ಬಿಹಾರದಲ್ಲಿಯೂ ಸಂಚಾರ ನಿಷೇಧ ಘೋಷಣೆ


ನವ ದೆಹಲಿ – ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾದ ಉಪದ್ರವವನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಿ ರಾಷ್ಟ್ರೀಯ ಸಂಚಾರ ನಿಷೇಧಕ್ಕೆ ಸರ್ವೋಚ್ಚ ನ್ಯಾಯಾಲಯ ಮತ್ತು ಕೋವಿಡ್ ಟಾಸ್ಕ್ ಫೋರ್ಸ್ ಸಲಹೆ ನೀಡಿದೆ. ಈ ಹಿನ್ನೆಲೆಯಲ್ಲಿ, ಈಗ ಬಿಹಾರದಲ್ಲಿ ಸಂಚಾರ ನಿಷೇಧವನ್ನು ಘೋಷಿಸಲಾಗಿದೆ. ಈ ಹಿಂದೆ ಉತ್ತರ ಪ್ರದೇಶ, ಹರಿಯಾಣ, ದೆಹಲಿ, ರಾಜಸ್ಥಾನ, ಜಾರ್ಖಂಡ, ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಸಂಚಾರ ನಿಷೇಧವನ್ನು ಘೋಷಿಸಲಾಗಿದೆ.

ದೇಶದಲ್ಲಿ ಶೇಕಡಾ ೬೭. ೫ ಜನರಿಂದ ಸಂಚಾರ ನಿಷೇಧದ ಬೇಡಿಕೆ !

‘ಕಾನ್ ಪೇಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ’ (‘ಕಟ’) ಒಂದು ಸಮೀಕ್ಷೆಯನ್ನು ನಡೆಸಿತ್ತು. ಅದರ ವರದಿಯ ಪ್ರಕಾರ, ಶೇಕಡಾ ೬೭.೫ ರಷ್ಟು ನಾಗರಿಕರು ಕಳೆದ ವರ್ಷದಂತೆ ಈಗಲೂ ದೇಶದಲ್ಲಿ ಸಂಚಾರ ನಿಷೇಧವನ್ನು ಕೋರಿದ್ದಾರೆ. ದೇಶದಲ್ಲಿ ಶೇಕಡಾ ೭೮.೨ ಜನರು ಕೊರೋನಾದಿಂದ ಪರಿಸ್ಥಿತಿ ನಿಯಂತ್ರಣದಲ್ಲಿಲ್ಲ ಎಂದು ಹೇಳಿದ್ದಾರೆ.