ಸಾಮಾಜಿಕ ಮಾಧ್ಯಮಗಳ ಮೂಲಕ ಲವ್ ಜಿಹಾದ್‌ನ ವಿಡಿಯೋ ಪ್ರಸಾರ
ಎರ್ನಾಕುಲಂ (ಕೇರಳ) – ಮದುವೆಯಾಗಿ ಕರೆತಂದ ಹೆಂಡತಿಯನ್ನು ಅಲ್ಪ ಕಾಲಾವಧಿಯ ನಂತರ ಜಿಹಾದಿ ಭಯೋತ್ಪಾದಕರಿಗೆ ಮಾರಾಟ, ಎಂಬಂತಹ ವಿಡಿಯೋವನ್ನು ಕೇರಳದ ಕ್ರೈಸ್ತರಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರ ಮಾಡಲಾಗುತ್ತಿದೆ. ಈ ಬಾಲಕಿಯು ಮುಸ್ಲಿಂ ಯುವಕನ ಪ್ರೀತಿಯ ಬಲೆಯಲ್ಲಿ ಸಿಲುಕಿ ಪೋಷಕರೊಂದಿಗೆ ಜಗಳವಾಡಿ ಓಡಿಹೋಗಿದ್ದಳು ಎಂದು ಹೇಳಲಾಗಿದೆ. ಮದುವೆಯ ನಂತರ, ಗಂಡನು ಆಕೆಯ ಹಣೆಯಿಂದ ಕುಂಕುಮವನ್ನು ತೆಗೆದುಹಾಕಿ, ಮುಖವನ್ನು ದಾವಣಿಯಿಂದ ಮುಚ್ಚಿದನು. ಸ್ವಲ್ಪ ಸಮಯದ ನಂತರ ಮತಾಂಧರ ಗುಂಪು ಬಂದಿತು. ಪತಿ ಅವರೊಂದಿಗೆ ಮಾತನಾಡಿದ ಮತ್ತು ಹೆಂಡತಿಯನ್ನು ಮಾರಾಟ ಮಾಡಿದನು ಎಂದು ಇದರಲ್ಲಿ ತೋರಿಸಲಾಗಿದೆ. ಈ ವಿಡಿಯೋವನ್ನು ‘ಕ್ರಿಶ್ಚಿಯನ್ ಅಸೋಸಿಯೇಷನ್ ಅಂಡ್ ಅಲೈಯನ್ಸ್ ಫಾರ್ ಸೋಷಿಯಲ್ ಆಕ್ಷನ್’ ಈ ಸಂಘಟನೆಯು ಫೇಸ್‌ಬುಕ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ.
೧. ಈ ಸಂಘಟನೆಯು, ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ನೇತೃತ್ವದ ಎಡರಂಗ ಮತ್ತು ಕಾಂಗ್ರೆಸ್ ನೇತೃತ್ವದ ಡೆಮಾಕ್ರಟಿಕ್ ಫ್ರಂಟ್ ಇವುಗಳು ಮುಸ್ಲಿಮರನ್ನು ಇಲ್ಲಿಯವರೆಗೆ ಮಾಡಿದ ಓಲೈಕೆಯ ಪರಿಣಾಮವೇ ಇದು ಎಂದು ಹೇಳಿದೆ. ಅವರೆಲ್ಲ ಲವ್ ಜಿಹಾದ್ ಹೆಸರಿನಲ್ಲಿ ಭಯೋತ್ಪಾದನೆಯನ್ನು ಬೆಂಬಲಿಸಿದರು. ಇದರಿಂದಾಗಿ ರಾಜ್ಯದಲ್ಲಿ ಲವ್ ಜಿಹಾದ್‌ನ ಭಯೋತ್ಪಾದನೆ ಹೆಚ್ಚುತ್ತಿದೆ. ಅವುಗಳನ್ನು ಪೋಷಿಸುವ ಮೂಲವನ್ನು ಬೇರು ಸಹಿತ ಕತ್ತರಿಸಬೇಕಾಗಿದೆ ಎಂದು ಹೇಳಿದೆ.
೨. ಕಳೆದ ವರ್ಷ ಕೇರಳದ ಅತಿದೊಡ್ಡ ಸಾಯರೋ ಮಲಬಾರ್ ಚರ್ಚ್ ಈ ವಿಷಯದ ಬಗ್ಗೆ ಕರಪತ್ರವನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಕ್ರೈಸ್ತ ಮಹಿಳೆಯರನ್ನು ‘ಲವ್ ಜಿಹಾದ್’ಗಾಗಿ ಗುರಿಯಾಗಿಸಲಾಗುತ್ತಿದೆ ಎಂಬ ಕಳವಳವನ್ನು ವ್ಯಕ್ತಪಡಿಸಲಾಗಿತ್ತು.