೧. ಹಿಂದೂಗಳೇ, ಹಿಂದಿನಿಂದ ಆಕ್ರಮಣ ಮಾಡುವ ಅಫ್ಝಲ್‌ಖಾನ್‌ನ ಕರುಳುಗಳನ್ನು ಹೊರಗೆ ತೆಗೆಯುವ ಶಿವಾಜಿ ಮಹಾರಾಜರ ಇತಿಹಾಸವನ್ನು ಸದಾ ಸ್ಮರಣೆಯಲ್ಲಿಡಿ !
‘ಕೆಲವು ದಿನಗಳ ಹಿಂದೆ ದ್ವಿಚಕ್ರವಾಹನದಿಂದ ಪ್ರವಾಸ ಮಾಡುವ ಇಬ್ಬರು ಹಿಂದುತ್ವನಿಷ್ಠರ ಮೇಲೆ ಮತಾಂಧರು ಖಡ್ಗದಿಂದ ಹಿಂದಿನಿಂದ ಹಲ್ಲೆ ಮಾಡಿದರು. ಈ ಘಟನೆಯನ್ನು ಓದಿ ನನ್ನ ಮನಸ್ಸಿನಲ್ಲಿ, ‘ಆ ಮತಾಂಧರು ತಮ್ಮ ಪೂರ್ವಜನಾದ ಅಫ್ಝಲ್ ಖಾನನಿಂದಲೇ ಬೋಧವನ್ನು ಪಡೆದಿರಬೇಕು ಎಂದು ಅನಿಸಿತು; ಆದರೆ ಆ ಇಬ್ಬರು ಬಡಪಾಯಿ ಹಿಂದುತ್ವನಿಷ್ಠರಿಗೆ, ಮಾತ್ರ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.’ ಈ ಮತಾಂಧರು ಅಫ್ಝಲ್‌ಖಾನನ ಪ್ರವೃತ್ತಿಗನುಸಾರ ಹಿಂದಿನಿಂದ ಆಕ್ರಮಣ ಮಾಡುವುದನ್ನು ಇಂದಿಗೂ ಮರೆತಿಲ್ಲ. ಆದರೆ ನಮ್ಮ ಶ್ರೇಷ್ಠ ಪೂರ್ವಜರಾದ ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಮೇಲೆ ಹಿಂದಿನಿಂದ ಹಲ್ಲೆ ಮಾಡುವ ಅಫ್ಝಲ್‌ಖಾನ್‌ನ ಕರಳುಗಳನ್ನು ಹೊರಗೆ ತೆಗೆದ ಇತಿಹಾಸವನ್ನು ಹಿಂದೂಗಳು ಏಕೆ ಮರೆತಿದ್ದಾರೆ ?’ ಎಂಬ ವಿಚಾರ ಬಂದಿತು.
೨. ಶಿವಾಜಿ ಮಹಾರಾಜರ ಬಳಿ ನಿಖರವಾಗಿ ಯಾವ ಚಿಲಕತ್ತಿತ್ತು ರಕ್ಷಾಕವಚವಿತ್ತು ?
ಯಾವ ಅಫ್ಝಲ್‌ಖಾನನು ತನ್ನ ಎರಡೂ ಕೈಗಳಿಂದ ದಪ್ಪನೆಯ ಕಬ್ಬಿಣದ ಹಾರೆಯನ್ನು ಸಹಜವಾಗಿ ಬಗ್ಗಿಸುತ್ತಿದ್ದನೋ, ಅವನ ಕತ್ತಿ ಶಿವಾಜಿ ಚಿಲಕತ್ತನ್ನು ಏಕೆ ಭೇದಿಸಲಿಲ್ಲ? ಶಿವಾಜಿಯ ಜೀವನ ಚರಿತ್ರೆ ಯನ್ನು ಓದಿದ ನಂತರ ಅಫ್ಝಲ್ ಖಾನ್‌ನ ವಧೆಯ ಪ್ರಸಂಗವಿರಲಿ ಅಥವಾ ಔರಂಗಜೇಬನ ಕಣ್ಗಾವಲಿಯಿಂದ ಹೊರ ಬೀಳುವ ಪ್ರಸಂಗವಿರಲಿ, ಹಾಗೆಯೇ ಶಿವಾಜಿ ಮಹಾರಾಜರು ಮಾಡಿದ ಐದು ಬಾದಶಾಹರ ಸಂಹಾರವಾಗಿರಲಿ. ಹೀಗೆ ಎಷ್ಟೋ ಪ್ರಸಂಗಗಳು ಮಹಾರಾಜರ ಮೇಲೆ ಬಂದೆರಗಿದವು; ಆದರೆ ಪ್ರತಿಯೊಂದು ಸಲ ಅವರು ಮೃತ್ಯುವಿನ ದವಡೆಯಿಂದ ಸುಖವಾಗಿ ಹೊರಗೆ ಬಂದರು, ಅದು ಅವರ ಬಳಿಯಿರುವ ಚಿಲಕತ್ತಿನಿಂದಾಗಿಯೇ ! ಹಾಗಾದರೆ ಈ ಚಿಲಕತ್ತು ಯಾವುದರದ್ದಾಗಿತ್ತು ? ಮುಂದಿನ ಘಟನೆಯನ್ನು ಓದಿದ ನಂತರ ಶಿವಾಜಿ ರಕ್ಷಣೆಯನ್ನು ಮಾಡುವ ಆ ಚಿಲಕತ್ತಿನ ವೈಶಿಷ್ಟ್ಯವು ಗಮನಕ್ಕೆ ಬರುವುದು.
೩. ತುಕಾರಾಮ ಮಹಾರಾಜರು ಜೀವನದಲ್ಲಿ ಮೊದಲ ಬಾರಿಗೆ ಮತ್ತು ಅದೂ ಶಿವಾಜಿಯ ರಕ್ಷಣೆಗಾಗಿ ವಿಠ್ಠಲನ ಚರಣಗಳಲ್ಲಿ ಆರ್ತತೆಯಿಂದ ಪ್ರಾರ್ಥನೆ ಮಾಡುವುದು
ಒಂದು ಸಲ ಛತ್ರಪತಿ ಶಿವಾಜಿ ಮಹಾರಾಜರು ಸಂತ ತುಕಾರಾಮ ಮಹಾರಾಜರ ಕೀರ್ತನೆಯನ್ನು ಕೇಳಲು ಶ್ರೀ ವಿಠ್ಠಲನ ದೇವಸ್ಥಾನಕ್ಕೆ ಹೋಗಿದ್ದರು. ಅದರ ಬಗ್ಗೆ ಮೊಗಲರಿಗೆ ತಿಳಿದಾಗ ಅವರು ತಕ್ಷಣ ಸಂಪೂರ್ಣ ದೇವಸ್ಥಾನವನ್ನೇ ಸುತ್ತುವರಿದರು. ಕೀರ್ತನೆ ನಡೆಯುತ್ತಿರುವಾಗ ಇದರ ಬಗ್ಗೆ ಸಂತ ತುಕಾರಾಮ ಮಹಾರಾಜರಿಗೆ ತಿಳಿಯಿತು, ತಕ್ಷಣ ಅವರು ಜೀವನದಲ್ಲಿ ಮೊದಲ ಬಾರಿಗೆ ವಿಠ್ಠಲನ ಚರಣಗಳಲ್ಲಿ, ‘ಶಿವಾಜಿ ಮಹಾರಾಜರು ಮೊಗಲರ ಮುತ್ತಿಗೆಯಿಂದ ಸುಖವಾಗಿ ಪಾರಾಗಲಿ’, ಎಂದು ಪ್ರಾರ್ಥನೆ ಮಾಡಿದರು. ಆಗ ವಿಠ್ಠಲನು ಮೊಗಲರ ಸೈನಿಕರಿಗೆ ದೇವಸ್ಥಾನದಲ್ಲಿ ಪ್ರತಿಯೊಬ್ಬ ಭಕ್ತರ ಸ್ಥಾನದಲ್ಲಿ ಶಿವಾಜಿಯ ಪ್ರತಿರೂಪವನ್ನು ತೋರಿಸಿದನು. ಇದರಿಂದ ಮೊಗಲರಿಗೆ ನಿಜವಾದ ಶಿವಾಜಿಯನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಈ ರೀತಿ ಶಿವಾಜಿ ಮಹಾರಾಜರಿಗೆ ಮೊಗಲರ ಮುತ್ತಿಗೆಯಿಂದ ಸುಖವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಯಿತು.
ಆ ಪ್ರಸಂಗದಿಂದ ಹಿಡಿದು ಕೊನೆಯವರೆಗೆ ಶಿವಾಜಿ ಮಹಾರಾಜರಿಗೆ ಅವರ ಗುರುಗಳಾದ ಸಮರ್ಥ ರಾಮದಾಸಸ್ವಾಮಿಗಳು ಮತ್ತು ಸಂತ ತುಕಾರಾಮ ಮಹಾರಾಜರ ಮೇಲೆ ದೃಢ ನಿಷ್ಠೆ ಇತ್ತು. ಅದರಿಂದಾಗಿಯೇ ಅವರ ಸುತ್ತಲೂ ರಕ್ಷಾಕವಚದ ಚಿಲಕತ್ತು ಸತತವಾಗಿ ಕಾರ್ಯನಿರತವಾಗಿತ್ತು. ನಾವೆಲ್ಲರು ನಮ್ಮ ಶ್ರೀ ಗುರುಗಳ ಮೇಲಿನ ಶ್ರದ್ಧೆ ಮತ್ತು ನಿಷ್ಠೆಯನ್ನು ದೃಢಗೊಳಿಸೋಣ. – ಶ್ರೀ. ಚೈತನ್ಯ ದೀಕ್ಷಿತ, ಸನಾತನ ಪುರೋಹಿತ ಪಾಠಶಾಲೆ, ರಾಮನಾಥಿ, ಫೋಂಡಾ, ಗೋವಾ (೧೯.೨.೨೦೧೮)