ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ೨೨ ನೇ ವರ್ಧಂತ್ಯುತ್ಸವವು ಆನ್‌ಲೈನ್ ಮೂಲಕ ಉತ್ಸಾಹದಿಂದ ಆಚರಣೆ

ವಾಚಕರು, ಗಣ್ಯರು ಮತ್ತು ಸಂತರಿಂದ ಮಾರ್ಗದರ್ಶನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇವರಿಂದ ಶುಭಸಂದೇಶ

೩೦ ಸಾವಿರ ಜನರಿಂದ ಆನ್‌ಲೈನ್ ಕಾರ್ಯಕ್ರಮ ವೀಕ್ಷಣೆ

ಫೇಸಬುಕ್‌ನಲ್ಲಿ ೮೩ ಸಾವಿರ ಜನರ ತನಕ ತಲುಪಿತು (ರೀಚ್)

ಸನಾತನ ಪ್ರಭಾತದ ಫೇಸಬುಕ್ ಖಾತೆಗೆ ೨೦೦ ಜನರ ಸೇರ್ಪಡೆ ಹಾಗೂ ಸನಾತನದ ‘ಯೂಟ್ಯೂಬ್’ಗೇ ೭೦೦ ಜನರ ಸೇರ್ಪಡೆ

ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ದೀಪಪ್ರಜ್ವಲನೆ ಮಾಡುತ್ತಿರುವ ಪೂ. ರಮಾನಂದ ಗೌಡ

ಮಂಗಳೂರು – ಕನ್ನಡ ಭಾಷೆಯ ಸಾಪ್ತಾಹಿಕ ಸನಾತನ ಪ್ರಭಾತದ ೨೨ ನೇ ವರ್ಧಂತ್ಯುತ್ಸವದಿನವನ್ನು ಆನ್‌ಲೈನ್‌ಕಾರ್ಯಕ್ರಮದ ಮೂಲಕ ಉತ್ಸಾಹದಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯೆಂದು ದಕ್ಷಿಣ ಕನ್ನಡ ಜಿಲ್ಲೆಯ ಕರಿಂಜೆ ಮಠದ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ, ಸನಾತನದ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ, ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ್, ಯುವಾ ಬ್ರಿಗೇಡ್‌ನ ಸಂಸ್ಥಾಪಕರಾದ ಶ್ರೀ. ಚಕ್ರವರ್ತಿ ಸೂಲಿಬೆಲೆ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕಾರದ ಶ್ರೀ. ಗುರುಪ್ರಸಾದ ಗೌಡ ಹಾಗೂ ಹಾಗೂ ಸನಾತನ ಪ್ರಭಾತದ ಮುಖ್ಯ ಪ್ರತಿನಿಧಿ ಶ್ರೀ. ಪ್ರಶಾಂತ ಹರಿಹರ ಇವರು ಮಾರ್ಗದರ್ಶನ ಮಾಡಿದರು. ಈ ಕಾರ್ಯಕ್ರಮಕ್ಕೆ ರಾಜ್ಯದ ದಿನಪತ್ರಿಕೆಗಳು ಪ್ರಸಿದ್ಧಿ ನೀಡಿದವು. ಫೇಸಬಕ್ ಹಾಗೂ ಯೂಟ್ಯೂಬ್ ಮೂಲಕ ಈ ಕಾರ್ಯಕ್ರಮವನ್ನು ೩೦ ಸಾವಿರಕ್ಕೂ ಹೆಚ್ಚು ಧರ್ಮಪ್ರೇಮಿಗಳು ವೀಕ್ಷಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಪೂ. ರಮಾನಂದ ಗೌಡ ಇವರು ದೀಪಪ್ರಜ್ವಲನೆ ಮಾಡಿದರು. ಹಾಗೂ ಸಾಪ್ತಾಹಿಕ ಸನಾತನ ಪ್ರಭಾತದ ವರ್ಧಂತ್ಯುತ್ಸವದ ವಿಶೇಷ ಸ್ಮರಣಿಕೆಯನ್ನು ಬಿಡುಗಡೆ ಮಾಡಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇವರು ಶುಭಸಂದೇಶ ನೀಡಿದ್ದರು. ಅಲ್ಲದೇ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವಿರೇಂದ್ರ ಹೆಗಡೆ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶಿವಮೊಗ್ಗದ ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂ. ಸ್ವಾಮೀ ವಿನಯಾನಂದ ಸರಸ್ವತಿಯವರು, ಹಳದೀಪುರ ಮಠದ ಶ್ರೀ ವಾಮನಾಶ್ರಮ ಸ್ವಾಮೀಜಿಯವರು ಕಳುಹಿಸಿದ ಸಂದೇಶ ಓದಿ ಹೇಳಲಾಯಿತು.

ಸನಾತನ ಪ್ರಭಾತ ವರ್ಧಂತ್ಯುತ್ಸವಕ್ಕೆ ಸಂತರ ಆಶೀರ್ವಾದ ಮತ್ತು ಗಣ್ಯರ ಶುಭ ಹಾರೈಕೆ

ಸನಾತನ ಪ್ರಭಾತವು ೨೨ ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದು ಸಂತಸದ ಸಂಗತಿ ! – ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಕಳೆದ ಎರಡು ದಶಕಗಳಿಂದ ಕನ್ನಡ, ಹಿಂದಿ, ಆಂಗ್ಲ ಹಾಗೂ ಮರಾಠಿ ಭಾಷೆಗಳಲ್ಲಿ ರಾಷ್ಟ್ರಾದ್ಯಂತ ಅವಿರತವಾಗಿ ರಾಷ್ಟ್ರ ಜಾಗೃತಿ, ಧರ್ಮಜಾಗೃತಿ ಮತ್ತು ಸಮಾಜಮುಖಿ ಕಾರ್ಯವನ್ನು ಮಾಡುತ್ತಿದೆ. ನಮ್ಮನ್ನು ಸಾಧನೆಯ ಮಾರ್ಗದ ಕಡೆ ಕೊಂಡೊಯ್ಯು ವುದಲ್ಲದೆ ನಮ್ಮ ಬದುಕಿನ ಸಾರ್ಥಕತೆಗೆ ಕಾರಣವಾಗುವ ಕುರಿತ ಅರ್ಥಪೂರ್ಣ ಲೇಖನಗಳು ಧರ್ಮಶಿಕ್ಷಣದ ಮಾಹಿತಿ, ಆಧ್ಯಾತ್ಮಿಕ ಸಾಧನೆ, ಸಂಸ್ಕಾರ, ಆಯುರ್ವೇದ ಮುಂತಾದ ಮಾಹಿತಿ ನೀಡಿ, ಜನರಲ್ಲಿ ಧರ್ಮಾಭಿಮಾನ ಮೂಡಿಸುವಲ್ಲಿ ಪತ್ರಿಕೆ ಸಫಲವಾಗಿರುವುದು ಶ್ಲಾಘನೀಯ.

ಧರ್ಮಜಾಗೃತಿಯ ಕಾರ್ಯವನ್ನು ಸನಾತನ ಪ್ರಭಾತ ಪತ್ರಿಕೆಯು ಅನವರತ ಮುಂದುವರೆಸಲಿ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ ಎಂದು ಹಾರೈಸುತ್ತೇನೆ. – ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿಗಳು ಕರ್ನಾಟಕ ಸರಕಾರ.

ಸನಾತನ ಪ್ರಭಾತ ಎಲ್ಲ ವರ್ಗದ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ – ಡಾ. ಡಿ. ವೀರೇಂದ್ರ ಹೆಗ್ಗಡೆ

ಡಾ. ಡಿ. ವೀರೇಂದ್ರ ಹೆಗ್ಗಡೆ

‘ಸನಾತನ ಪ್ರಭಾತ ಪತ್ರಿಕೆಯು ಯಶಸ್ವಿಯಾಗಿ ೨೨ ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿದ್ದು ವಾರ್ಷಿಕೋತ್ಸವವನ್ನು ಆಚರಿಸಲಿರುವ ವಿಚಾರ ತಿಳಿದು ಸಂತೋಷವಾಯಿತು. ವಾರ್ಷಿಕೋತ್ಸವ ಸಮಾರಂಭವು ಸರ್ವರೀತಿಯಿಂದಲೂ ಯಶಸ್ವಿಯಾಗಿ ನೆರವೇರಲೆಂದು ಹಾರೈಸುತ್ತೇನೆ.

ಸಾಮಾಜಿಕ ಕಳಕಳಿಯೊಂದಿಗೆ ಓದುಗರಿಗೆ ಉಪಯುಕ್ತವಾದ ಮಾಹಿತಿ, ಮಾರ್ಗದರ್ಶನ ನೀಡುವುದರ ಜೊತೆಗೆ ಆಧ್ಯಾತ್ಮಿಕ ಉನ್ನತಿ ಹಾಗೂ ಧರ್ಮಜಾಗೃತಿಯ ಲೇಖನಗಳನ್ನು ಪ್ರಕಟಿಸು ತ್ತಿರುವುದು ಸ್ತುತ್ಯಾರ್ಹವಾಗಿದೆ. ನಿಮ್ಮ ಪತ್ರಿಕೆ ಎಲ್ಲಾ ವರ್ಗದ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಅಭಿನಂದನೆಗಳು. ಸಹೃದಯ ಓದುಗರ ಪ್ರೋತ್ಸಾಹ-ಸಹಕಾರದೊಂದಿಗೆ ಪತ್ರಿಕೆ ಉತ್ತರೋತ್ತರ ಪ್ರಗತಿಯನ್ನು ಸಾಧಿಸುವಂತೆ ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ. – ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರಧರ್ಮಸ್ಥಳ

ಸನಾತನ ಪ್ರಭಾತ ಭಾರತ ಮಾತೆಯ ಬಹುದೊಡ್ಡ ಸೇವೆ ಮಾಡುತ್ತಿದೆ – ಶ್ರೀ ವಿಶ್ವಪ್ರಸನ್ನ ತೀರ್ಥರು

ಶ್ರೀ ವಿಶ್ವಪ್ರಸನ್ನ ತೀರ್ಥರು

ಕಳೆದ ೨೨ ವರ್ಷಗಳಿಂದ ನಮ್ಮ, ನಾಡು, ನುಡಿಗಳ ಬಗ್ಗೆ ಜನಜಾಗೃತಿ, ದೈನಂದಿನ ಜೀವನ, ವ್ಯವಹಾರದಲ್ಲಿ ಧರ್ಮಾಚರಣೆ ಮಾಡುವುದು, ಹಬ್ಬ-ಉತ್ಸವಗಳನ್ನು ಹೇಗೆ ಆಚರಿಸಬೇಕು. ಶ್ರೀರಾಮ ಜನ್ಮಭೂಮಿಯ ಕಾರ್ಯ, ಹೀಗೆ ಹಲವು ಮುಖಗಳ ಮೂಲಕ ಸನಾತನ ಪ್ರಭಾತವು ಭಾರತ ಮಾತೆಯ ಬಹುದೊಡ್ಡ ಸೇವೆಯನ್ನು ಮಾಡುತ್ತಿದೆ. ಶ್ರೀ ವಿಶ್ವಪ್ರಸನ್ನ ತೀರ್ಥರು, ಪೇಜಾವರ ಮಠ, ಉಡುಪಿ

ಹಿಂದೂ ರಾಷ್ಟ್ರದ ಕಾರ್ಯಕ್ಕೆ ಅಧ್ಯಾತ್ಮದ ತಳಹದಿಯನ್ನು ಸನಾತನ ಪ್ರಭಾತ ನೀಡುತ್ತಿದೆ – ಶ್ರೀ. ಪ್ರಮೋದ್ ಮುತಾಲಿಕ

ಶ್ರೀ.ಪ್ರಮೋದ ಮುತಾಲಿಕ್

ಸನಾತನ ಪ್ರಭಾತವು ಹಿಂದೂ ರಾಷ್ಟ್ರದ ಬಗ್ಗೆ ಹಳ್ಳಿಗಳಲ್ಲಿ ಜನಜಾಗೃತಿ ಮೂಡಿಸುವುದು, ಅಧ್ಯಾತ್ಮ, ರಾಷ್ಟ್ರೀಯತೆ, ಧರ್ಮಶಿಕ್ಷಣ, ರಾಜಕೀಯದಿಂದ ಧರ್ಮದ ಮೇಲಾಗುವ ಹಾನಿ, ಹೀಗೆ ಮುಂತಾದವುಗಳ ಬಗ್ಗೆ ಪಕ್ಷಭೇದ ಮರೆತು ಜನಜಾಗೃತಿ ಮೂಡಿಸುವ ಮೂಲಕ ರಾಷ್ಟ್ರರಕ್ಷಣೆ ಕಾರ್ಯ ಮಾಡುತ್ತಿದೆ. ಹಿಂದೂಗಳಿಗೆ ಹಿಂದೂ ರಾಷ್ಟ್ರ ಏಕೆ ಬೇಕು ? ಹೇಗೆ ಹೋರಾಟ ಮಾಡಬೇಕು ? ಮುಂತಾದವುಗಳ ವೈಚಾರಿಕ ಶಕ್ತಿಯನ್ನು ನೀಡುತ್ತದೆ. ಹಿಂದೂ ರಾಷ್ಟ್ರದ ಕಾರ್ಯಕ್ಕೆ ಅಧ್ಯಾತ್ಮದ ತಳಹದಿಯನ್ನು ನೀಡಲು ಕಾರ್ಯಕರ್ತರಿಗೆ ಧರ್ಮಶಿಕ್ಷಣ ನೀಡುತ್ತಿದೆ.

ಹಿಂದೂಗಳ ಮೇಲಾಗುತ್ತಿರುವ ಆನ್ಯಾಯದ ಬಗ್ಗೆ ಧ್ವನಿಯೆತ್ತುವ ಏಕೈಕ ಪತ್ರಿಕೆ ಸನಾತನ ಪ್ರಭಾತ – ಚಕ್ರವರ್ತಿ ಸೂಲಿಬೆಲೆ

ಶ್ರೀ. ಚಕ್ರವರ್ತಿ ಸೂಲಿಬೆಲೆ

ಯಾವುದೇ ಉದ್ಯಮಿ, ಪಕ್ಷದ ಬೆಂಬಲ ಇಲ್ಲದೇ, ಕೇವಲ ಭಗವಂತನ ಕೃಪೆಯಿಂದ ಕಳೆದ ೨೨ ವರ್ಷಗಳಿಂದ ಅತ್ಯಂತ ಸ್ಷಷ್ಟವಾಗಿ ಹಿಂದೂ ರಾಷ್ಟ್ರದ ಬಗ್ಗೆ, ಹಿಂದೂಗಳ ಮೇಲೆ ಆಗುತ್ತಿರುವ ಆನ್ಯಾಯದ ಬಗ್ಗೆ ಧ್ವನಿಯೆತ್ತುವ ಏಕೈಕ ಪತ್ರಿಕೆ ಸನಾತನ ಪ್ರಭಾತ ಆಗಿದೆ ಎಂದು ಹೇಳಲು ಹೆಮ್ಮೆ ಅನ್ನಿಸುತ್ತದೆ.

ಓದುಗರ ಸಾಧನೆ ಮಾಡಿಸುವ ಏಕೈಕ ಪತ್ರಿಕೆ ಸನಾತನ ಪ್ರಭಾತ – ಪೂ. ರಮಾನಂದ ಗೌಡ

ಪೂ. ರಮಾನಂದ ಗೌಡ

ಸನಾತನ ಪ್ರಭಾತವು ರಾಷ್ಟ್ರ ಮತ್ತು ಧರ್ಮ ಜಾಗೃತಿಯ ಜೊತೆಗೆ ಆಧ್ಯಾತ್ಮಿಕ ಸಾಧನೆ, ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆಯ ಪ್ರಕ್ರಿಯೆಯ ಮಹತ್ವ, ಆಧ್ಯಾತ್ಮಿಕ ಪ್ರಗತಿ ಮಾಡಿಕೊಳ್ಳುವುದರ ಬಗ್ಗೆ ಮಾರ್ಗದರ್ಶನ ಮಾಡುತ್ತಾ, ಅನೇಕ ಓದುಗರು ಸಾಧನೆಯನ್ನು ಮಾಡಿ ಆಧ್ಯಾತ್ಮಿಕ ಪ್ರಗತಿ ಮಾಡಿಕೊಂಡಿದ್ದಾರೆ ಕಾಶ್ಮೀರ ಹಿಂದೂಗಳ ಸಮಸ್ಯೆ, ದೇವಸ್ಥಾನಗಳ ಸರಕಾರೀಕರಣ, ಹಲಾಲ್ ಪ್ರಮಾಣ ಪತ್ರ, ಅಂಧಶ್ರದ್ಧೆ ನಿರ್ಮೂಲನೆ ಕಾಯಿದೆ ಮುಂತಾದ ಧರ್ಮಹಾನಿ ಘಟನೆಗಳ ಸಂದರ್ಭದಲ್ಲಿ ಅಭೂತಪೂರ್ವ ಜನಜಾಗೃತಿ ಕಾರ್ಯವನ್ನು ಸನಾತನ ಪ್ರಭಾತವು ಮಾಡಿದೆ.

ಹಿಂದೂ ರಾಷ್ಟ್ರದ ಸ್ಥಾಪನೆಯ ದಿಶೆಯಲ್ಲಿ ಮುನ್ನಡೆಯುವುದು ಖಂಡಿತವಾಗಿಯೂ ಸುಲಭವಲ್ಲ – ಶ್ರೀ. ಗುರುಪ್ರಸಾದ ಗೌಡ

ಶ್ರೀ. ಗುರುಪ್ರಸಾದ ಗೌಡ

ಹಿಂದೂಗಳನ್ನು ಮಾನಸಿಕವಾಗಿ ದುರ್ಬಲಗೊಳಿಸಲು ತಥಾಕಥಿತ ಪ್ರಗತಿಪರರು, ಸುಧಾರಣಾವಾದಿಗಳು, ಬುದ್ಧಿವಾದಿಗಳು, ಸಾಮ್ಯವಾದಿಗಳು ಪ್ರಯತ್ನಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ‘ಸನಾತನ ಪ್ರಭಾತ ಒಬ್ಬ ನಿರ್ಭೀತ ಸೈನಿಕನಂತೆ ಈ ಎಲ್ಲ ಹಿಂದೂದ್ವೇಷಿಗಳ ಮೇಲೆ ಶಬ್ದಗಳ ಪ್ರಹಾರ ನಡೆಸುತ್ತಿದೆ. ಹಿಂದೂ ರಾಷ್ಟ್ರದ ಸ್ಥಾಪನೆಯ ದಿಶೆಯಲ್ಲಿ ಮುನ್ನಡೆಯುವುದು ಖಂಡಿತವಾಗಿಯೂ ಸುಲಭವಲ್ಲ.

ವಾಚಕರನ್ನು ಕಾಲಾನುಸಾರ ಜಾಗೃತಿ ಮೂಡಿಸುವ ಪತ್ರಿಕೆ ಸನಾತನ ಪ್ರಭಾತ – ಪ್ರಶಾಂತ ಹರಿಹರ

ಶ್ರೀ. ಪ್ರಶಾಂತ ಹರಿಹರ

ಕಳೆದ ಕೆಲವು ವರ್ಷಗಳಿಂದ ‘ಸನಾತನ ಪ್ರಭಾತದಲ್ಲಿ ಒಂದು ಸಂಪಾದಕೀಯ ಟಿಪ್ಪಣಿಯನ್ನು ಓದಿರಬಹುದು, ‘ಇದೇ ನೋಡಿ ‘ಸನಾತನ ಪ್ರಭಾತ ಹೇಳುತ್ತಿದ್ದ ಕೆಟ್ಟ ಕಾಲ ! ಈ ಟಿಪ್ಪಣಿಯನ್ನು ಎಲ್ಲರೂ ಓದಿರಬಹುದು. ಅಲ್ಲದೇ ಮುಂದೆ ‘ಆಪತ್ಕಾಲ ಬರಲಿದೆ, ಎಂದು ‘ಸನಾತನ ಪ್ರಭಾತದಲ್ಲಿ ಅನೇಕ ವರ್ಷಗಳಿಂದ ಹೇಳಲಾಗುತ್ತಿತ್ತು. ‘ಸನಾತನ ಪ್ರಭಾತವು ‘ಕಾಲದ ವೇಗವನ್ನು ನಿಖರವಾಗಿ ಗುರುತಿಸಿ ವಾಚಕರನ್ನು ಜಾಗರೂಕಗೊಳಿಸುತ್ತದೆ ಎಂದು ವಾಚಕರು ತಿಳಿಸುವಾಗ ನಾವು ವಾಚಕರಿಗಾಗಿ ಒಳಿತು ಮಾಡಿದ ಬಗ್ಗೆ ಆನಂದವಾಗುತ್ತದೆ.