ಗಂಗಾಸ್ನಾನದಿಂದ ಎಲ್ಲಾ ರೋಗಾಣುಗಳು ನಾಶವಾಗುತ್ತದೆ ! ಸತ್ಪಾಲ್ ಮಹಾರಾಜ, ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ನೀರಾವರಿ ಸಚಿವ

ಸತ್ಪಾಲ್ ಮಹಾರಾಜ, ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ನೀರಾವರಿ ಸಚಿವ

ಹರಿದ್ವಾರ, ಮಾರ್ಚ್ ೧೯ (ಸುದ್ದಿ) – ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಎಲ್ಲ ರೋಗಾಣುಗಳು ನಾಶವಾಗುತ್ತವೆ ಮತ್ತು ಇದು ವಿಜ್ಞಾನವು ಸಾಬೀತುಪಡಿಸಿದೆ. ಆದ್ದರಿಂದ ಕುಂಭಮೇಳದಲ್ಲಿ ದೇವರ ಡೊಲಿಯಾ (ದೇವತೆಗಳ ವಿಗ್ರಹಗಳನ್ನು ಪಲ್ಲಕ್ಕಿಗಳಲ್ಲಿ ಇಡುವ ಉತ್ತರಾಖಂಡದ ಐತಿಹಾಸಿಕ ಮತ್ತು ಪ್ರಾಚೀನ ಸಂಪ್ರದಾಯ) ಗಂಗಾ ಸ್ನಾನದಿಂದ ಅಮೃತದ ಹನಿಯಿಂದ ಇಡೀ ಮಾನವ ಜನಾಂಗದ ಕಲ್ಯಾಣವಾಗಲಿದೆ ಎಂದು ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ನೀರಾವರಿ ಸಚಿವ ಸತ್ಪಾಲ್ ಮಹಾರಾಜ್ ಹೇಳಿದ್ದಾರೆ. ಪ್ರೇಮನಗರ ಆಶ್ರಮದಲ್ಲಿ ಶ್ರೀ ಬದ್ರಿನಾಥ ಮತ್ತು ಶ್ರೀ ಹನುಮಾನ ಅವರ ಪವಿತ್ರ ಧರ್ಮಧ್ವಜ ಸ್ಥಾಪನೆಯ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ಏಪ್ರಿಲ್ ೨೫ ರಂದು ಕುಂಭಮೇಳದಲ್ಲಿ ‘ದೇವ್ ಡೋಲಿಯಾ’ದ ಸ್ನಾನ ನಡೆಯಲಿದೆ ಎಂದು ಅವರು ಘೋಷಿಸಿದರು. ‘ದೇವ್ ಡೋಲಿಯ’ ಸ್ನಾನ ಉತ್ತರಾಖಂಡದ ಐತಿಹಾಸಿಕ ಮತ್ತು ಪ್ರಾಚೀನ ಸಂಪ್ರದಾಯವಾಗಿದೆ. ‘ಈ ಗಂಗಾ ಸ್ನಾನಕ್ಕಾಗಿ ಬರಲಿರುವ ದೇವ್ ಡೋಲಿಯದ ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಭರಿಸಲು ಸರಕಾರ ಪ್ರಯತ್ನಿಸುತ್ತದೆ’, ಎಂದು ಸತ್ಪಾಲ್ ಮಹಾರಾಜ್ ಭರವಸೆ ನೀಡಿದರು. ಮಹಾಮಂಡಲೇಶ್ವರ ಸ್ವಾಮಿ ಶ್ರೀ ಹರಿಚೇತಾನಾನಂದ ಮಹಾರಾಜ ಅವರು ದೇವದೇವತೆಗಳ ಆಶೀರ್ವಾದದಿಂದ ಇಲ್ಲಿಯ ಕುಂಭಮೇಳ ಯಶಸ್ವಿಯಾಗಿ ನೆರವೇರಲಿದೆ ಎಂದು ಹೇಳಿ ಮುಖ್ಯಮಂತ್ರಿ ತೆಗೆದುಕೊಂಡ ನಿರ್ಧಾರವನ್ನು ಸ್ವಾಗತಿಸಿದರು.