ಹಾಪುಡ (ಉತ್ತರ ಪ್ರದೇಶ) ದಲ್ಲಿ ಅತ್ಯಾಚಾರದಿಂದ ಗರ್ಭಿಣಿಯಾದ ಮಹಿಳೆಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಪಂಚಾಯತಿಯಿಂದ ಆದೇಶ

ಗ್ರಾಮವನ್ನು ತೊರೆಯಬೇಕೆಂದು ಆದೇಶ ನೀಡಿದ ಪಂಚಾಯಿತಿ

ಪೊಲೀಸರಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲು !

ಇಂತಹ ಪಂಚಾಯಿತಿಯನ್ನು ವಿಸರ್ಜಿಸಬೇಕು ಮತ್ತು ಸಂಬಂಧಪಟ್ಟವರನ್ನು ಬಂಧಿಸಿ ಸೆರೆಮನೆಗೆ ಹಾಕಬೇಕು !

ಹಾಪುಡ (ಉತ್ತರಪ್ರದೇಶ) – ಇಲ್ಲಿನ ಒಂದು ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾದ ಯುವತಿಯೊಬ್ಬಳು ಗರ್ಭಿಣಿಯಾದಳು. ಪಂಚಾಯಿತಿಯು ಆಕೆಗೆ ಗರ್ಭಪಾತ ಮಾಡಬೇಕೆಂದು ಆದೇಶಿಸಿತು. ಆದ್ದರಿಂದ ಆಕೆಯ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯು ನಡೆಯುತ್ತಿದೆ. ಮದುವೆಯ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಲಾಗಿತ್ತು. ಅವಳು ೫ ತಿಂಗಳ ಗರ್ಭಿಣಿಯಾಗಿದ್ದಾಳೆ. ಪಂಚಾಯಿತಿಯಿಂದ ಅವಳಿಗೆ ಗ್ರಾಮವನ್ನು ತೊರೆಯುವ ಆದೇಶ ನೀಡಲಾಗಿದೆ ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ.