ಇಸ್ರೇಲ್ ವಿರುದ್ಧ ೫೭ ಇಸ್ಲಾಮಿಕ್ ರಾಷ್ಟ್ರಗಳ ಒಐಸಿ ಸಂಘಟನೆಯ ೧೬ ನೇ ಸಭೆ

ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಸಂಘರ್ಷ

ಹಿಂದೂಗಳೇ, ಮುಸಲ್ಮಾನ ಬಹುಸಂಖ್ಯಾತ ಪ್ಯಾಲೆಸ್ಟೇನ್‍ನ ಸಹಾಯಕ್ಕಾಗಿ ೫೭ ಇಸ್ಲಾಮಿಕ್ ರಾಷ್ಟ್ರಗಳು ಒಟ್ಟಾಗುತ್ತವೆ, ತದ್ವಿರುದ್ಧ ಆಪತ್ಕಾಲದ ಸಮಯದಲ್ಲಿ ನಿಮ್ಮ ಸಹಾಯಕ್ಕೆ ಧಾವಿಸಿ ಬರಲು ಇಡೀ ಜಗತ್ತಿನಲ್ಲಿ ಒಂದೇಒಂದು ಹಿಂದೂ ರಾಷ್ಟ್ರ ಇಲ್ಲ, ಇದನ್ನು ಅರಿತು ಈಗಲಾದರೂ ಜಾತಿ, ಪದವಿ, ಪಕ್ಷ ಎಲ್ಲವನ್ನು ಬದಿಗಿಟ್ಟು ಹಿಂದೂ ಎಂದು ಸಂಘಟಿತರಾಗಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿರಿ !

ತೆಲ್ ಅವೀವ್ (ಇಸ್ರೇಲ್) – ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ೫೭ ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆಯ ‘ಆರ್ಗನೈಜೇಶನ ಆಫ್ ಇಸ್ಲಾಮಿಕ್ ಕೊಪರೇಶನ’ (ಒಐಸಿ) ಈ ಸಂಘಟನೆಯು ಮೇ ೧೬ ರಂದು ಈ ಎಲ್ಲಾ ದೇಶಗಳ ವಿದೇಶಾಂಗ ಮಂತ್ರಿಗಳ ಆಪತ್ಕಾಲಿನ ಸಭೆಗೆ ಕರೆದಿದೆ. ಈ ಬಗ್ಗೆ ಒಐಸಿಯು ಟ್ವೀಟ್‍ನ ಮೂಲಕ ಮಾಹಿತಿಯನ್ನು ನೀಡಿದೆ.

೧. ಸೌದಿ ಅರೇಬಿಯಾದ ಕೋರಿಕೆಯ ಮೇರೆಗೆ ವಿದೇಶಾಂಗ ಮಂತ್ರಿಗಳ ಸಂಘಟನೆಯ ಕಾರ್ಯಕಾರಿ ಸಮಿತಿಯ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಜೆರುಸಲೆಮ್‍ನ ಅಲ್-ಅಕ್ಸಾ ಮಸೀದಿಯಲ್ಲಾದ ಹಿಂಸೆ ಮತ್ತು ಪ್ಯಾಲೇಸ್ಟಿನಿಯನ್ ಪ್ರಾಂತ್ಯಗಳ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯ ಬಗ್ಗೆ ಚರ್ಚೆ ನಡೆಯಲಿದೆ.

೨. ಇಸ್ರೇಲ್ ನ ವಿರುದ್ಧ ಇಸ್ಲಾಮಿಕ್ ರಾಷ್ಟ್ರಗಳನ್ನು ಒಗ್ಗೂಡಿಸಲು ತುರ್ಕಸ್ತಾನ ಮತ್ತು ಪಾಕಿಸ್ತಾನ ಪ್ರಯತ್ನಿಸುತ್ತಿವೆ. ಇಸ್ಲಾಮಿ ದೇಶಗಳಿಗೆ ಗಾಜಾ ಪ್ರದೇಶದಲ್ಲಿಯ ಹಮಾಸ್‍ನ ಅಭಿಯಾನಕ್ಕ್ನೆ ಒಗ್ಗಟ್ಟಿನಿಂದ ಬೆಂಬಲ ನೀಡಬೇಕು. ಇಸ್ರೈಲ್‍ನ ವಿರುದ್ಧ ಸ್ಪಷ್ಟ ನಿಲುವು ತೆಗೆದುಕೊಳ್ಳುವ ಸಮಯ ಇದೀಗ ಬಂದಿದೆ ಎಂದು ತುರ್ಕಸ್ತಾನ ಹೇಳಿದೆ.

೩. ಇಸ್ರೇಲ್ ನ ವಿರುದ್ಧ ಇಸ್ಲಾಮಿಕ್ ರಾಷ್ಟ್ರಗಳು ಒಂದಾಗುತ್ತಿದ್ದಂತೆ ಪ್ಯಾಲೇಸ್ಟಿನಿಯನ್ ಭೂಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಈವರೆಗೆ ಕನಿಷ್ಠ ೧೧೯ ಜನರು ಸಾವನ್ನಪ್ಪಿದ್ದರೆ, ಇಸ್ರೇಲ್ ನಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ.

೪. ವಿಶ್ವಸಂಸ್ಥೆಯ ಪ್ರಕಾರ, ಗಾಜಾ ಪ್ರದೇಶದ ೨೦೦ ಕ್ಕೂ ಹೆಚ್ಚು ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಉತ್ತರದ ಗಾಜಾ ಪ್ರದೇಶದ ಶಾಲೆಗಳಲ್ಲಿ ನೂರಾರು ಜನರು ಆಶ್ರಯ ಪಡೆದಿದ್ದಾರೆ. ಇಸ್ರೇಲ್ ನ ಯಹೂದಿ ಮತ್ತು ಅರಬ್ ಮಿಶ್ರ ಪ್ರದೇಶಗಳಲ್ಲಿ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ. ಅಲ್ಲಿ ಗಲಭೆ ಆರಂಭವಾಗಿದೆ.

. ಇಸ್ರೇಲ್ ಸೇನೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಜೊನಾಥನ್ ಕಾನರಿಕಸ್ ಅವರು, ‘ನಾವು ೧೬೦ ಯುದ್ಧವಿಮಾನಗಳನ್ನು ಭೂಸೇನೆಯನ್ನು ಸಿದ್ಧಪಡಿಸಿದ್ದೇವೆ ಟ್ಯಾಂಕ್‍ಗಳು ಕೆಲವು ವಿಶೇಷ ಗುರಿ ಇಟ್ಟುಕೊಂಡು ದಾಳಿ ಮಾಡಿವೆ; ಆದರೆ ನಾವು ಇನ್ನೂ ಗಾಜಾ ಪಟ್ಟಿಯೊಳ್ಡ ಪ್ರವೇಶಿಸಿಲ್ಲ.’ ಎಂದು ಹೇಳಿದರು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ‘ಅಭಿಯಾನ ಪ್ರಾರಂಭವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ. ಈ ಸಮಯದಲ್ಲಿ ಹಮಾಸ್‍ಗೆ ಯೋಗ್ಯ ಪಾಠ ಕಲಿಸಲಾಗುವುದು.’ ಎಂದು ಹೇಳಿದರು.