ಹವಾಮಾನ ಬದಲಾವಣೆ ಮತ್ತು ಜೈವಿಕ ಭಯೋತ್ಪಾದನೆಗಳಿಂದ ಭವಿಷ್ಯದಲ್ಲಿ ಲಕ್ಷಾಂತರ ಜನರು ಮೃತಪಡುವರು ! – ಬಿಲ್ ಗೇಟ್ಸ್ ಎಚ್ಚರಿಕೆ

ಅನೇಕ ಸಂತರು, ಮಹಾತ್ಮರು ಮತ್ತು ಭವಿಷ್ಯಕಾರರು ಮುಂಬರುವ ಭೀಕರ ಕಾಲದ ಬಗ್ಗೆ ಹೇಳುತ್ತಿದ್ದಾರೆ. ಆದ್ದರಿಂದ, ಸಮಾಜವು ಈಗಲಾದರೂ ಎಚ್ಚೆತ್ತುಕೊಂಡು ಮುಂಬರುವ ಸಂಕಟಕಾಲದಿಂದ ಪಾರಾಗಲು ಸಾಧನೆ ಮಾಡುವುದರ ಅನಿವಾರ್ಯತೆಯನ್ನು ಅರಿತುಕೊಳ್ಳಬೇಕು !

ನವ ದೆಹಲಿ: ಭವಿಷ್ಯದಲ್ಲಿ ಹವಾಮಾನ ಬದಲಾವಣೆ ಮತ್ತು ಜೈವಿಕ ಭಯೋತ್ಪಾದನೆಯು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಕೊಲ್ಲುತ್ತದೆ. ಜಗತ್ತನ್ನು ಕೊನೆಗೊಳಿಸುವ ಉದ್ದೇಶದಿಂದ ಯಾರಾದರೂ ಹೊಸ ವೈರಸ್ ಅನ್ನು ಉತ್ಪಾದಿಸಬಹುದು. ಸದ್ಯ ಜಗತ್ತಿನಾದ್ಯಂತ ಚರ್ಚಿಸಲಾಗುತ್ತಿರುವ ಕೊರೋನಾ ವೈರಸ್‌ಗಿಂತಲೂ ಇವೆರಡು ವಿಷಯಗಳು ಜಗತ್ತಿನಾದ್ಯಂತ ಹಾಹಾಕಾರ ಮೂಡಿಸುವುದು, ಎಂದು ಮೈಕ್ರೋಸಾಫ್ಟ್‌ನ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಭವಿಷ್ಯ ನುಡಿದಿದ್ದಾರೆ. ಅವರು ಯೂಟ್ಯೂಬ್ ಚಾನಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡುತ್ತಿದ್ದರು. ೫-೬ ವರ್ಷಗಳ ಹಿಂದೆ, ಬಿಲ್ ಗೇಟ್ಸ್ ಕೊರೋನಾದಂತಹ ಸಾಂಕ್ರಾಮಿಕ ರೋಗ ಬಂದೆರಗುವ ಭವಿಷ್ಯ ನುಡಿದಿದ್ದರು. ಅದಕ್ಕಾಗಿಯೇ ಗೇಟ್ಸ್ ಅವರ ಹೊಸ ಭವಿಷ್ಯವು ಕಳವಳವನ್ನು ಉಂಟುಮಾಡುತ್ತಿದೆ.

ಬಿಲ್ ಗೇಟ್ಸ್‌ರವರು ಮುಂದೆ ಮಾತನಾಡುತ್ತಾ, ಯಾವುದೇ ಸಾಂಕ್ರಾಮಿಕ ರೋಗವನ್ನು ವಿಶ್ವಾದ್ಯಂತ ಹರಡುವುದನ್ನು ತಡೆಯಲು ಸಾಧ್ಯವಿಲ್ಲ. ನಾವು ಅಂತಹ ಬಿಕ್ಕಟ್ಟುಗಳನ್ನು ಎದುರಿಸಲು ಮೊದಲಿನಿಂದಲೂ ಸಿದ್ಧರಿರುವುದೊಂದೇ ಮಾರ್ಗವಾಗಿದೆ. ಶ್ವಸನಾಂಗ ವ್ಯೂಹಕ್ಕೆ ತಗಲುವ ವೈರಸ್‌ಗಳು ತುಂಬಾ ಅಪಾಯಕಾರಿ. ಅಂತಹ ವೈರಸ್‌ಗಳು ಕೆಲವು ಸಮಯದ ನಂತರ ಸಾಂಕ್ರಾಮಿಕವಾಗಿ ಹರಡುತ್ತವೆ. ಅನೇಕಬಾರಿ ಇವುಗಳಲ್ಲಿ ಅನೇಕ ವೈರಸ್‌ಗಳ ಸಂಸರ್ಗವಾದ ನಂತರವೂ ಏನೂ ವಿಶೇಷ ಬದಲಾವಣೆ ಗಮನಕ್ಕೆ ಬಾರದ ಕಾರಣ ಅದರ ಬಗ್ಗೆ ತಿಳಿಯುವುದಿಲ್ಲ. ಆದರೆ ಅದೇ ಸಮಯದಲ್ಲಿ, ಎಬೋಲಾದಂತಹ ಕಾಯಿಲೆ ಇರುವ ವ್ಯಕ್ತಿಯನ್ನು ನೇರವಾಗಿ ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ.