ಭೀಕರ ಆಪತ್ಕಾಲ ಆರಂಭವಾಗುವ ಮೊದಲೇ ಆವಶ್ಯಕತೆಗನುಸಾರ ಕಣ್ಣುಗಳ ಪರೀಕ್ಷಣೆಯನ್ನು ಮಾಡಿಸಿಕೊಳ್ಳಿರಿ ಮತ್ತು ಒಂದು ಹೆಚ್ಚುವರಿ ಕನ್ನಡಕವನ್ನೂ ತಯಾರಿಸಿಟ್ಟುಕೊಳ್ಳಿರಿ !

ಪರಾತ್ಪರ ಗುರು ಡಾ. ಆಠವಲೆ

‘ಜೀವನಾಡಿಪಟ್ಟಿಯ ಮೂಲಕ ಮಾರ್ಗದರ್ಶನ ಮಾಡುವ ಮಹರ್ಷಿಗಳು, ಹಾಗೆಯೇ ದಾರ್ಶನಿಕ ಸಂತರು ಹೇಳಿದಂತೆ ಶೀಘ್ರದಲ್ಲಿಯೇ ಭೀಕರ ಆಪತ್ಕಾಲ ಆರಂಭವಾಗಲಿದೆ. ಆಗ ಕಣ್ಣುಗಳ ಪರೀಕ್ಷಣೆ ಮಾಡಿಸಿಕೊಳ್ಳುವುದು, ಕಣ್ಣುಗಳ ಶಸ್ತ್ರಚಿಕಿತ್ಸೆಯನ್ನು (ಆಪರೇಶನ್) ಮಾಡಿಸಿಕೊಳ್ಳುವುದು ಕಠಿಣವಾಗುವುದು, ಹಾಗೆಯೇ ‘ಕನ್ನಡಕ ಕಳೆದು ಹೋಗುವುದು, ಅದರ ಗಾಜುಗಳು ಒಡೆಯುವುದು ಇಂತಹ ಸಮಸ್ಯೆಗಳು ಉದ್ಭವಿಸಿದರೆ ಕನ್ನಡಕವನ್ನು ತಯಾರಿಸಿಕೊಳ್ಳುವುದೂ ಕಠಿಣವಾಗಬಹುದು. ಆದ್ದರಿಂದ ಮೊದಲಿನಿಂದಲೇ ಕನ್ನಡಕವನ್ನು ಉಪಯೋಗಿಸುತ್ತಿರುವ ವ್ಯಕ್ತಿಗಳು ಕನಿಷ್ಠ ೬ ತಿಂಗಳುಗಳಿಂದ ಕಣ್ಣುಗಳ ಪರೀಕ್ಷಣೆಯನ್ನು ಮಾಡಿಸಿಕೊಳ್ಳದಿದ್ದಲ್ಲಿ, ಪರೀಕ್ಷಣೆಯನ್ನು ಮಾಡಿಸಿಕೊಳ್ಳಬೇಕು. ಅದರಂತೆ ಯಾರಿಗೆ ಕಣ್ಣುಗಳ ಬಗ್ಗೆ ಸ್ವಲ್ಪ ತೊಂದರೆಯ ಅರಿವಾಗುತ್ತಿದೆಯೋ, ಅವರೂ ಅದನ್ನು ದುರ್ಲಕ್ಷಿಸದೇ ಪರೀಕ್ಷಣೆಯನ್ನು ಮಾಡಿಸಿಕೊಳ್ಳಬೇಕು. ಮೋತಿಯಾಬಿಂದು (ಕಣ್ಣಿಗೆ ಪೊರೆ ಬರುವುದು), ಕಾಚಬಿಂದು (ಗ್ಲುಕೋಮಾ), ಇತ್ಯಾದಿಗಳ ಸಾಧ್ಯತೆಯಿದೆ ಎಂದು ಅನಿಸಿದರೆ ಶಸ್ತ್ರಚಿಕಿತ್ಸೆ ದೃಷ್ಟಿಯಿಂದ ಪರೀಕ್ಷಣೆಯನ್ನು ಮಾಡಿಸಿಕೊಳ್ಳಬೇಕು. ಕೇವಲ ಒಂದೇ ಕನ್ನಡಕ ಇರುವ ವ್ಯಕ್ತಿಗಳು ಅದೇ ‘ನಂಬರ್ನ ಇನ್ನೊಂದು ಹೆಚ್ಚುವರಿ ಕನ್ನಡಕವನ್ನು ತಯಾರಿಸಿಟ್ಟುಕೊಳ್ಳಬೇಕು.

(‘ಮುಂದೆ ಭೀಕರ ಆಪತ್ಕಾಲದಲ್ಲಿ ಆಹಾರಧಾನ್ಯಗಳು, ನೀರು, ವಿದ್ಯುತ್ ಹೀಗೆ ಅನೇಕ ವಿಷಯಗಳ ಅಭಾವದ ಅರಿವಾಗಬಾರದೆಂದು, ಈಗಿನಿಂದಲೇ ಪೂರ್ವತಯಾರಿಯನ್ನು ಹೇಗೆ ಮಾಡಬೇಕು, ಎಂಬುದನ್ನು ತಿಳಿದುಕೊಳ್ಳಲು ಸನಾತನದ ‘ಆಪತ್ಕಾಲದಲ್ಲಿ ಜೀವಂತವಾಗಿರಲು ದೈನಂದಿನ ಸ್ತರದಲ್ಲಿ ಸಿದ್ಧತೆ ಮಾಡಿ ! ಈ ಗ್ರಂಥಗಳ ಲಾಭವನ್ನು ಪಡೆಯಿರಿ !)

– (ಪರಾತ್ಪರ ಗುರು) ಡಾ. ಜಯಂತ ಆಠವಲೆ