ಪುರಿ ಶ್ರೀ ಜಗನ್ನಾಥ ದೇವಾಲಯದ ೩೫ ಸಾವಿರ ಎಕರೆ ಭೂಮಿಯನ್ನು ಒಡಿಶಾ ಸರಕಾರ ಮಾರಾಟ ಮಾಡಲಿದೆ !

ದೇವಾಲಯಗಳ ಸರಕಾರೀಕರಣದ ನಂತರ ಇಲ್ಲಿಯವರೆಗೆ ಏನು ನಡೆದು ಬಂದಿತ್ತೋ, ಅದೇ ಶ್ರೀ ಜಗನ್ನಾಥಪುರಿ ದೇವಾಲಯದ ಸಂದರ್ಭದಲ್ಲಿ ಆಗುತ್ತಿದೆ ! ಇಂತಹ ಘಟನೆಗಳನ್ನು ತಡೆಗಟ್ಟುವ ಸಲುವಾಗಿ ದೇವಾಲಯಗಳನ್ನು ಸರಕಾರದ ನಿಯಂತ್ರಣದಿಂದ ಬಿಡುಗಡೆ ಮಾಡಿ ಭಕ್ತರಿಗೆ ಒಪ್ಪಿಸಬೇಕು ಇಲ್ಲವಾದಲ್ಲಿ ಸರಕಾರ ದೇವಾಲಯಗಳ ಭೂಮಿ ಮತ್ತು ಆಸ್ತಿಯನ್ನು ಮಾರಿ ಕೈ ಒರೆಸಿಕೊಳ್ಳುವುದು !

ಭುವನೇಶ್ವರ : ಶ್ರೀ ಜಗನ್ನಾಥ ದೇವಸ್ಥಾನಕ್ಕೆ ಸೇರಿದ ಒಡಿಶಾ ಮತ್ತು ಇತರ ಆರು ರಾಜ್ಯಗಳಲ್ಲಿರುವ ಒಟ್ಟು ೩೫ ಸಾವಿರದ ೨೭೨ ಎಕರೆ ಭೂಮಿಯನ್ನು ಮಾರಾಟ ಮಾಡಲು ಒಡಿಶಾದ ಬಿಜು ಜನತಾದಳ ಸರಕಾರ ನಿರ್ಧರಿಸಿದೆ ಎಂದು ಕಾನೂನು ಸಚಿವ ಪ್ರತಾಪ ಜೆನಾ ಇವರು ಬಿಜೆಪಿ ಶಾಸಕ ಮೋಹಂಚರನ್ ಮಾಂಜಿಯವರ ಪ್ರಶ್ನೆಗೆ ವಿಧಾನಸಭೆಯಲ್ಲಿ ಮಾಹಿತಿ ನೀಡಿದರು. ‘ಒರಿಸ್ಸಾದ ಮಾಜಿ ರಾಜ್ಯಪಾಲ ಬಿ.ಡಿ. ಶರ್ಮಾ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯ ಶಿಫಾರಸ್ಸಿನ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ’ಎಂದು ಜೆನಾ ಹೇಳಿದರು.

೧. ಒಡಿಶಾ ರಾಜ್ಯದ ೩೦ ಜಿಲ್ಲೆಗಳಲ್ಲಿ ೨೪ ರಲ್ಲಿ ಶ್ರೀ ಜಗನ್ನಾಥ ದೇವಾಲಯದ ಒಟ್ಟು ೬೦ ಸಾವಿರದ ೪೨೭ ಎಕರೆ ಭೂಮಿಯನ್ನು ಹೊಂದಿದೆ. ಈ ಪೈಕಿ ೩೪ ಸಾವಿರ ೮೭೭ ಎಕರೆ ಜಮೀನಿನ ಮಾಲೀಕತ್ವದ ದಾಖಲೆಗಳು ಸರಕಾರದ ಹತ್ತಿರ ಲಭ್ಯವಿದೆ. ರಾಜ್ಯ ಸರ್ಕಾರದ ‘ಸಮಾನ ನೀತಿ’ ಯೋಜನೆಯಡಿಯಲ್ಲಿ ಈ ಭೂಮಿ ಮಾರಾಟ ಮಾಡುವ ಪ್ರಸ್ತಾಪ ಸಿದ್ಧಪಡಿಸಲಾಗಿದೆ.

೨. ರಾಜ್ಯದ ಸ್ವಲ್ಪ ಜಮೀನು ಮತ್ತು ಇತರ ರಾಜ್ಯಗಳಲ್ಲಿನ ಆಸ್ತಿಗಳನ್ನು ಈಗಾಗಲೇ ಮಾರಾಟ ಮಾಡಲಾಗಿದೆ ಮತ್ತು ಹಣವನ್ನು ದೇವಾಲಯದ ಖಾತೆಗೆ ಜಮಾ ಮಾಡಲಾಗಿದೆ. ೧೨ ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯಕ್ಕೆ ಸಿಕ್ಕಿದ್ದ ದಾನದಲ್ಲಿ ಬಿಹಾರ, ಬಂಗಾಳ, ಛತ್ತೀಸಗಡ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಲ್ಲಿಯೂ ಭೂಮಿ ಮತ್ತು ಆಸ್ತಿಯನ್ನು ಹೊಂದಿದೆ. ಸ್ವಲ್ಪ ಭೂಮಿಯನ್ನು ಕೃಷಿಕರಿಗೆ ನೀಡಲಾಗಿದ್ದರೆ, ಇನ್ನಷ್ಟು ಭೂಮಿಯನ್ನು ಸರಕಾರಿ ಯೋಜನೆಗಳಿಗೆ ಬಳಸಲಾಗುತ್ತಿದೆ. ಅದರಿಂದಲೂ ದೇವಾಲಯಕ್ಕೆ ಆದಾಯ ಸಿಗುತ್ತಿದೆ ಎಂಬ ಮಾಹಿತಿ ನೀಡಲಾಗಿದೆ.