ಉಯಿಘರ್ ನಂತರ ಉತ್ಸುಲ ಮುಸ್ಲಿಮರ ದಮನದತ್ತ ಚೀನಾದ ಚಿತ್ತ

ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸುವುದು ಸೇರಿದಂತೆ ಹೊಸ ಮಸೀದಿಗಳ ನಿರ್ಮಾಣಕ್ಕೆ ನಿಷೇಧ

ಚೀನಾ ತನ್ನ ದೇಶದ ಮುಸ್ಲಿಮರನ್ನು ಎಷ್ಟೇ ನಿಯಂತ್ರಿಸಿದರೂ ಮತ್ತು ದೌರ್ಜನ್ಯ ನಡೆಸಿದರೂ, ಜಗತ್ತಿನ ಯಾವುದೇ ಇಸ್ಲಾಮಿಕ್ ದೇಶ ಮತ್ತು ಸಂಘಟನೆಗಳು ಬಾಯಿ ತೆರೆಯುವುದಿಲ್ಲ; ಆದರೆ ಭಾರತದಲ್ಲಿ ಮುಸ್ಲಿಮರ ವಿರುದ್ಧ ಆಕ್ರಮಣದ ಸುಳ್ಳು ನೆಪದಲ್ಲಿ ಎಲ್ಲ ದೇಶಗಳು ಕೋಲಾಹಲವೆಬ್ಬಿಸುತ್ತವೆ !

ಸಾನ್ಯಾ (ಚೀನಾ) – ಉಯಿಘರ್ ಮುಸ್ಲಿಮರನ್ನು ನಿಯಂತ್ರಿಸಲು ಪ್ರಯತ್ನಿಸಿದ ನಂತರ, ಚೀನಾ ಈಗ ತನ್ನ ದೇಶದ ಉತ್ಸುಲ ಮುಸ್ಲಿಮರತ್ತ ಗಮನ ಹರಿಸಿದೆ. ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸುವುದು, ಹೊಸ ಮಸೀದಿಗಳನ್ನು ನಿರ್ಮಿಸುವುದು ಮತ್ತು ಅರೇಬಿಕ್ ಕಲಿಯುವುದನ್ನು ನಿಷೇಧಿಸಲಾಗಿದೆ. ಸಾನ್ಯಾ ನಗರದಲ್ಲಿ ೧೦ ಸಾವಿರ ಉತ್ಸುಲ ಮುಸ್ಲಿಮರಿದ್ದಾರೆ. ಇದನ್ನು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.