ಬಂಗಾಲದ ಬಿಜೆಪಿ ಸಂಸದರ ಮನೆ ಮತ್ತು ಕಚೇರಿಯ ಮೇಲೆ ೧೫ ನಾಡಬಾಂಬ್‌ ದಾಳಿ

ತೃಣಮೂಲ ಕಾಂಗ್ರೆಸ್ ವಿರುದ್ಧದ ಆರೋಪ

ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಲಿದೆ !

ಬಂಗಾಲವು ನಾಡಬಾಂಬುಗಳನ್ನು ತಯಾರಿಸಲು ಒಂದು ದೊಡ್ಡ ಕಾರ್ಖಾನೆಯಾಗಿ ಮಾರ್ಪಟ್ಟಿದೆ ಮತ್ತು ಅದನ್ನು ತಯಾರಿಸುವುದರಲ್ಲಿ ತೃಣಮೂಲ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಮುಂಚೂಣಿಯಲ್ಲಿದ್ದಾರೆ, ಹೀಗೆ ಅನೇಕ ಉದಾಹರಣೆಗಳು ಬೆಳಕಿಗೆ ಬಂದಿವೆ; ಆದರೆ ಇದರ ವಿರುದ್ಧ ಸ್ಥಳೀಯ ಪೊಲೀಸರು ಮತ್ತು ಕೇಂದ್ರ ತನಿಖಾ ದಳ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ? ಈ ರೀತಿಯ ಬಾಂಬ್ ತಯಾರಿಕೆ ವರ್ಷಾನುಗಟ್ಟಲೆ ಹೇಗೆ ಆಗುತ್ತಿದೆ ?

ಕೋಲಕಾತಾ (ಬಂಗಾಲ) – ಬಂಗಾಲದ ಉತ್ತರ ೨೪ ಪರಗಣಾದ ಜಗದಾಲ್‌ನಲ್ಲಿ ಮಾರ್ಚ್ ೧೭ರ ರಾತ್ರಿಯಂದು ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರ ಮನೆ ಮತ್ತು ಕಚೇರಿಯ ಮೇಲೆ ನಾಡಬಾಂಬ್ ದಾಳಿ ಮಾಡಲಾಗಿದೆ. ಈ ದಾಳಿಯಲ್ಲಿ ಮಗು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

ಸಂಸದ ಅರ್ಜುನ್ ಸಿಂಗ್ ಅವರು ಸಂಜೆ ನನ್ನ ಕಚೇರಿ ‘ಮಜ್ದೂರ್ ಭವನ’ ಮೇಲೆ ಬಾಂಬ್ ಎಸೆದಿದ್ದಾರೆ ಎಂದು ಹೇಳಿದರು. ಅದರ ನಂತರ ಪೊಲೀಸರ ಸಮ್ಮುಖದಲ್ಲಿ ನನ್ನ ವಾಹನದ ಮೇಲೆ ಬಾಂಬ್ ಎಸೆಯಲಾಯಿತು. ಸುಮಾರು ೧೫ ಸ್ಥಳಗಳಲ್ಲಿ ಬಾಂಬ್‌ಗಳನ್ನು ಎಸೆಯಲಾಗಿದ್ದು ಪೊಲೀಸರು ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಸ್ಫೋಟಿಸಲಾಗಿದೆ. ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.

ಆಡಳಿತ ಎಲ್ಲಿದೆ ? ಪೊಲೀಸರು ಯಾಕೆ ಏನನ್ನೂ ಮಾಡುತ್ತಿಲ್ಲ ? ಈ ದಾಳಿಯ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು. ಪೊಲೀಸರಿಗೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಈ ಆಟವು ತುಂಬಾ ಅಪಾಯಕಾರಿವಾಗುವುದು, ತೃಣಮೂಲ ಕಾಂಗ್ರೆಸ್ ಮತ್ತು ಗೂಂಡಾಗಳು ಕೊನೆಗೊಳ್ಳುತ್ತಾರೆ. ಮತದಾನದ ಬಗ್ಗೆ ಜನರನ್ನು ಬೆದರಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.