ಡಾಸನಾ (ಉತ್ತರ ಪ್ರದೇಶ)ದಲ್ಲಿ ದೇವಿಯ ದೇವಸ್ಥಾನಕ್ಕೆ ಹೋದ ಮುಸಲ್ಮಾನನ ಥಳಿತ !

ಕದಿಯುವ ಉದ್ದೇಶದಿಂದಲೇ ದೇವಸ್ಥಾನಕ್ಕೆ ಪ್ರವೇಶಿಸಿದ್ದ ಯುವಕ ! – ಮಹಂತ ಯತಿ ನರಸಿಂಹಾನಂದ ಸರಸ್ವತಿ

ಗಾಜಿಯಾಬಾದ್ (ಉತ್ತರ ಪ್ರದೇಶ) – ಕೆಲವು ದಿನಗಳ ಹಿಂದೆ ಇಲ್ಲಿನ ಡಾಸನಾ ಪ್ರದೇಶದ ದೇವಿಯ ದೇವಸ್ಥಾನದಲ್ಲಿ ಆಸಿಫ್ ಎಂಬ ಮುಸಲ್ಮಾನ ಯುವಕನನ್ನು ಥಳಿಸಲಾಗಿತ್ತು. ‘ಆತ ನೀರು ಕುಡಿಯಲು ಇಲ್ಲಿಗೆ ಬಂದಿದ್ದ ಮತ್ತು ಆತನಿಗೆ ಹೊಡೆದರು’ ಎಂದು ವರದಿಯು ಪ್ರಸಾರವಾಗಿತ್ತು. (ಹಿಂದೂಗಳು ಅಸಹಿಷ್ಣುಗಳಾಗಿದ್ದಾರೆ ಎಂದು ತೋರಿಸಲು ಕಪಟ ಜಾತ್ಯತೀತ ಮಾಧ್ಯಮವು ಯಾವಾಗಲೂ ಪ್ರಯತ್ನಿಸುತ್ತಿದೆ, ಇದು ಅದರದೇ ಒಂದು ಉದಾಹರಣೆಯಾಗಿದೆ ! – ಸಂಪಾದಕರು) ಪ್ರತ್ಯಕ್ಷದಲ್ಲಿ ಈ ದೇವಸ್ಥಾನದ ಹೊರಗೆ ಫಲಕ ಹಾಕಲಾಗಿದ್ದು ಅದರಲ್ಲಿ `ಹಿಂದೂಗಳನ್ನು ಹೊರತು ಪಡಿಸಿ ಇತರರಿಗೆ ದೇವಸ್ಥಾನದಲ್ಲಿ ಪ್ರವೇಶವಿಲ್ಲ’, ಎಂದು ಬರೆಯಲಾಗಿದೆ. ಈ ಫಲಕದ ಬಗ್ಗೆ ತನಗೆ ಏನೂ ತಿಳಿದಿರಲಿಲ್ಲ ಎಂದು ಆಸಿಫ್ ಹೇಳಿದ್ದಾನೆ. (ಕಳ್ಳನು ಯಾವತ್ತಾದರೂ ತಾನು ಕದ್ದಿದ್ದೇನೆ ಎಂದು ಹೇಳುತ್ತಾನೆಯೇ ! – ಸಂಪಾದಕರು) ಈ ಬಗ್ಗೆ ದೇವಸ್ಥಾನದ ಮಹಂತ ಯತಿ ನರಸಿಹಾನಂದ ಸರಸ್ವತಿಯವರು, ಆಸಿಫ್ ನು ದೇವಸ್ಥಾನದಲ್ಲಿ ಕಳ್ಳತನ ಮಾಡುವ ಉದ್ದೇಶದಿಂದಲೇ ಬಂದಿದ್ದನು. ಆದ್ದರಿಂದ ಅವನನ್ನು ಥಳಿಸಲಾಯಿತು ಎಂದು ಹೇಳಿದರು.

ಮಹಂತ್ ಯತಿ ನರಸಿಂಹಾನಂದ ಸರಸ್ವತಿ ಅವರು ಫಲಕದ ಬಗ್ಗೆ ಹೇಳುತ್ತಾ, ಹಿಂದಿನ ಸರಕಾರದ ಕಾಲದಿಂದಲೂ ಈ ಫಲಕವು ಇಲ್ಲಿದೆ ಮತ್ತು ಅದನ್ನು ಯಾವತ್ತೂ ತೆಗೆದುಹಾಕಲಾಗುವುದಿಲ್ಲ. ಈ ಫಲಕಗಳನ್ನು ತೆಗೆದುಹಾಕಲು ಜಿಲ್ಲಾಡಳಿತ ಮತ್ತು ಪೊಲೀಸರು ಪ್ರಯತ್ನಿಸಿದರೆ ನಾನು ಕೂಡ ಅದನ್ನು ವಿರೋಧಿಸುತ್ತೇನೆ. (ಹಿಂದೂ ದೇವಾಲಯಗಳಿಗೆ ಪ್ರವೇಶಿಸಬೇಕು ಅಥವಾ ಪ್ರವೇಶಿಸಬಾರದು, ಇದು ಅವರ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಆಗಿದೆ. ಅದನ್ನು ಯಾರೂ ಕಸಿಯಲು ಸಾಧ್ಯವಿಲ್ಲ ! – ಸಂಪಾದಕ) ಎಂದಿದ್ದಾರೆ.