ಪ್ರಾಚೀನ ಹಾಗೂ ವೈಭವಶಾಲಿ ಹಿಂದೂ ಧರ್ಮದ ಶ್ರೇಷ್ಠತೆ 

ಹಿಂದುಸ್ಥಾನವು ಯುರೋಪಿಯನ್ ವಂಶದವರ ಮಾತೃಭೂಮಿಯಾಗಿದೆ, ಎಂದು ವಿಲ್ ಡ್ಯುರಾಂಟ್‌ರವರು ಹೇಳುವುದು

ಪಾಶ್ಚಾತ್ಯರ ಪುರಾವೆ ಬೇಕಾಗಿದ್ದರೆ ವಿಲ್ ಡ್ಯುರಾಂಟ್ ಇವರ ವಿಶ್ವವಿಖ್ಯಾತ ಗ್ರಂಥವಾದ ದ ಸ್ಟೋರಿ ಆಫ್ ಸಿವಿಲೈಸೇಶನ್ ಇದರ ಅಧ್ಯಯನ ಮಾಡಿ. ಅದರಲ್ಲಿ ಅವರು ‘ಹಿಂದುಸ್ಥಾನವು ಯುರೋಪಿಯನ್ ವಂಶದ ಮಾತೃಭೂಮಿಯಾಗಿದೆ ಮತ್ತು ಎಲ್ಲ ಯುರೋಪಿಯನ್ ಭಾಷೆಗಳ ಜನನಿ ಸಂಸ್ಕೃತವಾಗಿದೆ ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವ, ಸ್ವ-ಸರಕಾರದ ತತ್ತ್ವಗಳನ್ನು ಯುರೋಪಿಯನ್ನರು ಭಾರತದ ಪಂಚಾಯತಿ ಸರಕಾರದಿಂದ ಪಡೆದುಕೊಂಡಿದ್ದಾರೆ ಎಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ. –  ಗುರುದೇವ ಡಾ. ಕಾಟೇಸ್ವಾಮಿ (ಸಂದರ್ಭ : ಮಾಸಿಕ ಘನಗರ್ಜಿತ, ಏಪ್ರಿಲ್ ೨೦೧೮)