ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳರು ಹೇಳಿರುವ ಅಮೃತವಚನಗಳು

ಈಶ್ವರ ಎಂದರೆ ‘ಕಾಲ ಆಗಿರುವುದರಿಂದ ಅವನೊಂದಿಗೆ ಏಕರೂಪವಾದ ಸಂತರ ವರ್ತನೆ ಕಾಲಾನುಸಾರವಾಗಿರುತ್ತದೆ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

‘ಒಬ್ಬ ವ್ಯಕ್ತಿಗೆ ಮದ್ಯದ ವ್ಯಸನವಿದೆ. ಅವನು ಇತ್ತೀಚೆಗೆ ಸಾಧನೆ ಮಾಡಲು ಆರಂಭಿಸಿದನು, ಆಗ ತಕ್ಷಣ ಅವನ ವ್ಯಸನದ ಬಗ್ಗೆ ಅವನಿಗೆ ಹೇಳುವುದು ಸರಿಯಲ್ಲ. ‘ಸಂತರಿಗೆ ಯಾವಾಗ ಏನು ಮಾಡಬೇಕೆಂಬುದರ ಜ್ಞಾನವಿರುತ್ತದೆ; ಏಕೆಂದರೆ ಅವರಿಗೆ ಕಾಲದ ಪರಿಚಯವಿದೆ. ಆದ್ದರಿಂದ ಸಮಯ ಬಂದಾಗ ಅವರು ಆ ವ್ಯಕ್ತಿಗೆ ಹಾಗೆ ಹೇಳುತ್ತಾರೆ. ಅದು ಅವರಿಂದಾಗುವ ಒಂದು ಉಪದೇಶವೇ ಆಗಿರುತ್ತದೆ. ಸಮಯ ಬಂದಾಗ ತನ್ನಿಂತಾನೇ ಆ ವ್ಯಕ್ತಿಯ ಈ ವ್ಯಸನ ಬಿಟ್ಟು ಹೋಗುತ್ತದೆ. ವ್ಯಸನವು ಶಾಶ್ವತವಾಗಿ ಬಿಡಲು ‘ಸಾಧನೆ ಮಾಡುವುದು’, ಒಂದೇ ಪರ್ಯಾಯವಾಗಿದೆ; ಏಕೆಂದರೆ ಪೂರ್ವಜರ ತೊಂದರೆಯಿಂದ ಮನುಷ್ಯನು ವ್ಯಸನಾಧೀನನಾಗುತ್ತಾನೆ. ಸಂಪತ್ಕಾಲದಲ್ಲಿ ‘ಸಮಯ ಬಂದಾಗ ಹೇಳೋಣ’, ಎನ್ನುವುದು ಸರಿಯಾಗಿದೆ; ಆದರೆ ಆಪತ್ಕಾಲದಲ್ಲಿ ಮಾತ್ರ ಹಾಗಿರುವುದಿಲ್ಲ. ಆಪತ್ಕಾಲದಲ್ಲಿ ಸಮಯವೇ ಇಲ್ಲದ್ದರಿಂದ ತಕ್ಷಣ ಒಬ್ಬನಿಗೆ ಸಾಧನೆಯನ್ನು ಹೇಳಿ ಅವನಿಗೆ ಅವನ ವ್ಯಸನದ ಬಗ್ಗೆ ಅರಿವು ಮೂಡಿಸಬೇಕಾಗುತ್ತದೆ. ಇದರಲ್ಲಿ ಇನ್ನೂ ಒಂದು ಅಂಶ ಹೇಗಿದೆಯೆಂದರೆ, ಸದ್ಯ ಆಪತ್ಕಾಲದ ತೀವ್ರತೆಯನ್ನು ನೋಡುವಾಗ ಕಾಲವನ್ನು ತಿಳಿದುಕೊಂಡು ‘ಕಾರ್ಯವನ್ನು ಸಾಧಿಸುವುದು’ ಹೆಚ್ಚು ಮಹತ್ವದ್ದಾಗಿದೆ. ‘ಎದುರಿಗೆ ಬಂದ ವ್ಯಕ್ತಿ ಜೀವನದಲ್ಲಿ ಪುನಃ ಯಾವಾಗ ಭೇಟಿಯಾಗುವನು ?’, ಎಂಬುದು ಈಶ್ವರನಿಗೆ ಮಾತ್ರ ತಿಳಿಯುತ್ತದೆ. ಆದ್ದರಿಂದ ಸಮಷ್ಟಿ ಸಂತರು ‘ಈಗ ಬಂದಿರುವ ಕಾಲವೇ ಎದುರಿಗಿನ ವ್ಯಕ್ತಿಗೆ ಯೋಗ್ಯವಾದ ಕಾಲವಾಗಿದೆ’, ಎಂಬುದನ್ನು ತಿಳಿದು ಒಂದು ಕ್ಷಣ ತಡ ಮಾಡದೆ ಅವನ ವ್ಯಸನದ ವಿಷಯವನ್ನು ಅವನಿಗೆ ಹೇಳುತ್ತಾರೆ. ಸಾಧನೆಗೆ ಪೋಷಕವಾದ ವಿಚಾರಗಳ ಬೀಜವನ್ನು ವ್ಯಕ್ತಿಯ ಮನಸ್ಸಿನಲ್ಲಿ ಬಿತ್ತಿದರೆ, ಅದು ಇಂದಲ್ಲ ನಾಳೆ ಸಾಧನೆಯ ಸುಂದರ ವೃಕ್ಷವಾಗಿ ಬೆಳೆಯುವುದು, ಈಗ ಯೋಗ್ಯ ಸಮಯಕ್ಕಾಗಿ ಕಾಯಲು ಸಮಯವಿಲ್ಲ. ಪ್ರತಿಕ್ಷಣ ಅಮೂಲ್ಯವಾಗಿದೆ. ವರ್ತಮಾನದಲ್ಲಿ ಸಿಕ್ಕಿದ ಅವಕಾಶವೆ ದೇವರು ಕೊಟ್ಟ ಯೋಗ್ಯ ಸಮಯವೆಂದು ತಿಳಿದು ಮುಂದೆ ಹೋಗಬೇಕು. ಈಗ ಆಪತ್ಕಾಲದಲ್ಲಿ ಸಂತರು ಹೇಳುವ ಎಲ್ಲ ವಿಷಯಗಳನ್ನು ಪಾಲಿಸಿ ತಕ್ಷಣ ಸಾಧನೆ ಆರಂಭಿಸಬೇಕು.’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ