ ಸುರಜಿತ ಸಿಂಹ ಅವರು, ನಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳದೇ ಇದ್ದರೆ, ಅದರ ಪರಿಣಾಮಗಳನ್ನು ಅವರು ಅನುಭವಿಸಬೇಕಾಗಬಹುದು. ‘ಪದ್ಮಾವತ್’ ಸಮಯದಲ್ಲಿ ನಿರ್ಮಾಪಕ ಸಂಜಯ್ ಲೀಲಾ ಭನ್ಸಾಲಿಯವರೊಂದಿಗೆ ಏನು ಆಯಿತು ಅದು ಈ ಚಿತ್ರದ ನಿರ್ಮಾಪಕರೊಂದಿಗೂ ಆಗಬಹುದು ಎಂದಿದ್ದಾರೆ. ಭನ್ಸಾಲಿಯವರು ತಮಗಾದ ವಿರೋಧದ ನಂತರ ‘ಪದ್ಮಾವತಿ’ ಚಿತ್ರದ ಹೆಸರನ್ನು ‘ಪದ್ಮಾವತ್’ ಎಂದು ಬದಲಾಯಿಸಿದ್ದರು.