|
ಜೆರುಸಲೆಮ್ (ಇಸ್ರೇಲ್ ) – ಇಸ್ರೈಲ್‍ನ ಸೈನಿಕರು ಗಾಜಾ ಪಟ್ಟಿಯಲ್ಲಿ ‘ಹಮಾಸ್’ ಈ ಭಯೋತ್ಪಾದಕ ಸಂಘಟನೆಯ ಹಿರಿಯ ನಾಯಕನ ಮನೆಯ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದ್ದಾರೆ. ಅವನ ಹೆಸರು ಯೆಹಿಯೆ ಸಿನವಾರ ಎಂದಾಗಿದೆ. ಇಸ್ರೇಲ್ ನ ಈ ದಾಳಿಯಲ್ಲಿ ಈವರೆಗೆ ೨೦ ಹಮಾಸ್ ಉಗ್ರರ ಹತ್ಯೆಯಾಗಿದೆ ಎಂದು ಹೇಳಲಾಗುತ್ತಿದೆ, ಆದರೆ ಇಸ್ರೈಲ್ ಈ ಸಂಖ್ಯೆ ಇದಕ್ಕಿಂತಲೂ ಹೆಚ್ಚು ಎಂದು ಹೇಳಿದೆ.
Israel strikes Gaza home of Hamas leader, destroys AP office | via @indiatvnews https://t.co/ru5aV0wA44
— India TV (@indiatvnews) May 16, 2021
ಪ್ಯಾಲೆಸ್ಟೈನ್‍ನಿಂದ ಅಮೇರಿಕಾದ ಬಳಿ ವಿನಂತಿ !
ಪ್ಯಾಲೆಸ್ಟೈನ್‍ನ ರಾಷ್ಟ್ರಪತಿ ಮಹಮೂದ ಅಬ್ಬಾಸ ಇವರು ಅಮೇರಿಕಾರ ರಾಷ್ಟ್ರಾಧ್ಯಕ್ಷ ಜೋ ಬೈಡನ್ ಅವರೊಂದಿಗೆ ದೂರವಾಣಿಯ ಮೂಲಕ ಚರ್ಚೆ ನಡೆಸಿ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಇಸ್ರೈಲಿ ಆಕ್ರಮಣವನ್ನು ನಿಲ್ಲಿಸುವಂತೆ ವಿನಂತಿಸಿದ್ದಾರೆ. ಎಲ್ಲಿಯವರೆಗೆ ಈ ಪ್ರದೇಶದ ನಿಯಂತ್ರಣವನ್ನು ಇಸ್ರೇಲ್ ಬಿಟ್ಟುಕೊಡುವುದಿಲ್ಲವೋ ಅಲ್ಲಿಯವರೆಗೆ ಶಾಂತಿಯು ಅಸಾಧ್ಯವಾಗಿದೆ. ಪ್ಯಾಲೇಸ್ಟಿನಿಯನ್ ಜನರು ಶಾಂತಿಯನ್ನು ಬಯಸುತ್ತಾರೆ. ನಮಗೆ ಅಂತರರಾಷ್ಟ್ರೀಯ ಮಧ್ಯಸ್ಥಿಕೆಯು ಸ್ವೀಕಾರವಿದೆ, ಎಂದು ಅಬ್ಬಾಸ್ ಸ್ಪಷ್ಟ ಪಡಿಸಿದರು.