ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಹಿಂದೂ (ಈಶ್ವರಿ) ರಾಜ್ಯದಲ್ಲಿ ಶಿಕ್ಷಣಪದ್ಧತಿಯಲ್ಲಿ ಪ್ರತಿಯೊಂದು ವಿಷಯದ ಅಭ್ಯಾಸದೊಂದಿಗೆ ‘ಈಶ್ವರಪ್ರಾಪ್ತಿ ಹೇಗೆ ಮಾಡಿಕೊಳ್ಳುವುದು’ ಎಂಬುದನ್ನು ಕಲಿಸಲಾಗುವುದು.

‘ಹಿಂದೂ (ಈಶ್ವರಿ) ರಾಜ್ಯದ ಶಿಕ್ಷಣಪದ್ಧತಿ ಹೇಗಿರಬಹುದು ?’, ಎಂಬ ಪ್ರಶ್ನೆಯು ಕೆಲವರು ಕೇಳುತ್ತಾರೆ ಅದರ ಉತ್ತರ ‘ನಾಲಂದ ಮತ್ತು ತಕ್ಷಶಿಲಾ ವಿಶ್ವವಿದ್ಯಾಲಯದಲ್ಲಿ ಯಾವ ರೀತಿ ೧೪ ವಿದ್ಯೆ ಮತ್ತು ೬೪ ಕಲೆಯನ್ನು ಕಲಿಸಲಾಗುತ್ತಿತ್ತು ಅದರಂತೆ ಶಿಕ್ಷಣವನ್ನು ನೀಡಲಾಗುವುದು.

‘ಸ್ವಾತಂತ್ರ್ಯದಿಂದ ಇಂದಿನವರೆಗಿನ ೭೨ ವರ್ಷಗಳ ಅವಧಿಯಲ್ಲಿ ಹೆಚ್ಚಿನ ರಾಜಕೀಯ ಪಕ್ಷಗಳು ಭಾರತದ ನಿಜವಾದ ಪ್ರಗತಿಯನ್ನು ಮಾಡಲೇ ಇಲ್ಲ, ತದ್ವಿರುದ್ಧ ಎಲ್ಲ ಅಧಾರ್ಮಿಕ ಮತ್ತು ನೀತಿ ಶೂನ್ಯ ವಿಷಯಗಳಲ್ಲಿ ಭಾರತವು ಪ್ರಗತಿಯನ್ನು ಮಾಡಿದೆ’.

‘ರಾಜಕಾರಣಿಗಳು, ಬುದ್ಧಿಜೀವಿಗಳು ಅಥವಾ ವಿಜ್ಞಾನಿಗಳು ಇವರಿಂದಾಗಿ ವಿದೇಶಿಯರು ಭಾರತಕ್ಕೆ ಬರುವುದಿಲ್ಲ ಬದಲಾಗಿ ಸಂತರಿಂದಾಗಿ ಹಾಗೂ ಅಧ್ಯಾತ್ಮ ಮತ್ತು ಸಾಧನೆಯನ್ನು ಕಲಿಯಲು ಬರುತ್ತಾರೆ. ಆದರೂ ಹಿಂದೂಗಳಿಗೆ ಸಂತರು ಮತ್ತು ಅಧ್ಯಾತ್ಮ ಇವುಗಳ ಬೆಲೆ ತಿಳಿದಿರುವುದಿಲ್ಲ.’

‘ಒಬ್ಬೊಬ್ಬ ಭಕ್ತನಿಗೆ ಸಹಾಯ ಮಾಡುವ ದೇವತೆಗಿಂತ ಸಮಷ್ಟಿಗೆ ಸಹಾಯ ಮಾಡುವ ಈಶ್ವರನ ರಾಮ-ಕೃಷ್ಣ ಮುಂತಾದ ಅವತಾರಗಳು ಎಲ್ಲರಿಗೂ ಆತ್ಮೀಯರು ಎನಿಸುತ್ತಾರೆ.’

– (ಪರಾತ್ಪರ ಗುರು) ಡಾ. ಆಠವಲೆ.