ದೆಹಲಿ ಸ್ಫೋಟದ ಹೊಣೆ ಹೊತ್ತ ಜೈಶ್-ಉಲ್-ಹಿಂದ್ ಅಲ್ಲಾಹನ ಕೃಪೆ ಮತ್ತು ಸಹಾಯದಿಂದ ಸ್ಫೋಟ ಮಾಡಲು ಸಾಧ್ಯವಾಯಿತು!

ನವ ದೆಹಲಿ: ರಾಜಧಾನಿಯಲ್ಲಿರುವ ಇಸ್ರೇಲಿ ರಾಯಭಾರಿ ಕಚೇರಿಯ ಮುಂದೆ ನಡೆದ ಸ್ಫೋಟವನ್ನು ತಾವೇ ನಡೆಸಿರುವುದಾಗಿ ಜೈಶ್-ಉಲ್-ಹಿಂದ್ ಉಗ್ರ ಸಂಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದೆ. ಭದ್ರತಾ ಪಡೆಗಳು ಈ ದಾವೆಯ ಬಗ್ಗೆ ತಪಾಸಣೆಯನ್ನು ಪ್ರಾರಂಭಿಸಿವೆ. ’ಟೆಲಿಗ್ರಾಮ್’ ನಲ್ಲಿ ಇಬ್ಬರು ಜನರ ನಡುವಿನ ಸಂಭಾಷಣೆಯು ಭದ್ರತಾ ಪಡೆಗಳಿಗೆ ಸಿಕ್ಕಿದೆ. ಅದರಲ್ಲಿ, ‘ಸರ್ವಶಕ್ತನಾದ ಅಲ್ಲಾಹ್’ ಕೃಪೆಯಿಂದ ಮತ್ತು ಸಹಾಯದಿಂದ ಜೈಶ್-ಉಲ್-ಹಿಂದ್ ಪಡೆಗಳು ಭದ್ರಕೋಟೆಯಾದ ದೆಹಲಿಯ ಆ ಪ್ರದೇಶವನ್ನು ಪ್ರವೇಶಿಸಿದವು. ಅವರು ಐಇಡಿಯನ್ನು ಸ್ಫೋಟಿಸಿದ್ದಾರೆ. ಭಾರತದ ಪ್ರಮುಖ ನಗರಗಳ ಮೇಲಿನ ದಾಳಿಯ ನಾಂದಿಯಾಗಿದೆ.

 

(ಸೌಜನ್ಯ : Crime Tak English)

ಇದು ಭಾರತ ಸರಕಾರದಿಂದ ನಡೆಯುತ್ತಿರುವ ದೌರ್ಜನ್ಯಕ್ಕೆ ಪ್ರತೀಕಾರವಾಗಿದೆ” ಎಂದು ಸಂಭಾಷಣೆಯಲ್ಲಿ ಹೇಳಲಾಗಿದೆ. ಸ್ಫೋಟದಲ್ಲಿ ಯಾವ ರೀತಿಯ ವಸ್ತುಗಳನ್ನು ಬಳಸಲಾಗಿದೆ ಎಂದು ಕಂಡು ಹಿಡಿಯಲು ರಾಷ್ಟ್ರೀಯ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ.