ಅಫ್ಘಾನಿಸ್ತಾನ : ಮಸೀದಿಯಲ್ಲಿ ಬಾಂಬ್ ತಯಾರಿಸುವ ತರಬೇತಿಯಲ್ಲಿ ನಡೆದ ಸ್ಫೋಟದಲ್ಲಿ ಕನಿಷ್ಠ ೩೦ ತಾಲಿಬಾನಿಗಳ ಸಾವು

* ಮಸೀದಿಗಳಲ್ಲಿ ಬಾಂಬ್‌ಗಳನ್ನು ತಯಾರಿಸುವ ವಿರುದ್ಧ ಮುಲ್ಲಾ ಮೌಲ್ವಿಗಳು ಎಂದಿಗೂ ಫತ್ವಾಗಳನ್ನು ನೀಡುವುದನ್ನು ಕಾಣಸಿಗುವುದಿಲ್ಲ ಎಂದು ನೆನಪಿಡಿ!

* ಭಾರತವು ಮುಸ್ಲಿಂ ಅಲ್ಪಸಂಖ್ಯಾತರನ್ನು ಹೊಂದಿರುವ ಜಾತ್ಯತೀತ ದೇಶ; ಆದರೆ ಅಫ್ಘಾನಿಸ್ತಾನವು ಮುಸ್ಲಿಂ ಬಹುಸಂಖ್ಯಾತರಿರುವ ಇಸ್ಲಾಮಿಕ್ ದೇಶ. ಅಂತಹ ಘಟನೆಗಳು ಅಲ್ಲಿ ನಡೆಯುತ್ತವೆ ಮತ್ತು ವಿಶ್ವದ ಯಾವುದೇ ಇಸ್ಲಾಮಿಕ್ ಸಂಘಟನೆ ಅಥವಾ ಇತರ ಇಸ್ಲಾಮಿಕ್ ದೇಶಗಳು ಇದರ ವಿರುದ್ಧ ಮಾತನಾಡುವುದಿಲ್ಲ ಎಂಬುದನ್ನು ಗಮನಿಸಿ !

ಕಾಬೂಲ್ (ಅಫ್ಘಾನಿಸ್ತಾನ) – ಅಫ್ಘಾನಿಸ್ತಾನದ ದೌಲತಾಬಾದ್‌ನ ಕುಲ್ತಕ್ ಗ್ರಾಮದ ಮಸೀದಿಯೊಂದರಲ್ಲಿ ಬಾಂಬ್ ತಯಾರಿಸುವ ತರಬೇತಿ ನಡೆಯುವಾಗ ಆದ ಬಾಂಬ್ ಸ್ಫೋಟದಲ್ಲಿ ೩೦ ತಾಲಿಬಾನ್ ಯುವಕರು ಸಾವನ್ನಪ್ಪಿದ್ದಾರೆ. ಅಫಘಾನ್ ನ್ಯಾಶನಲ್ ಆರ್ಮಿಯು ಈ ಘಟನೆಯ ಮಾಹಿತಿ ನೀಡಿದೆ. ಮೃತಪಟ್ಟವರಲ್ಲಿ ಆರು ಮಂದಿ ವಿದೇಶಿಯರೂ ಇದ್ದಾರೆ ಎಂಬ ಮಾಹಿತಿ ಇದೆ. “ಈ ಸ್ಫೋಟವು ಎಷ್ಟು ಶಕ್ತಿಯುತವಾಗಿತ್ತು ಎಂದರೆ ಮೃತರ ಶವಗಳನ್ನು ಗುರುತಿಸಲು ಸಾಧ್ಯವಿಲ್ಲ” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದು ಘಟನೆಯಲ್ಲಿ, ಕುಂದುಜ್ ಪ್ರಾಂತ್ಯದಲ್ಲಿ ತಾಲಿಬಾನಿಗಳು ನಡೆಸಿದ ಬಾಂಬ್‌ಸ್ಫೋಟದಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.