ಕೊರೋನಾ ಲಸಿಕೆ ಬಗ್ಗೆ ಗಾಳಿಸುದ್ದಿಗಳನ್ನು ಹಬ್ಬಿಸಿದ್ದಕ್ಕಾಗಿ ತಮಿಳು ನಟ ಮನ್ಸೂರ್ ಅಲಿ ಖಾನ್‍ಗೆ ೨ ಲಕ್ಷ ರೂಪಾಯಿಗಳ ದಂಡ !

ನಟ ಮನ್ಸೂರ್ ಅಲಿ ಖಾನ್

ಚೆನ್ನೈ (ತಮಿಳುನಾಡು) – ಕೊರೋನಾ ಲಸಿಕೆ ಬಗ್ಗೆ ಗಾಳಿಸುದ್ದಿಗಳನ್ನು ಹಬ್ಬಿಸಿದ್ದಕ್ಕಾಗಿ ನಟ ಮನ್ಸೂರ್ ಅಲಿ ಖಾನ್ ಅವರಿಗೆ ಮದ್ರಾಸ್ ಉಚ್ಚ ನ್ಯಾಯಾಲಯವು ೨ ಲಕ್ಷ ರೂಪಾಯಿಯ ದಂಡವನ್ನು ವಿಧಿಸಿದೆ. ಈ ಹಣವನ್ನು ರಾಜ್ಯ ಸರಕಾರಕ್ಕೆ ಜಮಾ ಮಾಡಲು ತಿಳಿಸಲಾಗಿದೆ. ಲಸಿಕೆ ಅಭಿಯಾನದ ಬಗ್ಗೆ ಖಾನ್ ತಮಿಳುನಾಡಿನಲ್ಲಿ ತಪ್ಪು ಮಾಹಿತಿ ನೀಡಿದ್ದರು. ಅದೇರೀತಿ ಕೊರೋನಾದ ಮಾರ್ಗಸೂಚಿಗಳು ಮೂರ್ಖತನ ಎಂದು ಹೇಳಿದ್ದರು. ವಿಧಾನಸಭಾ ಚುನಾವಣೆಯ ಸಮಯದಲ್ಲಿ ಭಿಕ್ಷುಕರೊಂದಿಗೆ ಊಟ ಮಾಡಿ ಬೀದಿಗಳಲ್ಲಿ ಮಲಗಿದ್ದೆ; ಆದರೆ ತನಗೆ ಕೊರೋನಾ ಆಗಲಿಲ್ಲ ಎಂದು ಹೇಳಿಕೊಂಡಿದ್ದಾನೆ. ಇದರ ನಂತರ ಆತನ ವಿರುದ್ಧ ಪ್ರಕರಣವು ದಾಖಲಾಗಿದೆ.